Pavitra Gowda: ಪವಿತ್ರ ಗೌಡ ಫೋಟೋವನ್ನು ಕೈಗೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ !! ಅದರ ಕೆಳಗೆ ಬರೆಸಿದ್ದೇನು ಗೊತ್ತಾ?

Share the Article

Pavitra Gowda: ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ (Pavitra Gowda) ಅವರಿಗೆ ಇದೀಗ ಅವರ ಅಭಿಮಾನಿಯೊಬ್ಬರು ಸಖತ್‌ ಸರ್‌ಪ್ರೈಸ್‌ ಕೊಟ್ಟಿದ್ದು, ಎಡಗೈ ಮೇಲೆ ದೊಡ್ಡದಾಗಿ ಪವಿತ್ರಾ ಗೌಡ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಹೌದು ಪವಿತ್ರ ಗೌಡ ಅವರ ಯುವ ಅಭಿಮಾನಿಯೊಬ್ಬ ತನ್ನ ಎಡಗೈ ಮೇಲೆ ದೊಡ್ಡದಾಗಿ ಪವಿತ್ರ ಗೌಡ ಅವರ ಮುಖದ ಹಚ್ಚೆ ಹಾಕಿಸಿಕೊಂಡಿದ್ದಾನೆ. ಚಿತ್ರದ ಕೆಳಗೆ ಅಕ್ಕಾ ಎಂದು ಕೂಡ ಬರೆಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪವಿತ್ರಾ ಗೌಡ ಮನೆಗೆ ಬಂದು ಅದನ್ನ ತೋರಿಸಿದ್ದಾರೆ. ಪವಿತ್ರಾ ಅವರಂತೂ ಭಾರಿ ಖುಷಿಯಾಗಿದ್ದಾರೆ.

ಅವರು ಕೈಯಿಗೆ ಟ್ಯಾಟೂ ಹಾಕಿಸಿಕೊಂಡು, ಅದನ್ನ ಮುಚ್ಚಿಕೊಂಡೇ ಪವಿತ್ರಾ ಮನೆಗೆ ಬಂದಿದ್ದಾರೆ. ಏನಿದು ಎಂದು ಪವಿತ್ರಾ ಗೌಡ ಕೇಳಿದ್ದಕ್ಕೆ, ನೀವೇ ನೋಡಿ ಎಂದಿದ್ದಾರೆ. ಪವಿತ್ರಾ ಗೌಡ ಅವರು ಆ ಹುಡುಗನ ಕೈಯಿಗೆ ಮುಚ್ಚಿದ ಕವರ್‌ ತೆಗೆಯುತ್ತಿದ್ದಂತೆ ಅಚ್ಚರಿಗೊಂಡಿದ್ದಾರೆ. ತಮ್ಮದೇ ಫೋಟೋ ನೋಡಿ ಖುಷಿಪಟ್ಟಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

ಇನ್ನು ಈ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ಪವಿತ್ರಾ ಗೌಡ ʼನೀನು ನನ್ನ ಬಗ್ಗೆ ತೋರಿಸುತ್ತಿರುವ ಪ್ರೀತಿ ಮತ್ತು ಅಕ್ಕರೆ ತುಂಬ ಖುಷಿ ಕೊಟ್ಟಿದೆ. ನನ್ನ ಹೃದಯವನ್ನ ಸ್ಪರ್ಶಿಸಿತು. ಆದರೆ ನೀನು ನನ್ನ ಮೇಲೆ ಇಟ್ಟಿರುವ ಪ್ರೀತಿ, ಗೌರವ, ಆದರವನ್ನ ತೋರಿಸಲು ಹೀಗೆ ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದೇನೂ ಇಲ್ಲ. ನನ್ನ ಮೇಲೆ ತೋರಿದ ಈ ಪ್ರೀತಿ ನನ್ನ ಜೀವನದಲ್ಲಿ ಶಾಶ್ವತ ನೆನಪು. ನಿಮ್ಮ ಬೆಂಬಲ ಮತ್ತು ಕಾಳಜಿಗೆ ಧನ್ಯವಾದಗಳುʼ ಎಂದು ತಿಳಿಸಿದ್ದಾರೆ.

Comments are closed.