MP: K ‘ಫಾರ್ ಕಾಬಾ, M ಫಾರ್ ಮಸೀದಿ’ ಎಂದು ಮಕ್ಕಳಿಗೆ ಬೋಧನೆ- ಪ್ರಾಂಶುಪಾಲರ ವಿರುದ್ಧ ತನಿಖೆಗೆ ಆದೇಶ

Share the Article

MP: ಮಧ್ಯಪ್ರದೇಶದಲ್ಲಿ ಇಸ್ಲಾಂ ಧರ್ಮದ ಪದಗಳ ಉಲ್ಲೇಖವಿರುವ ಹಿಂದಿ ವರ್ಣಮಾಲೆ ಚಾರ್ಟ್ ಅನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹೌದು, ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಕಾನ್ವೆಂಟ್ ಶಾಲೆಯ ಪ್ರಾಂಶುಪಾಲ ಐಎ ಖುರೇಷಿ ವಿದ್ಯಾರ್ಥಿಗಳಿಗೆ ಹಿಂದಿ ವರ್ಣಮಾಲೆಯ ಚಾರ್ಟ್‌ಗಳನ್ನು ನೀಡಿದ್ದಾರೆ. ಚಾರ್ಟ್ ನಲ್ಲಿ ‘ಕ’ ಎಂದರೆ ‘ಕಾಬಾ’, ‘ಎಂ’ ಎಂದರೆ ‘ಮಸೀದಿ’ ಮತ್ತು ‘ಎನ್’ ಎಂದರೆ ‘ನಮಾಜ್’ ಎಂದ ಪದಗಳನ್ನು ಬಳಸಲಾಗಿದೆ. ಈ ಘಟನೆ ಬಯಲಿಗೆ ಬರುತ್ತಿದ್ದಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿ ಖುರೇಷಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ವಿವಾದ ಭುಗಿಲೆದ್ದಿದ್ದು, ಶಿಕ್ಷಣ ಇಲಾಖೆ ತನಿಖೆ ಆರಂಭಿಸಿದೆ.

ಇನ್ನೂ ಪ್ರಾಂಶುಪಾಲ ಖುರೇಷಿ ತಮ್ಮ ಅಜಾಗರೂಕ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಉರ್ದು-ಹಿಂದಿ ಮಿಶ್ರಿತ ಕೋಷ್ಟಕಗಳನ್ನು ಹೊಂದಿರುವ ಒಂದು ಅಥವಾ ಎರಡು ಪುಸ್ತಕಗಳು ವಿದ್ಯಾರ್ಥಿಗಳನ್ನು ತಲುಪಿವೆ ಎಂದು ಹೇಳಿದರು. ವರ್ಣಮಾಲೆಯ ಚಾರ್ಟ್‌ಗಳನ್ನು ಭೋಪಾಲ್‌ನಿಂದ ಆರ್ಡರ್ ಮಾಡಲಾಗಿತ್ತು. ಮಾರಾಟಗಾರರ ತಪ್ಪಿನಿಂದಾಗಿ, ಮದರಸಾಗಳಲ್ಲಿ ಸಾಮಾನ್ಯವಾಗಿ ಬಳಸುವ ಮೂರು ಅಥವಾ ನಾಲ್ಕು ವಸ್ತುಗಳನ್ನು ಸೇರಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

Bandipura: ಕಾಡಾನೆ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋದ ವ್ಯಕ್ತಿ – ಚಡ್ಡಿ ಉದುರಿಸಿ ಕಳಿಸಿದ ಆನೆ!!

Comments are closed.