Rajanna Resign: ರಾಜಣ್ಣ ಸಂಪುಟದಿಂದ ವಜಾ ವಿಚಾರ – ಎಸ್. ಟಿ ನಾಯಕರಿಂದ ಹೈಕಮಾಂಡ್ ಮುಂದೆ ಪರೇಡ್ ಚಿಂತನೆ

Rajanna Resign: ವಾಲ್ಮೀಕಿ ಸಮುದಾಯದ ನಾಯಕ ರಾಜಣ್ಣ ಸಂಪುಟದಿಂದ ವಜಾ ಮಾಡಿದ್ದರಿಂದ ಎಸ್.ಟಿ ನಾಯಕರು ಗಾಯಗೊಂಡ ಸಿಂಹದಂತಾಗಿದ್ದಾರೆ. ರಾಜಣ್ಣ ವಿಚಾರಕ್ಕೆ ಹೈಕಮಾಂಡ್ ಮುಂದೆ ಎಸ್.ಟಿ ಶಾಸಕರು ಪರೇಡ್ ನಡೆಸಲು ಚಿಂತನೆ ನಡೆಸಿದ್ದಾರೆ. ಎಸ್.ಟಿ ವರ್ಗ ಸೇರಿಸಿ ಹಲವು ಶಾಸಕರ ಪರೇಡ್ ಮೂಲಕ ಶಕ್ತಿ ತೋರಿಸಲು ಸಿದ್ಧತೆ ನಡೆಸಿದ್ದಾರೆ.

ಅಧಿವೇಶನ ಮುಗಿದ ಬಳಿಕ ಹೈಕಮಾಂಡ್ ಭೇಟಿಗೆ ನಾಯಕರು ದೃಢ ನಿರ್ಧಾರ ಮಾಡಿದ್ದು, ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿಯೇ ಹೈಕಮಾಂಡ್ ಭೇಟಿಯಾಗಲು ತೀರ್ಮಾನ ಕೈಗೊಳ್ಳಲಾಗಿದೆ. ಸದ್ಯಕ್ಕೆ ಸೈಲೆಂಟ್ ಆಗಿದ್ದುಕೊಂಡೇ ಎಸ್.ಟಿ ನಾಯಕರು ಮತ್ತೊಂದು ಪ್ಲ್ಯಾನ್ ಮಾಡುತ್ತಿದ್ದು, ಹೈ ಕಮಾಂಡ್ ಭೇಟಿ ವೇಳೆ ಒಂದಷ್ಟು ದಾಖಲೆ ತೆಗದುಕೊಂಡು ಹೋಗಲು ರಾಜಣ್ಣ ಮತ್ತು ನಾಯಕರು ನಿರ್ಧರಿಸಿದ್ದಾರೆ.
ತಾವು ನೀಡಿದ್ದ ಹೇಳಿಕೆಯ ಸಂಪೂರ್ಣ ವಿಡಿಯೋವನ್ನ ರಾಗಾಗೆ ತೋರಿಸಲು ರಾಜಣ್ಣ ಮುಂದಾಗಿದ್ದು, ಪ್ರತೀ ಪದದ ತರ್ಜುಮೆ ಮಾಡಿಸಿಕೊಂಡೇ ಅವರಿಗೆ ತೋರಿಸಲು ರಾಜಣ್ಣ ತಯಾರಿ ನಡೆಸಿದ್ದಾರೆ. ರಾಜಣ್ಣ ಮಾತನಾಡಿದ ಕೆಲವೇ ಕ್ಷಣಗಳಲ್ಲಿ ಅವರು ಮಾತನಾಡಿದ್ದ ವಿಡಿಯೋವನ್ನು ರಾಜ್ಯ ಉಸ್ತುವಾರಿ ಸಚಿವ ಸುರ್ಜೇವಾಲಾಗೆ ತೋರಿಸಲಾಗಿತ್ತು. ರಾಜಣ್ಣ ಮಾತನಾಡಿದ್ದ ಪೂರ್ತಿ ಹೇಳಿಕೆಯ ವಿಡಿಯೋ ಬದಲು ಕಟ್ ಮಾಡಿದ ವಿಡಿಯೋ ತೋರಿಸಲಾಗಿತ್ತು. ಹೀಗಾಗಿ ಈ ಎಲ್ಲಾ ಎಡವಟ್ಟುಗಳನ್ನ ಹೈಕಮಾಂಡ್ ಮುಂದೆ ಇಡಲು ರಾಜಣ್ಣ ಹಾಗೂ ಅವರ ಬೆಂಬಲಿಗರು ಮುಂದಾಗಿದ್ದಾರೆ.
ಸಿದ್ದರಾಮಯ್ಯ ಜೊತೆಗೂಡಿಯೇ ದೆಹಲಿಗೆ ಹೋಗುವ ಬಗ್ಗೆಯೂ ರಾಜಣ್ಣ ಚರ್ಚೆ ಮಾಡುತ್ತಿದ್ದು, ಅಧಿವೇಶನ ಮುಗಿದ ಬಳಿಕ ದೆಹಲಿಗೆ ಪ್ರಯಾಣ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿದೆ. ದೆಹಲಿ ಭೇಟಿ ವೇಳೆ 30 ಕ್ಕೂ ಹೆಚ್ಚು ಶಾಸಕರ ತಂಡದೊಂದಿಗೆ ಪ್ರಯಾಣಕ್ಕೆ ಸಿದ್ದತೆ ಮಾಡಲಾಗಿದ್ದು, ಈ ಬಗ್ಗೆ 30ಕ್ಕೂ ಹೆಚ್ಚು ಶಾಸಕರಿಗೆ ಸತೀಶ್ ಜಾರಕಿಹೊಳಿ ಸಂದೇಶ ರವಾನಿಸಿದ್ದಾರೆ.
Private Bus: ನಾಳೆಯಿಂದ ಸಾಲು ಸಾಲು ರಜೆ – ಖಾಸಗಿ ಬಸ್ ಮಾಲಿಕರಿಗೆ ಹಬ್ಬ – ಪ್ರಯಾಣಿಕರಿಗೆ ಮಾರಿ ಹಬ್ಬ
Comments are closed.