Dharmasthala case: 13ನೇ ಸ್ಥಳದಲ್ಲಿ ಜಿಪಿಆ‌ರ್ ಕಾರ್ಯಾಚರಣೆ ಮುಕ್ತಾಯ – ಯಾವುದೇ ಫಲ ಕೊಡದ ಜಿಪಿಆರ್‌ – ಜೆಸಿಬಿಯಲ್ಲೇ ಉತ್ಖನನ ಕಾರ್ಯ

Share the Article

Dharmasthala case: ಧರ್ಮಸ್ಥಳದಲ್ಲಿ ಹಲವು ಶವಗಳನ್ನು ರಹಸ್ಯವಾಗಿ ಹೂತಿರುವ ಪ್ರಕರಣದಲ್ಲಿ ಅನಾಮಧೇಯ ದೂರುದಾರ ಗುರುತಿಸಿದ 13ನೇ ಸ್ಥಳದಲ್ಲಿ ಮಂಗಳವಾರ ಗೌಂಡ್ ಪೆನೆಟ್ರೇಟಿಂಗ್ ರಡಾರ್ (ಜಿಪಿಆರ್) ಮೂಲಕ ನಡೆದ ಕಾರ್ಯಾಚರಣೆ 40 ನಿಮಿಷಗಳಲ್ಲಿ ಮುಕ್ತಾಯವಾಗಿದೆ. ಈ ಕಾರ್ಯಾಚರಣೆಯಲ್ಲಿ ಕಳೇಬರದ ಯಾವುದೇ ಸುಳಿವು ದೊರೆತಿಲ್ಲ. ಜಿಪಿಆ‌ರ್, ಭೂಮಿಯ ಒಳಗಿನ ವಸ್ತುಗಳನ್ನು ಗುಂಡಿ ತೆಗೆಯದೆ, ಸ್ಕ್ಯಾನ್ ಮಾಡಿ ಪತ್ತೆ ಮಾಡುವ ಆಧುನಿಕ ತಂತ್ರಜ್ಞಾನವಾಗಿದ್ದು, ಇದನ್ನು ಮಾನವ ಅವಶೇಷಗಳನ್ನು ಪತ್ತೆಹಚ್ಚಲು ಬಳಸಲಾಗುತ್ತದೆ.

3ರಲ್ಲಿ ಶವಗಳು ಇದ್ದೇ ಇದೆ ಎಂದು ಈ ಸ್ಥಳವನ್ನು ದೂರುದಾರ ಗುರುತಿಸಿದ್ದು, ಇದರಲ್ಲಿ ಶವಗಳಿರುವ ಬಗ್ಗೆ ಆತ ಗಾಢವಾಗಿ ನಂಬಿಕೆ ವ್ಯಕ್ತಪಡಿಸಿದ್ದ. ಆದರೆ, ಜಿಪಿಆರ್ ಫಲಿತಾಂಶಗಳು ಈ ಆರೋಪವನ್ನು ದೃಢೀಕರಿಸಲಿಲ್ಲ. ಮಳೆಯ ಹಿನ್ನೆಲೆ ಜಿಪಿಆರ್‌ ಗೆ ಕೇವಲ ನೀರಿನ ಅಂಶ ಮಾತ್ರ ಪತ್ತೆಯಾದ ಹಿನ್ನೆಲೆ ತಾಂತ್ರಿಕ ಕಾರಣಗಳಿಂದಾಗಿ ಇದು ಅವಶೇಷಗಳನ್ನು ತೋರಿಸುವಲ್ಲಿ ವಿಫಲವಾಗಿದೆ.

ಸ್ಥಳೀಯರ ಪ್ರಕಾರ, ಈ ಪ್ರದೇಶದಲ್ಲಿ ಕಿಂಡಿ ಅಣೆಕಟ್ಟಿನ ನಿರ್ಮಾಣ ಮತ್ತು ಸ್ನಾನ ಘಟ್ಟದ ಕಾಮಗಾರಿಗಳಿಂದಾಗಿ ಭೂಮಿಯ ಸ್ವರೂಪ ಬದಲಾಗಿದ್ದು, 10-15 ವರ್ಷಗಳ ಹಿಂದಿನ ಅವಶೇಷಗಳು ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ. ಆದರೆ ಪಟ್ಟು ಬಿಡದ ದೂರುದಾರ ಈ ಜಾಗವನ್ನು ಜಿಸಿಬಿ ಮೂಲಕ ಆಗೆಯುವಂತೆ ಮನವಿ ಮಾಡಿದ್ದಾನೆ. ಅವನ ಬೇಡಿಕೆಯಂತೆ ಇದೀಗ ಜೀಸಿಬಿ ಮೂಲಕ 132 ಪಾಯಿಂಟ್‌ ಅನ್ನು ಉತ್ಖನನ ಕಾರ್ಯವನ್ನು ಮಾಡಲಾಗುತ್ತಿದೆ.

Comments are closed.