TB Dam: ಓಪನ್ ಆಗುತ್ತಿಲ್ಲ ತುಂಗಭದ್ರಾ ಜಲಾಶಯದ 7 ಕ್ರಸ್ಟ್ ಗೇಟ್ ಗಳು – ಕಾದಿದೆಯಾ ಭಾರಿ ಗಂಡಾಂತರ?

TB Dam: ಸರಿಯಾಗಿ ಒಂದು ವರ್ಷದ ಹಿಂದೆ ಕರ್ನಾಟಕದ ಅತಿ ದೊಡ್ಡ ಡ್ಯಾಮ್ ಗಳಲ್ಲಿ ಒಂದಾದ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟೊಂದು ತುಂಬಿದ್ದ ಜಲಾಶಯದ ನೀರಿನ ಪ್ರೆಶರ್ ನಿಂದಾಗಿ ಕಿತ್ತುಕೊಂಡು, ನೀರಿನಲ್ಲಿ ಕೊಚ್ಚಿ ಹೋಗಿತ್ತು. ಅದರಿಂದ ಅಪಾರ ಪ್ರಮಾಣದಲ್ಲಿ ನೀರು ಪೊಲಾಗಿತ್ತು. ಆದರೆ ಇದೀಗ ಮತ್ತೆ ಒಂದು ಸಮಸ್ಯೆ ಎದುರಾಗಿದ್ದು ಜಲಾಶಯದ ಏಳು ಕ್ರಸ್ಟ್ ಗೇಟ್ ಗಳು ಓಪನ್ ಆಗುತ್ತಿಲ್ಲ ಎಂಬ ಸುದ್ದಿ ಕೇಳಿ ಬಂದಿದೆ.

ಹೌದು, ಜಲಾಶಯದ ಏಳು ಕ್ರೆಸ್ಟ್ ಗೇಟ್ ಗಳು ದುರ್ಬಲವಾಗಿದ್ದು ತುಕ್ಕು ಹಿಡಿದು ಅವು ಕೆಲಸ ಮಾಡದೇ ಸ್ತಬ್ಧವಾಗಿದೆ. ಈ ವಿಷಯವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿರುವ ಶಿವರಾಜ್ ತಂಗಡಗಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಆ. 15ರಂದು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತುಂಗಭದ್ರಾ ಜಲಾಶಯದ 31 ಗೇಟ್‌ಗಳ ಪೈಕಿ ಗೇಟ್ ನಂ-11, 18, 20, 24, 27, 28 ಹಾಗೂ 04 ನೇ ಗೇಟ್ ಮೇಲೆತ್ತಲಾಗುತ್ತಿಲ್ಲ. ಇದರಿಂದ ನದಿಗೆ ಎಲ್ಲಗೇಟ್ ಗಳ ಮೂಲಕ ನೀರು ಬಿಡುತ್ತಿಲ್ಲ. ಕ್ರಸ್ಟ್ ಗೇಟ್ ದುರಸ್ತಿಗೆ ಸರಕಾರ ಬದ್ಧವಾಗಿದೆ ಆದರೆ, ಟಿಬಿ ಬೋರ್ಡ್ ಹಾಗೂ ಕೇಂದ್ರ ಸರಕಾರ ಒಪ್ಪಿಗೆ ನೀಡಬೇಕಿದೆ,” ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
Comments are closed.