Glass Bridge: ರಾಜಾಸೀಟ್‌ನಲ್ಲಿ ಗ್ಲಾಸ್ ಬ್ರಿಡ್ಜ್ ಯೋಜನೆ –ಪರಿಸರ ಪ್ರೇಮಿಗಳ ವಿರೋಧ – ಯೋಜನೆ ಕೈಬಿಟ್ಟ ಸರ್ಕಾರ

Share the Article

Glass Bridge: ಪ್ರವಾಸಿ ದೃಷ್ಟಿಕೋನಕ್ಕೆ ಮಾತ್ರವೇ ಸೀಮಿತವಾಗಿ ತೀವ್ರ ವಿರೋಧಗಳ ನಡುವೆಯೇ ಸದ್ದಿಲ್ಲದೆ ರೂಪುಗೊಂಡಿದ್ದ ರಾಜಾಸೀಟ್‌ನ ‘ಗ್ಲಾಸ್ ಬ್ರಿಡ್ಜ್’ ಯೋಜನೆಯಿಂದ ಕೊನೆಗೂ ಸರ್ಕಾರ ಹಿಂದಕ್ಕೆ ಸರಿದಿದೆ. ಆ ಮೂಲಕ ಸುಂದರ ಪರಿಸರದ ಮೇಲೆ ಕವಿದಿದ್ದ ಕಾರ್ಮೋಡಗಳ ಕರಿ ಛಾಯೆ ಸರಿದಿದ್ದು, ಪರಿಸರ ಪ್ರೇಮಿಗಳಲ್ಲಿ ಮೂಡಿದ್ದ ಆತಂಕ ದೂರವಾಗಿದೆ.

ರಾಜಾ ಸೀಟಿನ ಸುಂದರ ಪ್ರಶಾಂತ ಪರಿಸರವನ್ನು ಕಲಕುವಂತೆ ಕೆಲವು ತಿಂಗಳ ಹಿಂದೆಯೇ ಗ್ಲಾಸ್ ಬ್ರಿಡ್ಜ್ ಯೋಜನೆ ತೆರೆಮರೆಯಲ್ಲಿ ರೂಪುಗೊಳ್ಳುತಿತ್ತು. ಕನಿಷ್ಟ ಇದರ ಬಗ್ಗೆ ಸ್ಥಳೀಯರಿಗೆ ಮಾಹಿತಿಯನ್ನು ನೀಡದೆ ಕಾರ್ಯ ಯೋಜನೆಯನ್ನು ಸಜ್ಜುಗೊಳಿಸಿ ದಲ್ಲದೆ ಟೆಂಡರ್ ಪ್ರಕ್ರಿಯೆಯನ್ನು ಆರಂ ಭಿಸಿದ್ದು ಸಾಕಷ್ಟು ಸಂಶಯಗಳಿಗೆ ಕಾರಣ ವಾಯಿತು. ‘ಗ್ಲಾಸ್ ಬ್ರಿಡ್ಜ್’ ಸೈ ವಾಕ್ ಯೋಜನೆಗೆ ತೀವ್ರ ಪ್ರತಿರೋಧ ಎದುರಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.16ರಂದು ತೋಟಗಾರಿಕಾ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ತಕ್ಷಣವೇ ಯೋಜನೆಯನ್ನು ಕೈಬಿಡುವಂತೆ ಸೂಚಿಸಿದ್ದಾರೆ.

ಜಾಗೃತರಾದ ಸ್ಥಳೀಯರು : ಪ್ರಕೃತಿಗೆ ಹಾನಿ ಮಾಡುವ ಗ್ಲಾಸ್ ಬ್ರಿಡ್ಜ್ ಯೋಜ ನೆಯ ಸುಳಿವರಿತ ಸಾರ್ವಜನಿಕರು ತಕ್ಷಣವೆ ತಮ್ಮ ತೀವ್ರ ವಿರೋಧವನ್ನು ವ್ಯಕ್ತಪಡಿಸಲಾರಂಭಿಸಿದ್ದರು. ನಗರ ಸಭೆ ತುರ್ತು ಸಭೆ ನಡೆಸಿದ ಸಂದರ್ಭಯೋಜನೆ ವಿರುದ್ದ ಕೆಲವು ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಯೋಜನೆ ಜಾರಿಗೆ ಮುಂದಾದಲ್ಲಿ ‘ರಾಜಾಸೀಟು ಉಳಿಸಿ’ ಅಭಿಯಾನ ನಡೆಸುವುದಾಗಿ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯ ಪಡೆ ಮಾಜಿ ಅಧ್ಯಕ್ಷ ಮುಕ್ಕೋಡ್ಲು ಗ್ರಾಮದ ಶಾಂತೆಯಂಡ ರವಿ ಕುಶಾಲಪ್ಪ ಎಚ್ಚರಿಸಿದ್ದರು.

ಮಾತ್ರವಲ್ಲದೇ ಸಾಕಷ್ಟು ಸಂಘ ಸಂಸ್ಥೆಗಳು ನೇರವಾಗಿಯೇ ಆಡಳಿತ ವ್ಯವಸ್ಥೆಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರಲ್ಲೂ ಮಾಜಿ ಸಚಿವ ಎಂ.ಸಿ. ನಾಣಯ್ಯ ಅವರು ಆರಂಭದಲ್ಲಿ ಯೋಜನೆಗೆ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸಾಕಷ್ಟು ಪರ ವಿರೋಧದ ವಿಚಾರಗಳು ಕೇಳಿ ಬರುತ್ತಿದ್ದರು ಸ್ಥಳಿ ಸ್ಥಳೀಯ ಶಾಸಕ ಡಾ. ಮಂತರ್ ಗೌಡ ಅವರು ಈ ಕುರಿತು ಮೌನವಾಗಿದ್ದರು. ಇದೀಗ ಅವರು ಮೌನ ಮುರಿದು ಗ್ಲಾಸ್ ಬ್ರಿಡ್ಜ್ ಯೋಜನೆಯನ್ನು ರದ್ದು ಮಾಡಿರುವುದಾಗಿ ತಿಳಿಸಿದ್ದಾರೆ.

ಗ್ಲಾಸ್ ಬ್ರಿಡ್ಜ್ ನಿರ್ಮಾಣದಿಂದ ರಾಜಾಸೀಟಿನ ಪರಿಸರಕ್ಕೆ ಹಾನಿಯಾಗುವ ಸಾಧ್ಯತೆಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟ ಹಿನ್ನೆಲೆ ಯೋಜನೆ ರದ್ದುಗೊಂಡಿದೆ. ಟೆಂಡರ್ ಪ್ರಕ್ರಿಯೆ ನಡೆದಿತ್ತಾದರು. ಇನ್ನೂ ಕಾಮಗಾರಿಯನ್ನು ಗುತ್ತಿಗೆ ಯಾರಿಗೂ ನೀಡಿರಲಿಲ್ಲ ಎಂದು ಶಾಸಕ ಡಾ. ಮಂತರ್ ಗೌಡ ಸ್ಪಷ್ಟಪಡಿಸಿದ್ದಾರೆ.

Dharmasthala Case: ಮಂಜುನಾಥನನ್ನ ರಕ್ಷಿಸಿ, ಅಪಪ್ರಚಾರಿಗಳನ್ನ ಶಿಕ್ಷಿಸಿ – ಪ್ಲೇ ಕಾರ್ಡ್ ಹಿಡಿದು ವಿಧಾನಸೌಧಕ್ಕೆ ಬಂದ ಬಿಜೆಪಿ ನಾಯಕರು

Comments are closed.