Vehicle: ವಾಹನ ಮಾಲೀಕರು ಮೊಬೈಲ್ ನಂಬರ್‌ಗಳನ್ನು ಆಧಾರ್ ಮೂಲಕ ಲಿಂಕ್ ಮಾಡುವುದು ಕಡ್ಡಾಯ: ರಸ್ತೆ ಸಾರಿಗೆ ಸಚಿವಾಲಯ ಆದೇಶ

Vehicle: ದೇಶದ ಎಲ್ಲಾ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ಮಾಲೀಕರು ತಮ್ಮ ಮೊಬೈಲ್ ನಂಬರ್‌ಗಳನ್ನು ಆಧಾರ್ ಮೂಲಕ ಲಿಂಕ್ ಮಾಡಬೇಕು ಎಂದು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ. ಸುಗಮ ಸಂವಹನ ಮತ್ತು ಸಾರಿಗೆ ಸೇವೆಗಳಿಗೆ ಸುಲಭ ಪ್ರವೇಶಕ್ಕಾಗಿ ಆಧಾರ್ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು. ವಾಹನ ನೋಂದಣಿ ಮತ್ತು ಮೊಬೈಲ್ ನಂಬರ್ ಲಿಂಕ್ ಮಾಡುವುದು, ಆಧಾರ್‌ನಿಂದ ಪರಿಶೀಲಿಸುವುದು ಕಡ್ಡಾಯ ಎಂದು ಸಚಿವಾಲಯ ತಿಳಿಸಿದೆ.

ದಂಡ ತಪ್ಪಿಸಲು ಫೋನ್ ನಂಬರ್ ಮತ್ತು ವಿಳಾಸ ಬದಲಿಸುವವರನ್ನು ಹಿಡಿಯಲು ಕೇಂದ್ರ ಮತ್ತು ರಾಜ್ಯ ಸಾರಿಗೆ ಇಲಾಖೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಸಚಿವಾಲಯ ತಿಳಿಸಿದೆ.
Comments are closed.