Home News Parappan Agrahara: ನಿನ್ನೆ ಅನ್ನ ಸಾಂಬಾರ್- ಇಂದು ಚಿತ್ರಾನ್ನಾ – ಸಾಮಾನ್ಯ ಖೈದಿಗಳಂತೆ ಇದ್ದಾರಾ ದರ್ಶನ್‌,...

Parappan Agrahara: ನಿನ್ನೆ ಅನ್ನ ಸಾಂಬಾರ್- ಇಂದು ಚಿತ್ರಾನ್ನಾ – ಸಾಮಾನ್ಯ ಖೈದಿಗಳಂತೆ ಇದ್ದಾರಾ ದರ್ಶನ್‌, ಪವಿತ್ರಾ?

Hindu neighbor gifts plot of land

Hindu neighbour gifts land to Muslim journalist

Parappan Agrahara: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ಹಾಗೂ ಅವರ ತಂಡದವರಿಗೆ ಹೈ ಕೋರ್ಟ್‌ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಮ್‌ ಕೋರ್ಟ್‌ ಮೆಟ್ಟಿಲು ಹತ್ತಿತ್ತು. ಸುಪ್ರೀಮ್‌ ಕೋರ್ಟ್‌ ಜಾಮೀನು ಅರ್ಜಿ ರದ್ದು ಮಾಡಿರುವುದನ್ನು ರದ್ದು ಪಡಿಸಿ ಮತ್ತೆ ದರ್ಶನ್‌ ಮತ್ತು ತಂಡದವರನ್ನು ಪರಪ್ಪನ ಅಗ್ರಹಾರಕ್ಕೆ ಅಟ್ಟಿದೆ.

ದರ್ಶನ್‌ ಹಾಗೂ ಎ1 ಆರೋಪಿ ಪವಿತ್ರ ಗೌಡ ಅವರನ್ನು ಮೊನ್ನೆಯೇ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ. ಯಾವುದೇ ಖೈದಿಗಳಿಗೆ ವಿಐಪಿ ಟ್ರೀಟ್‌ಮೆಂಟ್‌ ಕೊಡದಂತೆ ತಾಕೀತು ಮಾಡಿದ್ದ ಸುಪ್ರೀಮ್‌ ಕೋರ್ಟ್‌ ಪ್ರಕಾರ ಅವರನ್ನು ಸಾಮಾನ್ಯ ಖೈದಿಯಂತೆ ಜೈಲಿನಲ್ಲಿ ನಡೆಸಿಕೊಳ್ಳಲಾಗುತ್ತಿದೆ. ನಿನ್ನೆ ರಾತ್ರಿ ಸ್ವಲ್ಪ ಅನ್ನ ಸಾಂಬಾರ್ ಮಾತ್ರ ತಿಂದು ದರ್ಶನ್ ಮಲಗಿದ್ದಾರೆ.

ಮೊದಲ ದಿನ ರಾತ್ರಿ ಇದ್ದ ಬೇಸರ ನಿನ್ನೆ ಇರಲಿಲ್ಲ. ಸಿಬ್ಬಂದಿ ಹಾಗೂ ಸಹಚರರ ಜೊತೆ ಸಹಜವಾಗಿಯೇ ದರ್ಶನ್ ಮಾತು ಕತೆ ನಡೆಸಿದ್ದಾರೆ. ಹೈಕೋರ್ಟ್ ಬಗ್ಗೆ ಸುಪ್ರಿಂ ಕೋರ್ಟ್ ಬೇಸರ ವ್ಯಕ್ತಪಡಿಸಿದ್ದಾಗಲೇ, ಸಮಸ್ಯೆ ಆಗಲಿದೆ ಎಂದು ಅರಿತಿದ್ದೆ. ಹೀಗಾಗಿ ಮಾನಸಿಕವಾಗಿಯೇ ಧೈರ್ಯವಾಗಿದ್ದೆ ಅಂತ ದರ್ಶನ್ ಸಹ ಖೈದಿಗಳ ಜೊತೆ ಹೇಳಿಕೊಂಡಿದ್ದಾರೆ. ಇನ್ನು ಇತ್ತ ಮಹಿಳಾ ಬ್ಯಾರಕ್ ನಲ್ಲಿ ಪವಿತ್ರಾಗೌಡನೂ ಸಹಜವಾಗಿಯೇ ಇದ್ದು, ನಿನ್ನೆ ರಾತ್ರಿ ಊಟ ಮಾಡಿ ಸಹ ಕೈದಿಗಳ ಜೊತೆ ಮಾತು ನಡೆಸಿದ್ದಾರೆ.

ಇನ್ನು ಇಂದು ಬೆಳ್ಳಿಗ್ಗೆ 7:30 ಕ್ಕೆ ಜೈಲ್ ನ ಮೆನುವಿನಂತೆ ಜೈಲು ಸಿಬ್ಬಂದಿ ದರ್ಶನ್ ಗೆ ಚಿತ್ರನ್ನ ಕೊಟ್ಟಿದ್ದಾರೆ. ಸಾಮಾನ್ಯ ವಿಚಾರಣಾಧೀನ ಬಂದಿಯಂತೆ ಕಾಟೇರ ಚಿತ್ರನ್ನ ಸೇವಿಸಿದ್ದಾರೆ. ಅತ್ತ ಎ1 ಪವಿತ್ರ ಗೌಡಗು ಕೂಡ ಜೈಲು ಸಿಬ್ಬಂದಿ ಚಿತ್ರನ್ನ ಕೊಟ್ಟಿದ್ದಾರೆ.

ಇನ್ನು ಇನ್ನುಳಿದ ಇಬ್ಬರು ಆರೋಪಿಗಳಾ ಜಗದೀಶ್ ಮತ್ತು ಅನುಕುಮಾರ್ ಗೆ UTP ನಂಬರ್ ಜನರೇಟ್ ಆಗಿದ್ದು, ಜಗದೀಶ್ UTP ನಂಬರ್ 7322 ಹಾಗೂ ಅನುಕುಮಾರ್ UTP ನಂಬರ್ 7323 ನೀಡಿದ್ದಾರೆ. ಇವರಿಬ್ಬರು ನಿನ್ನೆ ಮಧ್ಯಾನದ ವೇಳೆಗೆ ಜೈಲು ಸೇರಿದ್ದರು.

RSS: RSS ಹೊಗಳಿರುವ ಮೋದಿ ಜನರಲ್ಲಿ ಕ್ಷಮೆ ಯಾಚಿಸಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ!