Mysore Dasara: ದಸರಾ ಗಜಪಡೆ ಬಲಾಡ್ಯತೆಗೆ ಬೇಕಿದೆ ಟನ್‌ಗಟ್ಟಲೆ ಆಹಾರ – ಟನ್ ಗಟ್ಟಲೆ ಆಹಾರ ಪೂರೈಕೆ

Mysore Dasara: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಯ ಆರೋಗ್ಯ ಮತ್ತು ಅವುಗಳ ಬಲಾಡ್ಯತೆ ಕಾಪಾಡಿಕೊಳ್ಳುವುದು ಅರಣ್ಯ ಇಲಾಖೆಗೆ ಸವಾಲಿನ ಕೆಲಸವಾಗಿದ್ದು, ಅದಕ್ಕಾಗಿ ಟನ್‌ಗಟ್ಟಲೆ ಪೌಷ್ಟಿಕ ಮತ್ತು ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡುವುದ ರೊಂದಿಗೆ ನಿಗಾ ವಹಿಸಲು ಸಜ್ಜಾಗಿದೆ.

ಈಗಾಗಲೇ ಅರಣ್ಯ ಇಲಾಖೆಯ ವಿವಿಧ ಆನೆ ಕ್ಯಾಂಪುಗಳಿಂದ ಮೈಸೂರು ತಲುಪಿರುವ ಗಜಪಡೆಯ ತೂಕ ಮತ್ತು ಆರೋಗ್ಯವನ್ನು ಪರೀಕ್ಷಿಸಲಾಗಿದ್ದು, ಉಳಿದಿರುವ ದಿನಗಳಲ್ಲಿ ಆನೆಗಳಿಗೆ ಪೌಷ್ಟಿಕ, ಗುಣಮಟ್ಟದ ಆಹಾರ ನೀಡು ವುದರೊಂದಿಗೆ ಆಗಾಗ ಆರೋಗ್ಯ ತಪಾಸಣೆ ನಡೆಸಿ ಸದೃಢತೆ ಕಾಪಾಡಲು ಆರಣ್ಯ ಇಲಾಖೆ ತಯಾರಿ ನಡೆಸಿದೆ.
ಈ ಸಾಲಿನ ದಸರಾದಲ್ಲಿ ಗಜಪಡೆಯಲ್ಲಿ 10 ಗಂಡಾನೆ ಹಾಗೂ ನಾಲ್ಕು ಹೆಣ್ಣಾನೆ ಪಾಲ್ಗೊಳ್ಳುತ್ತಿದ್ದು, ಒಟ್ಟು 14 ಆನೆಗಳ ತೂಕ, ಗಾತ್ರ ಪರೀಕ್ಷಿಸಿ ಪ್ರತಿ ದಿನ ಎಷ್ಟು ಪ್ರಮಾಣದ ಪೌಷ್ಠಿಕ ಆಹಾರ ನೀಡ ಬೇಕೆಂದು ಅಂದಾಜಿಸಲಾಗಿದೆ. ಪಶುವೈದ್ಯರ ಸಲಹೆಯಂತೆ ನಿಗದಿತ ಪ್ರಮಾಣದ ಆಹಾರ ಪದಾರ್ಥಗಳ ಪೂರೈಕೆಗೆ ಟೆಂಡರ್ ನೀಡಿದೆ. ಬನ್ನೂರಿನ ಅತ್ತಹಳ್ಳಿ ಗ್ರಾಮದ ಕೆ.ಎಸ್.ಬಾಬು ಎಂಬುವರು ದಸರಾ ಗಜಪಡೆಗೆ ಪೌಷ್ಟಿಕ ಆಹಾರ ಒದಗಿಸಲು ಬೇಕಾಗುವ ದಿನಸಿ ಹಾಗೂ ಒಣ ಮತ್ತು ಹಸಿ ಹುಲ್ಲು ಸರಬರಾಜು ಮಾಡುತ್ತಿದ್ದಾರೆ.
ಬರೋಬ್ಬರಿ 56 ದಿನಕ್ಕೆ ಆಹಾರ ಪೂರೈಕೆ ಆರಮನೆ ಆವರಣದಲ್ಲಿ ಈ ಬಾರಿ ದಸರಾ ಗಜಪಡೆ 56 ದಿನ ಬೀಡು ಬಿಡ ಲಿದೆ. ಮೊದಲ ತಂಡದ 9 ಹಾಗೂ ಎರಡನೇ ತಂಡದ 5 ಆನೆಗಳಿಗೆ ಬೇಕಾದ ಗುಣಮಟ್ಟದ ಪದಾರ್ಥ ಬಳಸಲಾಗುತ್ತದೆ.
ದಸರಾ ಗಜಪಡೆಗೆ ನೀಡುವ ಪೌಷ್ಟಿಕ ಆಹಾರ ತಯಾರಿಕೆಗೆ ಗುಣಮಟ್ಟದ 79 ಪದಾರ್ಥಗಳನ್ನೇ ಬಳಸಲಾಗುತ್ತದೆ ಗುಣಮಟ್ಟದಲ್ಲಿ ನಂಬರ್ ಬನ್ ಸಾಮಾಗ್ರಿಗಳನ್ನು ಸರಬರಾಜು ಮಾಡಲಾಗುತ್ತದೆ. ಆನೆಗಳ ಆರೋಗ್ಯ ಕಾಪಾಡುವಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಕೆಜಿ ಆಧಾರದಲ್ಲಿ ದರ ನಿಗದಿ ಮಾಡಿ ಟೆಂಡರ್ ನೀಡಲಾಗಿದೆ. ಗಜಪಡೆ ಸ್ಥಳೀಯ ವಾತಾವರಣಕ್ಕೆ ಹೊಂದಿ ಕೊಳ್ಳುವ ನಿಟ್ಟಿನಲ್ಲಿ ಒಂದೆರಡು ದಿನದಲ್ಲಿ ವಿಶೇಷ ಆಹಾರ ನೀಡಲಾಗುತ್ತದೆ. ಹಂತ ಹಂತವಾಗಿ ಆನೆಗಳ ಆರೋಗ್ಯ ಸ್ಥಿತಿ ಗಮನಿಸಿ, ಪೌಷ್ಟಿಕ ಆಹಾರದ ಪ್ರಮಾಣ ಹೆಚ್ಚಿಸಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಆನೆಗಳು ಆರೋಗ್ಯದಿಂದ ಕೂಡಿದ್ದು, ತಾಲೀಮಿನಲ್ಲಿ ಯಶಸ್ವಿಯಾಗಿ ಪಾಲ್ಗೊಳ್ಳುತ್ತಿವೆ.
ಆಹಾರ ಪದಾರ್ಥ ದಾಸ್ತಾನಿಗೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಆನೆಗಳಿಂದ ಈ ಬಾರಿ 340 ಟನ್ ಅಲದ ಸೊಪ್ಪು, 170 ಟನ್ ಹಸಿರು ಹುಲ್ಲು, 52 ಟನ್ ಭತ್ತದ ಹುಲ್ಲು, 25 ಟನ್ ಕಬ್ಬು ನೀಡಲು ಉದ್ದೇಶಿಸಲಾಗಿದೆ ಎಂದು ಮೈಸೂರು ವನ್ಯಜೀವಿ ವಿಭಾಗ, ಡಿಸಿಎಫ್,
ಡಾ.ಐ.ಬಿ.ಪ್ರಭುಗೌಡ ತಿಳಿಸಿದರು.
ಅಲ್ಲದೆ, 225 ಕ್ವಿಂಟಾಲ್ ಭತ್ತ, 75 ಕ್ವಿಂಟಾಲ್ ಅಕ್ಕಿ, 525 ಕೆಜಿ ಬೆಲ್ಲ, 28 ಕ್ವಿಂಟಾಲ್ ಕುಸುಬಲಕ್ಕಿ, 28 ಕ್ವಿಂಟಾಲ್ ಗೋಧಿ, 28 ಕ್ವಿಂಟಾಲ್ ಹೆಸರುಕಾಳು, 28 ಕ್ವಿಂಟಾಲ್ ಉದ್ದಿನಕಾಳು, 35 ಕ್ವಿಂಟಾಲ್ ಕಡಲೆಕಾಯಿ ಹಿಂಡಿ, 3 ಕ್ವಿಂಟಾಲ್ ಅವಲಕ್ಕಿ, 1 ಸಾವಿರ ಕೆಜಿ ಈರುಳ್ಳಿ, 175 ಕೆಜಿ ಬೆಣ್ಣೆ, 375 ಕೆಜಿ ಉಪ್ಪು, 3250 ತೆಂಗಿನಕಾಯಿ ನೀಡಲಾಗುತ್ತದೆ.
ಅಲ್ಲದೆ, ದಿನಕ್ಕೆ 100 ಕೆಜಿ ತರಕಾರಿ ನೀಡಲಾಗು ಇದೆ. ಅರಣ್ಯ ಇಲಾಖೆಯೇ ಹಾಪ್ ಕಾಮ್ಸ್ ನಲ್ಲಿ ತರಕಾರಿಯನ್ನು ಖರೀದಿಸುತ್ತದೆ. ವಿಶೇಷ ಆಹಾರ ತಯಾರಿಕೆ ನಂತರ ಗೆಡ್ಡೆಕೋಸ್, ಬೀಟರೂಟ್, ಕ್ಯಾರೆಟ್, ಸೌತೆಕಾಯಿ, ಸೀಮೆಬದನೆಕಾಯಿ ತುಂಡನ್ನು ಬೆರೆಸಿ ಆನೆಗಳಿಗೆ ನೀಡಲಾಗುತ್ತದೆ.
ಆನೆ ತಂಪಾಗಿಸಲು ಎಣ್ಣೆ ಬಳಕೆ:
ಪ್ರತಿದಿನ ಅರಮನೆಯಿಂದ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದವರೆಗೆ ತಾಲೀಮಿಗೆ ಹೋಗುವ ಆನೆಗಳನ್ನು ತಂಪಾಗಿಸಲು ತಲೆ, ಹಣೆ, ಕಾಲಿಗೆ ಎಣ್ಣೆ ಹಚ್ಚಲಾಗು ತ್ತದೆ ಅದಕ್ಕಾಗಿ 200 ಲೀಟರ್ ಹರಳೆಣ್ಣೆ 200 ಲೀಟರ್ ಹೊಂಗೆ ಎಣ್ಣೆ, 200 ಲೀಟರ್ ಬೇವಿನ ಎಣ್ಣೆ ಬಳಸಲಾಗು ತ್ತದೆ. ತಾಲೀಮಿನ ವೇಳೆ ಆನೆಗಳ ಮೇಲೆ ಗಾದಿ, ನಮ್ಮಾ ಕಟ್ಟುವುದರಿಂದ ಹಗ್ಗ ಬಿಗಿದ ಸ್ಥಳದಲ್ಲಿ ಗಾಯವಾಗ ದಂತೆ ತಡೆಗಟ್ಟಲು ಹರಳೆಣ್ಣೆ ಹಾಗೂ ಹೊಂಗೆ ಎಣ್ಣೆ ಹಚ್ಚಲಾಗುತ್ತದೆ. ಕಾಲಿನ ಪಾದಕ್ಕೆ, ಸರಪಳಿ ಬಿಗಿರುವ ಜಾಗಕ್ಕೆ ಹಾಗೂ ಬೆರಳಿನ ಸಂದಿಗೆ ಬೇವಿನ ಎಣ್ಣೆ ಹಚ್ಚಲಾಗುತ್ತದೆ. ಹಾಗಾಗಿ ಆನೆಗಳನ್ನು ತಂಪಾಗಿಸಲು ಎಣ್ಣೆ ಪ್ರಮುಖ ಪಾತ್ರವಹಿಸುತ್ತದೆ.
Rajanna Resign: ರಾಜಣ್ಣ ಸಂಪುಟದಿಂದ ವಜಾ ವಿಚಾರ – ಎಸ್. ಟಿ ನಾಯಕರಿಂದ ಹೈಕಮಾಂಡ್ ಮುಂದೆ ಪರೇಡ್ ಚಿಂತನೆ
Comments are closed.