Home News Bandipura: ಕಾಡಾನೆ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋದ ವ್ಯಕ್ತಿ – ಚಡ್ಡಿ ಉದುರಿಸಿ ಕಳಿಸಿದ ಆನೆ!!

Bandipura: ಕಾಡಾನೆ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋದ ವ್ಯಕ್ತಿ – ಚಡ್ಡಿ ಉದುರಿಸಿ ಕಳಿಸಿದ ಆನೆ!!

Hindu neighbor gifts plot of land

Hindu neighbour gifts land to Muslim journalist

Bandipura: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಭಾನುವಾತ ಕಾಡಾನೆಯ ಫೋಟೊ ತೆಗೆಯಲು ಹೋದ ವ್ಯಕ್ತಿಯೊಬ್ಬರ ಮೇಲೆ ಆನೆ ದಾಳಿ ನಡೆದಿದೆ. ಅಷ್ಟೇ ಅಲ್ಲದೆ ಆತನ ಚಡ್ಡಿಯನ್ನು ಜಾರಿಸಿ ಕಳಿಸಿದೆ.

ಚಾಮರಾಜನಗರದ (chamarajanagar) ಬಂಡೀಪುರದ (bandipura) ಕಾಡಿನ ಮಧ್ಯೆ ಸಿನಿಮಾ ಶೈಲಿಯ ಘಟನೆ ನಡೆದಿದ್ದು, ಹುಚ್ಚಾಟ ಮೆರೆದ ಪ್ರವಾಸಿಗನ (tourist)ಮೇಲೆ ಕಾಡಾನೆ (elephant) ಅಟ್ಯಾಕ್ ಮಾಡಿದೆ.

ತಮಿಳುನಾಡಿನಿಂದ ಗುಂಡ್ಲುಪೇಟೆಗೆ ಬರುವ ಮಾರ್ಗ ಮಧ್ಯೆ ರಸ್ತೆ ಬದಿಯಲ್ಲಿ ನಿಂತಿದ್ದ ಒಂಟಿ ಆನೆಯ ಸನಿಹಕ್ಕೆ ತೆರಳಿ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದ ಆಸಾಮಿಯನ್ನ ಅಟ್ಟಿಸಿಕೊಂಡು ಹೋಗಿದೆ. ಏ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ಆತನ ಚಡ್ಡಿ ಉದುರಿ ರೋಡಲ್ಲಿ ಮಲಗಿರುವುದನ್ನು ಕೂಡ ಕಾಣಬಹುದು.

ಆನೆ ದಾಳಿಯಿಂದ ಗಾಯಗೊಂಡಿದ್ದ ಆತನನ್ನು ಜೊತೆಗೆ ಬಂದಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾವ ಆಸ್ಪತ್ರೆಗೆ ಸೇರಿಸಲಾಗಿದೆ, ಪ್ರವಾಸಿಗನ ಹೆಸರು, ವಿಳಾಸ ತಿಳಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆನೆ ದಾಳಿಯ ವಿಡಿಯೋ ವೈರಲ್ ಆಗಿದೆ.

Puttur: ಪುತ್ತೂರು: ಪ್ರೀತಿಸಿ ಮದುವೆಯಾಗುತ್ತೆನೆಂದು ನಂಬಿಸಿ ಗರ್ಭಿನಿಯಾಗಿಸಿದ ಪ್ರಕರಣ; ಬೆದರಿಕೆಯ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆಗೆ ಮನವಿ!