Home News Health Tips: ಹೃದ್ರೋಗ ಇರುವವರು ದಿನಕ್ಕೆ ಎಷ್ಟು ನೀರು ಕುಡಿಯುವ ಅಗತ್ಯವಿದೆ? – ತಜ್ಞ...

Health Tips: ಹೃದ್ರೋಗ ಇರುವವರು ದಿನಕ್ಕೆ ಎಷ್ಟು ನೀರು ಕುಡಿಯುವ ಅಗತ್ಯವಿದೆ? – ತಜ್ಞ ವೈದ್ಯರು ಹೇಳುತ್ತಾರೆ?

Hindu neighbor gifts plot of land

Hindu neighbour gifts land to Muslim journalist

Health Tips: ದೇಹವನ್ನು ಜಲೀಕರಿಸಲು(ಹೈಡ್ರೇಟ್) ಸಾಕಷ್ಟು ನೀರು ಕುಡಿಯಲು ನಿರಂತರವಾಗಿ ಸಲಹೆ ನೀಡಲಾಗುತ್ತದೆ. ಕೆಲವರು ದಿನಕ್ಕೆ 8 ರಿಂದ 10 ಲೋಟ ನೀರು ಕುಡಿಯಲು ಶಿಫಾರಸು ಮಾಡುತ್ತಾರೆ, ಇನ್ನು ಕೆಲವರು ದಿನಕ್ಕೆ 3 ರಿಂದ 4 ಲೀಟರ್ ನೀರು ಕುಡಿಯಲು ಶಿಫಾರಸು ಮಾಡುತ್ತಾರೆ.

ಜಲವೇ ಜೀವನ. ನೀರು ಕುಡಿಯದೆ ಆರೋಗ್ಯವಾಗಿ ಬದುಕುವುದು ಸಾಧ್ಯವಿಲ್ಲ. ಆದರೆ, ಹೃದಯ ಸಂಬಂಧಿ ಕಾಯಿಲೆ ಇರುವವರು ಕಡಿಮೆ ನೀರು ಕುಡಿಯುವಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಈ ಸಮಯದಲ್ಲಿ, ದಿನಕ್ಕೆ ಎಷ್ಟು ನೀರು ಕುಡಿಯುವುದು ಹೃದ್ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇದರ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ತಿಳಿದುಕೊಳ್ಳೋಣ.

ಆರೋಗ್ಯದ ದೃಷ್ಟಿಯಿಂದ ಕೆಲವು ಹೃದ್ರೋಗಿಗಳು ನೀರು ಸೇರಿದಂತೆ ಇತರ ದ್ರವ ಪದಾರ್ಥಗಳ ಸೇವನೆಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೊಸದಿಲ್ಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆ, ಹೃದಯ ಮತ್ತು ಶ್ವಾಸಕೋಶ ಕಸಿ ತಜ್ಞ ಡಾ. ಮುಖೇಶ್ ಗೋಯಲ್ ಹೇಳುತ್ತಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಸಮಾಲೋಚಕ ಡಾ. ಪ್ರದೀಪ್ ಹಾರನಹಳ್ಳಿ ಅವರ ಪ್ರಕಾರ, ಕೆಲವು ಪರಿಸ್ಥಿತಿಗಳಲ್ಲಿ ಹೃದ್ರೋಗಿಗಳಿಗೆ ಕಡಿಮೆ ನೀರು ಕುಡಿಯಲು ಸಲಹೆ ನೀಡಲಾಗುತ್ತದೆ.

ಇದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳಿ.

ಮೂತ್ರಪಿಂಡದ ಮೇಲೆ ಹೆಚ್ಚಿದ ಒತ್ತಡ

ಹೃದ್ರೋಗಿಗಳು ಸಾಮಾನ್ಯವಾಗಿ ಸೋಡಿಯಂ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಎಲೆಕ್ಟ್ರೋಲೈಟ್‌ಗಳ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಎಂದು ಡಾ. ಮುಖೇಶ್ ಗೋಯಲ್ ಹೇಳುತ್ತಾರೆ. ಹೆಚ್ಚು ನೀರು ಕುಡಿಯುವುದರಿಂದ ಎಲೆಕ್ಟ್ರೋಲೈಟ್ ಮಟ್ಟ ಏರುಪೇರಾಗುತ್ತದೆ. ಅಲ್ಲದೆ ಕಿಡ್ನಿ ಸರಿಯಾಗಿ ಕೆಲಸ ಮಾಡದೇ ಇದ್ದಾಗ ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿ ಮೇಲೆ ಒತ್ತಡ ಹೆಚ್ಚುತ್ತದೆ. ಆದ್ದರಿಂದ, ನೀವು ಅಂತಹ ಸಂದರ್ಭಗಳಲ್ಲಿ ಜಾಗರೂಕರಾಗಿರಬೇಕು.

ಹೃದಯ ಬಡಿತ ಮತ್ತು ಕುಡಿಯುವ ನೀರಿನ ನಡುವಿನ ಸಂಬಂಧ

ಹೃದಯದ ಪಂಪ್ ಮಾಡುವ ಕಾರ್ಯವು ನೀರಿನ ಸೇವನೆಗೆ ಸಂಬಂಧಿಸಿದೆ ಎನ್ನುತ್ತಾರೆ ಡಾ. ಪ್ರದೀಪ್ ಹಾರ್ನಹಳ್ಳಿ. ರೋಗಿಗಳು ಯಾರುಯಾರ ಹೃದಯವು ಇತರರಿಗಿಂತ ಕಡಿಮೆ ಪಂಪ್ ಮಾಡುತ್ತದೆಯೋ ಅವರು ಸಾಮಾನ್ಯ ನೀರಿನ ಸೇವನೆಯೊಂದಿಗೆ ಪಂಪ್ ಅನ್ನು ನಿರ್ವಹಿಸುವಲ್ಲಿ ತೊಂದರೆ ಹೊಂದಿರಬಹುದು. ಆದರೆ ಕಡಿಮೆ ನೀರು ಕುಡಿಯಬೇಕೆಂಬ ನಿಯಮ ಎಲ್ಲ ಹೃದ್ರೋಗಿಗಳಿಗೂ ಅನ್ವಯವಾಗುವುದಿಲ್ಲ ಎನ್ನುತ್ತಾರೆ ಡಾ.ಪ್ರದೀಪ್. ಕೆಲವೊಮ್ಮೆ ಹೆಚ್ಚು ನೀರು ಕುಡಿಯುವುದರಿಂದ ನಡೆಯುವಾಗ ಅಥವಾ ನಿದ್ದೆ ಮಾಡುವಾಗ ಉಸಿರಾಟದ ತೊಂದರೆ ಉಂಟಾಗುತ್ತದೆ.

ಎಷ್ಟು ನೀರು ಕುಡಿಯಬೇಕು…?

ಹೃದ್ರೋಗ ರೋಗಿಗಳು ದಿನಕ್ಕೆ ಒಂದೂವರೆ ಲೀಟರ್‌ಗಿಂತ ಹೆಚ್ಚು ನೀರು ಕುಡಿಯಬಾರದು ಎನ್ನುತ್ತಾರೆ ಡಾ.ಪ್ರದೀಪ ಹಾರ್ನಹಳ್ಳಿ. ಅಲ್ಲದೆ, ಹೃದ್ರೋಗಿಗಳು ಬೇಸಿಗೆಯಲ್ಲಿ 2 ಲೀಟರ್‌ಗಿಂತ ಹೆಚ್ಚು ನೀರು ಕುಡಿಯಬಾರದು. ಯಾವುದೇ ರೀತಿಯ ದ್ರವವನ್ನು ಸೇವಿಸುವ ಮೊದಲು ಹೃದಯ ರೋಗಿಗಳು ಯಾವಾಗಲೂ ವೈದ್ಯರನ್ನು ಸಂಪರ್ಕಿಸಬೇಕು ಹೇಳುತ್ತಾರೆ.

ಹೃದಯ ರೋಗಿಗಳಾಗಲಿ ಅಥವಾ ಆರೋಗ್ಯವಂತರಾಗಲಿ ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದಾಗ ಇದು ಹೃದಯ ಮತ್ತು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಹೃದಯವು ಅಧಿಕ ನೀರನ್ನು ತಳ್ಳಬೇಕಾಗುತ್ತದೆ. ಆದ್ದರಿಂದ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮೂತ್ರಪಿಂಡಗಳು ಹೆಚ್ಚುವರಿ ನೀರನ್ನು ಹೊರಹಾಕಲು ಹೆಚ್ಚಿನ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ರೀತಿ ಎರಡೂ ಅಂಗಗಳು ಆಯಾಸಗೊಳ್ಳುತ್ತವೆ. ಇದು ದೀರ್ಘಕಾಲ ಮುಂದುವರೆದರೆ ಅವುಗಳ ಕಾರ್ಯ ಕೆಟ್ಟು ಅಂಗ ವೈಫಲ್ಯಗಳು ಉಂಟಾಗಬಹುದು. ಮೊದಲೇ ಹೃದಯ ರೋಗ ಅಥವಾ ಮುತ್ರಪಿಂಡದ ಕಾಯಿಲೆ ಇರುವಾಗ ಹೆಚ್ಚು ನೀರು ಕುಡಿಯುವುದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ.

ಪ್ರತಿ ವ್ಯಕ್ತಿಯ ಹಸಿವು ಹೇಗೆ ಭಿನ್ನವಾಗಿರುತ್ತದೋ ಹಾಗೆ ನೀರಿನ ಅಗತ್ಯವೂ ಸಹ ಭಿನ್ನವಾಗಿರುತ್ತದೆ. ಪ್ರತಿ ವ್ಯಕ್ತಿಯು ತನ್ನ ಅಗತ್ಯಕ್ಕೆ ತಕ್ಕಂತೆ ನೀರು ಕುಡಿಯಬೇಕು. ಎಲ್ಲರೂ 3-4 ಲೀಟರ್ ನೀರು ಸೇವಿಸಬೇಕು ಎನ್ನುವ ಉಕ್ತಿ ಸರ್ವಥಾ ತಪ್ಪು. ಅಂದರೆ, ರೋಗಿಗಳಷ್ಟೇ ಅಲ್ಲ, ಆರೋಗ್ಯವಂತರು ಸಹ ಸಾಕಷ್ಟು ನೀರು ಕುಡಿಯಬೇಕೆ ಹೊರತು ಹೆಚ್ಚು ನೀರು ಕುಡಿಯಬಾರದು.

– ಡಾ. ಪ್ರ. ಅ. ಕುಲಕರ್ಣಿ