USA: ಅಮೇರಿಕಾದ ಸಿಯಾಟಲ್ ಗೋಪುರದ ಮೇಲೆ ಹಾರಿದ ತ್ರಿವರ್ಣ ಧ್ವಜ- ಇದೇ ಮೊದಲು ವಿದೇಶದ ಬಾವುಟ ಹಾರಟ

USA: ಅಮೇರಿಕಾದ ಸಿಯಾಟಲ್‌ನಲ್ಲಿರುವ ಐತಿಹಾಸಿಕ 605 ಅಡಿ ಎತ್ತರದ ಬಾಹ್ಯಾಕಾಶ ಕೇಂದ್ರ ಕಟ್ಟಡದ ಗೋಪುರದ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಇಲ್ಲಿ, ವಿದೇಶವೊಂದರ ಧ್ವಜವನ್ನು ಹಾರಿಸಿರುವುದು ಇದೇ ಮೊದಲು.

ಹೌದು, ಭಾರತದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಗಿದೆ. ಸಿಯಾಟಲ್‌ನಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿರುವ ಪ್ರಕಾಶ್ ಗುಪ್ತಾ, ಸಿಯಾಟಲ್ ಮೇಯರ್ ಬ್ರೂಸ್ ಹರ್ರೆಲ್ ಮತ್ತು ಇತರ ಗಣ್ಯರು ಈ ಐತಿಹಾಸಿಕ ಸಮಾಂಭದಲ್ಲಿ ಹಾಜರಿದ್ದರು.
ಸಮಾರಂಭದ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಗುಪ್ತಾ, ‘ಇದಕ್ಕಿಂತಲೂ ದೊಡ್ಡ ಗೌರವ ಮತ್ತೊಂದಿಲ್ಲ! ಸಿಯಾಟಲ್ ಸ್ಕೈಲೈನ್ ಸ್ಪೇಸ್ ನೀಡಲ್‌ನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
Bantwala: ಬಂಟ್ವಾಳ: ದಕ್ಷ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್‌ರವರಿಗೆ ರಾಷ್ಟ್ರಪತಿ ಪ್ರಶಸ್ತಿ
Comments are closed.