Road rules: ಇನ್ಮುಂದೆ ಸುಂಟಿಕೊಪ್ಪ ಹೈವೇಯಲ್ಲಿ ANPR ಕ್ಯಾಮರಾ ಕಣ್ಗಾವಲು – ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಕಾದಿದೆ ಶಿಕ್ಷೆ

Road rules: ಇನ್ಮುಂದೆ ಸುಂಟಿಕೊಪ್ಪ ಪಟ್ಟಣದಲ್ಲಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡುವುದು, ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸುವುದು, ಓವರ್ ಸ್ಪೀಡ್, ತ್ರಿಬ್ಬಲ್ ರೈಡಿಂಗ್, ಡ್ರೈವಿಂಗ್, ಯರ್ರಾಬಿರ್ರಿ ಪಾರ್ಕಿಂಗ್ ಇತ್ಯಾದಿ ರೀತಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಕಾದಿದೆ ತಕ್ಕ ಶಿಕ್ಷೆ. ಯಾಕೆಂದರೆ ಇದೀಗ ಸುಂಟಿಕೊಪ್ಪ ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳ ಮೇಲೆ ANPR ಕ್ಯಾಮರಾ ಕಣ್ಗಾವಲಿಡಲಿದೆ.

ಸುಂಟಿಕೊಪ್ಪ ನಗರದ ಹೃದಯ ಭಾಗವಾಗಿರುವ ಕನ್ನಡ ವೃತ್ತದ ಸಮೀಪದಲ್ಲಿ ಅಂದಾಜು ರೂ. 1.80 ಲಕ್ಷ ವೆಚ್ಚದಲ್ಲಿ ANPR ಕ್ಯಾಮರಾವನ್ನು ಅಳವಡಿಸಲಾಗಿದ್ದು, ಇದು ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ನಿಗಾ ಇಡಲಿದೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವುದು ANPR ಕ್ಯಾಮರಾದಲ್ಲಿ ಸೆರೆ ಆದಲ್ಲಿ ಅಟೋಮ್ಯಾಟಿಕ್ ಆಗಿ ಜುಲ್ಮಾನೆಯ ರಶೀದಿ ವಾಹನದ ಮಾಲೀಕರಿಗೆ ರವಾನೆ ಆಗಲಿದೆ.
ಹೀಗಾಗಿ ಕಡ್ಡಾಯವಾಗಿ ವಾಹನ ಸವಾರರು ಸಂಚಾರ ನಿಯಮವನ್ನು ಪಾಲಿಸುವಂತೆ ಸುಂಟಿಕೊಪ್ಪ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ. ಈ ಕ್ಯಾಮರಾ ಅಳವಡಿಸುವ ಸಂದರ್ಭ ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ಮೇಲ್ವಿಚಾರಣೆ ನಡೆಸಿದರು. ಇದಕ್ಕೆ ಪೊಲೀಸ್ ಸಿಬ್ಬಂದಿಗಳು ಸಹಕಾರ ನೀಡಿದರು.
Comments are closed.