Fire Accident: ಸ್ಕೂಲ್ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ – ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

Fire Accident: ಬೆಂಗಳೂರಿನ ಬಾಣಸವಾಡಿಯ OMBR ಲೇಔಟ್ ನಲ್ಲಿ ಕಳೆದ ರಾತ್ರಿ 10:45ಕ್ಕೆ ಪಾರ್ಕ್ ಮಾಡಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಬಸ್ ನ ಓಳಗೆ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾದ ಘಟನೆ ನಡೆದಿದೆ. ಮಾಹಿತಿ ತಿಳಿದ ಕೂಡಲೆ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿ ಆರಿಸಿದೆ. ಸ್ಥಳಕ್ಕೆ ರಾಮಮೂರ್ತಿ ನಗರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಅರುಣ್ ಎಂಬುವವರಿಗೆ ಸೇರಿದ ಖಾಸಗಿ ಶಾಲೆ ಬಸ್ ಇದಾಗಿದ್ದು, ಘಟನೆಯಲ್ಲಿ ಮೃತವ್ಯಕ್ತಿ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ. ಮೃತವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ. 30 ವರ್ಷ ಆಸುಪಾಸಿನ ವ್ಯಕ್ತಿ ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ರಾಮಮೂರ್ತಿ ನಗರ ಠಾಣೆಯಲ್ಲಿ UDR ದಾಖಲು ಮಾಡಲಾಗಿದ್ದು, ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಖಾಸಗಿ ಬಸ್ ನಲ್ಲಿ ಮೃತ ವ್ಯಕ್ತಿ ಮಲಗಲು ಬಂದಿದ್ದು, ಮಲಗಲು ಚಾಪೆ ದಿಂಬು ತಂದಿರೋದು ಪೊಲೀಸರ ಪರಿಶೀಲನೆಯಲ್ಲಿ ಪತ್ತೆಯಾಗಿದೆ. ಸುಮಾರು ಮೂರು ತಿಂಗಳಿನಿಂದಲೇ ಈ ಖಾಸಗಿ ಶಾಲೆ ಬಸ್ ಕೆಟ್ಟು ನಿಂತಿತ್ತು. 14 ವರ್ಷದ ಹಳೆ ಬಸ್ ಗೆ ಎಫ್.ಸಿ, ಇನ್ಯೂರೆನ್ಸ್ ಮುಗಿದಿತ್ತು. ಹೀಗಾಗಿ ನಿರ್ಜನ ಪ್ರದೇಶದಲ್ಲಿ ಮಾಲೀಕ ಅರುಣ್ ಬಸ್ ನಿಲ್ಲಿಸಿದ್ದರು. ನಿನ್ನೆ ಸಂಜೆ ಕೂಡ ಬಸ್ ಬಳಿ ಬಂದು ನೋಡಿಕೊಂಡು ಹೋಗಿದ್ದರು. ಬಸ್ ಗೆ ಸರಿಯಾಗಿ ಡೋರ್ ಲಾಕ್ ಆಗಿರಲಿಲ್ಲ. ಹೀಗಾಗಿ ಬಸ್ ನ ಒಳಗೆ ಹೋಗಿ ಮೃತ ವ್ಯಕ್ತಿ ಧೂಮಪಾನ ಮಾಡಿ ಮಲಗಿರೋ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಬಸ್ ನಲ್ಲಿ ಕೆಲ ಬಿಡಿ ತುಂಡುಗಳು ಪತ್ತೆಯಾಗಿದೆ ಎಂದು ಎನ್ನಲಾಗ್ತಿದೆ
ಬೀಡಿ ಸೇದಿದ ತುಂಡಿನಿಂದ ಬಸ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ಯಾ ಅಥವಾ ಬೇರೆ ಯಾರಾದ್ರು ಬಸ್ ಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ರಾ ಅನ್ನೊ ಆಯಾಮದಲ್ಲಿ ಪೊಲೀಸರ ತನಿಖೆ ಮುಂದುವರೆಸಿದ್ದಾರೆ.
Comments are closed.