E-Khata: ಇ-ಖಾತಾ ತಿದ್ದುಪಡಿ ವಿಧೇಯಕದ ಪ್ರಸ್ತಾಪ – ಪದೇ ಪದೇ ಸರ್ವರ್ ಸಮಸ್ಯೆ – ಇದಕ್ಕೆ ಪರಿಹಾರ ಏನು? – ಯತ್ನಾಳ್

Share the Article

E-Khata: ಹಳ್ಳಿಗಳಲ್ಲಿ ನಾಗರಿಕರಿಗೆ ಆಸ್ತಿ ದಾಖಲೆಗಳನ್ನು ನಿರ್ವಹಿಸುವುದು ಒಂದು ಸವಾಲಿನ ಕೆಲಸ. ಕಾಗದಪತ್ರಗಳಿಗಾಗಿ ಕಚೇರಿಗಳಿಗೆ ಅಲೆಯೋದೆ ಕೆಲಸವಾಗುತ್ತದೆ. ಇದೀಗ ಈ ಸಮಸ್ಯೆಗಳ ಪರಿಹಾರಕ್ಕಾಗಿ, ಕಂದಾಯ ಇಲಾಖೆ ಇ-ಖಾತಾ ಯೋಜನೆಯನ್ನು ಪರಿಚಯಿಸಿದೆ. ಆಸ್ತಿ ನಿರ್ವಹಣೆಯನ್ನು ಡಿಜಿಟಲೀಕರಣಗೊಳಿಸುವ ಮತ್ತು ಸರಳಗೊಳಿಸುವ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಆದರೆ ಈ ಯೋಜನೆ ಸರಿಯಾಗಿ ಜಾರಿಗೆ ಬಂದಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪ ಮಾಡಿದ್ದಾರೆ.

ಸಾಕಷ್ಟು ಮಂದಿ ಗ್ರಾ.ಪಂಚಾತ್ತಿಗೆ ಹೋಗ್ತಾರೆ. ಆದರೆ ಇಲ್ಲಿಯವರೆಗೆ ಖಾತೆ ಆಗ್ತಿಲ್ಲ. ಎಲ್ಲವನ್ನ ಅನ್ಲೈನ್ ಗೆ ತಂದಿದ್ದಾರೆ. ಪವರ್ ಸಮಸ್ಯೆಯಿಂದ ದಾಖಲೆ ಅಪ್ಲೋಡ್ ಆಗ್ತಿಲ್ಲ. ಚೆಕ್ ಬಂದಿ ಗುರ್ತಿಸಲು ಸಮಸ್ಯೆಯಾಗ್ತಿದೆ. ಪದೇ ಪದೇ ಸರ್ವರ್ ಸಮಸ್ಯೆ ಆಗ್ತಿದೆ. ಗ್ರಾಮ ಪಂಚಾಯತ್‌ ಚಾವಣೆ ಮೇಲೆ ಸೋಲಾರ್ ಅಳವಡಿಸಿ ಎಂದು ಯತ್ನಾಲ್‌ ಸಲಹೆ ನೀಡಿದರು.

ಬಡಾವಣೆ ನಕ್ಷೆ ಇನ್ನಿತರೆ ಸರಿಯಾಗಿ ನಿರ್ವಹಿಸಿ. ಎಲ್ಲೆಲ್ಲಿ ‌ಲೋಪದೋಷಗಳಿಗೆ ಸರಿಪಡಿಸಿ. ಗ್ರಾಮೀಣ ಜನರಿಗೆ ಅನುಕೂಲ‌ ಮಾಡಿಕೊಡಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಸದನದಲ್ಲಿ ಒತ್ತಾಯ ಮಾಡಿದರು. ಇದಕ್ಕೆ ಉತ್ತರ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಪಂಚಾಯತ್ ರಾಜ್ ಆ್ಯಕ್ಟ್ ಗೆ ತಿದ್ದುಪಡಿ ತಂದಿದ್ದೇವೆ. ಗ್ರಾಮ ಪಂಚಾಯತ್‌ ಗಳಲ್ಲಿ ಬಿ- ಖಾತಾ ಕೊಡ್ತಿಲ್ಲ. ರೂಲ್ಸ್ ಇನ್ನು ಫ್ರೇಮ್ ಮಾಡ್ತಿದ್ದೇವೆ. ಸಾರ್ವಜನಿಕರಿಂದ 29 ಆಕ್ಷೇಪಣೆ ಬಂದಿವೆ. 15 ದಿನದೊಳಗೆ ರೂಲ್ಸ್ ಫೈನಲ್ ಮಾಡ್ತೇವೆ ಎಂದರು.tm

ಇ- ಖಾತಾದಲ್ಲೂ ಗೊಂದಲಗಳಿವೆ. ದಾಖಲೆ ಸರಿಪಡಿಸೋಕೆ ಸಮಸ್ಯೆಯಾಗ್ತಿದೆ. ಡಿಜಿಟಲ್ ಅಳವಡಿಕೆಗೆ ಸಮಯ ಬೇಕಿದೆ. ಇಂಟರ್ ನೆಟ್, ಸರ್ವರ್ ಸಮಸ್ಯೆ ಸರಿಪಡಿಸಬೇಕಿದೆ. ಇ- ಸ್ವತ್ತು ಒಂದೂವರೆ ತಿಂಗಳಲ್ಲಿ ಸ್ಟಾರ್ಟ್ ಮಾಡ್ತೇವೆ. ದಿಶಾಂಕ ಆ್ಯಪ್ ಕೂಡ ಮಾಡಿದ್ದೇವೆ. ಕಳೆದ ಎರಡು ವರ್ಷದಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಗೆ ತಂದಿದ್ದೇವೆ. ದೇಶದಲ್ಲಿ ಹೆಚ್ಚು ತೆರಿಗೆ ಕಲೆಕ್ಟ್ ಮಾಡಿದ್ದೇವೆ. 1730 ಕೋಟಿ ತೆರಿಗೆ ಕಲೆಕ್ಟ್ ಆಗಿದೆ. ತೆರಿಗೆ ಮೂಲಸೌಕರ್ಯಗಳಿಗೆ ಖರ್ಚಾಗಲಿದೆ. ಅಪ್ಡೇಟ್ ಆದ್ರೆ ಸಾವಿರಾರು ಕೋಟಿ ಆದಾಯ ಬರಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಯತ್ನಾಳ್‌ ಪ್ರಶ್ನೆಗೆ ಉತ್ತರಿಸಿದರು.

Dharmasthala: ಧರ್ಮಸ್ಥಳ ಪ್ರಕರಣ – ‘ಮಾಸ್ಕ್ ಮ್ಯಾನ್’ ಮಂಪರು ಪರೀಕ್ಷೆಗೆ SIT ಸಿದ್ಧತೆ!!

Comments are closed.