Arrest: ಬಸ್‌ನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ; ಆರೋಪಿ ವಶಕ್ಕೆ!

Share the Article

Arrest: ಖಾಸಗಿ ಬಸ್ಸಿನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿಯನ್ನು ಕುಕ್ಕಡೇಲು, ಕರಿಯನಂಗಡಿ, ಬೆಳವಾಯಿ ಗ್ರಾಮ ಮತ್ತು ಅಂಚೆ ಮೂಡಬಿದರೆ ರೆಹ್ಮಾನ( 60) ಎಂದು ಗುರುತಿಸಲಾಗಿದೆ.

ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಓರ್ವ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುತ್ತದೆ. ವಿಡಿಯೋದಲ್ಲಿ ಯುವತಿಯ ಮುಖ ಚಹರೆ ಸರಿಯಾಗಿ ಕಂಡು ಬರದ ಕಾರಣ ಗುರುತಿಸಲು ಅಸಾಧ್ಯವಾಗಿರುತ್ತದೆ. ಈ ಬಗ್ಗೆ ಆರೋಪಿಯನ್ನು ಠಾಣೆಗೆ ಕರೆಯಿಸಿ ವಿಚಾರಿಸಲಾಗಿದ್ದು ಆತನಿಗೂ ಸಹ ಸಂತ್ರಸ್ತ ಯುವತಿಯ ಬಗ್ಗೆ ಮಾಹಿತಿ ಇರುವುದಿಲ್ಲ. ಆದುದರಿಂದ ಸಂತ್ರಸ್ತ ಯುವತಿ ಅಥವಾ ಘಟನೆಯ ಕುರಿತು ವಿಡಿಯೋ ಚಿತ್ರೀಕರಣ ಮಾಡಿರುವ ವ್ಯಕ್ತಿಗಳು ನೇರವಾಗಿ ಪೊಲೀಸ್‌ ಠಾಣೆಗೆ ಅಗಮಿಸಿ ದೂರನ್ನು ನೀಡಬಹುದಾಗಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೂಡಬಿದಿರೆ ಪೊಲೀಸ್ ನೀರಿಕ್ಷಕ ಸಂದೇಶ್ ಪಿ.ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.