Home News Dharmasthala Case: ಧರ್ಮಸ್ಥಳದ ಪ್ರಕರಣ – ಬಿಜೆಪಿ-ಜೆಡಿಎಸ್ ನಾಯಕರಿಗೆ ಈ ಗೊಂದಲಕ್ಕೆ ಸರ್ಕಾರ ತೆರೆ ಎಳಿತದೆ...

Dharmasthala Case: ಧರ್ಮಸ್ಥಳದ ಪ್ರಕರಣ – ಬಿಜೆಪಿ-ಜೆಡಿಎಸ್ ನಾಯಕರಿಗೆ ಈ ಗೊಂದಲಕ್ಕೆ ಸರ್ಕಾರ ತೆರೆ ಎಳಿತದೆ ಅನ್ನೋ ನಿರೀಕ್ಷೆ ಇದೆ – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

Hindu neighbor gifts plot of land

Hindu neighbour gifts land to Muslim journalist

Dharmasthala Case: ನಮ್ಮ ಪಕ್ಷದ ಎಲ್ಲಾ ನಾಯಕರೂ ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥನ ದರ್ಶನ ಪಡೆದು, ವೀರೇಂದ್ರ ಹೆಗಡೆಯವರನ್ನೂ ಭೇಟಿಯಾಗಿದ್ದೇವು. ಅಪಪ್ರಚಾರಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಏಕೆ ಮುಂದಾಗಲಿಲ್ಲ?ಎಂಬ ಬಗ್ಗೆ ಗೃಹ ಸಚಿವರು ಉತ್ತರ ನೀಡಲಿ. ಧರ್ಮಸ್ಥಳದ ವಿಚಾರದಲ್ಲಿ ದೊಡ್ಡ ಷಡ್ಯಂತ್ರ ಇದೆ ಎಂದು ಶಿವಕುಮಾರ್ ಹೇಳಿದ್ದಾರೆ. ಭಕ್ತರು ಆತಂಕದಲ್ಲಿ ಇದ್ದಾರೆ. ಇದನ್ನು ಸರಿ ಪಡಿಸಲು ಡಿಸಿಎಂ ಶಿವಕುಮಾರ್ ಗೆ ಇನ್ನೂ ಸಮಯ ಬಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಧಾನಸೌಧದಲ್ಲಿ ಹೇಳಿಕೆ ನೀಡಿದ್ದಾರೆ.

ಧರ್ಮಸ್ಥಳದ ವಿಚಾರದಲ್ಲಿ ಗೊಂದಲಕ್ಕೆ ತೆರೆ ನೀಡ್ತಾರೆ ಎಂದು ಬಿಜೆಪಿ, ಜೆಡಿಎಸ್ ನಾಯಕರ ನಿರೀಕ್ಷೆ ಇದೆ. ಧರ್ಮಸ್ಥಳದ ವಿಚಾರದಲ್ಲಿ ಎಡಪಂತೀಯರು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅಪಪ್ರಚಾರ ಆಗುವುದನ್ನ ಸರ್ಕಾರ ಏಕೆ ತಡೆಯಲಿಲ್ಲ? ಶಿವಕುಮಾರ್ ಏನಾದ್ರು ಹೇಳಿಕೊಳ್ಳಲಿ, ಷಡ್ಯಂತ್ರ, ಪಿತೂರಿ ಮಾಡಿದ ವ್ಯಕ್ತಿಗಳ ಬಗ್ಗೆ ಯಾಕೆ ತನಿಖೆ ಮಾಡ್ತಿಲ್ಲ? ಈ ಬಗ್ಗೆ ಗೃಹ ಸಚಿವರು ಸ್ಪಷ್ಟ ಉತ್ತರ ನೀಡಲಿ ಎಂದು ಆಗ್ರಹಿಸಿದರು.

ಇದೇ ವೇಳೆ ಅವರು ಮಾತನಾಡಿ, ಈ ಸರ್ಕಾರಕ್ಕೆ ಸ್ವಾತಂತ್ರ ಹೋರಾಟಗಾರರ 4.85ಕೋಟಿ ಮಾಸಾಸನ ನೀಡಲೂ ಆಗ್ತಿಲ್ಲ. ಮುಖ್ಯಮಂತ್ರಿ ಪರಿಹಾರ ನಿಧಿಗೂ ಹಣ ಬಿಡುಗಡೆ ಮಾಡಲಾಗದ ಸ್ಥಿತಿಗೆ ರಾಜ್ಯ ಸರ್ಕಾರ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ತುಂಗಭದ್ರಾ ನದಿಯ 33ಕ್ರಸ್ಟ್ ಗೇಟ್ ಗಳನ್ನು ತುರ್ತಾಗಿ ಬದಲಾವಣೆ ಮಾಡಬೇಕು. ಆ ಭಾಗದ ಜನ ಎರಡು ಬೆಳೆ ಬೆಳೆಯುತ್ತಿದ್ದರು. ಟಿಬಿ ಬೋರ್ಡ್ ನಲ್ಲಿ ಚರ್ಚೆ ಮಾಡದೆ ಅಲ್ಲಿನ ರೈತರು ಒಂದು ಬೆಳೆ ಬೆಳೆಯುವಂತಾಗಿದೆ. ಸಚಿವ ಶಿವರಾಜ್ ತಂಗಡಿ ಮನೆಯಲ್ಲಿ ಮಲಗಿದ್ದ ಪರಿಣಾಮ ರೈತರು ಸಂಕಷ್ಟ ಅನುಭವಿಸ್ತಿದ್ದಾರೆ ಇದರ ಬಗ್ಗೆ ಸರ್ಕಾರ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದರು.

ಚುನಾವಣೆ ಆಯೋಗದ ವಿರುದ್ಧ ಹಿಟ್ ಅಂಡ್ ರನ್ ಮಾಡ್ತಿದ್ದಾರೆ ರಾಹುಲ್ ಗಾಂಧಿ. ಬಿಹಾರದಲ್ಲಿ ಚುನಾವಣೆ ಮಾಡಲು ಷಡ್ಯಂತ್ರ ಗೆಲ್ಲಲು ಕುತಂತ್ರ ಮಾಡ್ತಿದ್ದಾರೆ. ಬಿ. ಕೆ. ಹರಿಪ್ರಸಾದ್ ತಾಲಿಬಾನ್ ಸಂಘಟನೆಗೆ ಆರ್ ಎಸ್ ಎಸ್ ಹೋಲಿಕೆ ಮಾಡಿದ್ದಾರೆ. ದೇಶಭಕ್ತಿ ಸಂಘಟನೆ, ಲಕ್ಷ ಲಕ್ಷ ದೇಶಭಕ್ತರು ಕೆಲಸ ಮಾಡ್ತಿದ್ದಾರೆ. ಆರ್.ಎಸ್.ಎಸ್. ಸಂಘಟನೆಯನ್ನ ತಾಲಿಬಾನ್ ಗೆ ಹೋಲಿಕೆ ಮಾಡಿರೋದನ್ನ ಮೂರ್ಖತನ ಎಂದು ಹೇಳಬೇಕೋ? ಅವಿವೇಕಿನತ ಎಂದು ಹೇಳಬೇಕೋ ಗೊತ್ತಿಲ್ಲ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

Road rules: ಇನ್ಮುಂದೆ ಸುಂಟಿಕೊಪ್ಪ ಹೈವೇಯಲ್ಲಿ ANPR ಕ್ಯಾಮರಾ ಕಣ್ಗಾವಲು – ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಕಾದಿದೆ ಶಿಕ್ಷೆ