Mysore : ದಸರಾ ಆನೆಗಳ ತೂಕ ಪರೀಕ್ಷೆ – ಕ್ಯಾಪ್ಟನ್ ‘ಅಭಿಮನ್ಯು’ ಮೀರಿಸಿದ ‘ಭೀಮ’

Share the Article

Mysore : ದಸರಾ ಆನೆಗಳ ತೂಕ ಪರೀಕ್ಷೆ ನಡೆದಿದ್ದು, ತೂಕದಲ್ಲಿ ಎಲ್ಲರ ಫೆವರೇಟ್ ಭೀಮ ತನ್ನ ಕ್ಯಾಪ್ಟನ್ ಅಭಿಮನ್ಯುವನ್ನೇ ಮೀರಿಸಿದ್ದಾನೆ. ಯಸ್, 5,360 ಕೆ.ಜಿ ತೂಗಿದ ಕ್ಯಾಪ್ಟನ್ ‘ಅಭಿಮನ್ಯು’ ದಸರಾ ಆನೆಗಳಲ್ಲೇ ಎರಡನೇ ಹೆಚ್ಚು ತೂಕದ ಆನೆಯಾಗಿ ಹೊರಹೊಮ್ಮಿದ್ದರೆ, ಮೊದಲ ಸ್ಥಾನದಲ್ಲಿ 5,465 ಕೆ.ಜಿ ತೂಕದ ಮೂಲಕ ಭೀಮ ಇದ್ದಾನೆ.

ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿಯಿಂದ ಮೊದಲ ಹಂತದಲ್ಲಿ 9 ಆನೆಗಳು ಮೈಸೂರು ಪ್ರವೇಶಿಸಿದ್ದು, ಇಂದು ಆನೆಗಳಿಗೆ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ತೂಕದಲ್ಲಿ ಅಭಿಮನ್ಯುವನ್ನು ಭೀಮ ಮೀರಿಸಿದ್ದಾನೆ. ಕಳೆದ ಬಾರಿ ದಸರಾದಲ್ಲಿ ಅಭಿಮನ್ಯು ಹೆಚ್ಚು ತೂಕ ಹೊಂದಿದ್ದ. ಈ ಬಾರಿ 25 ವರ್ಷದ ಭೀಮ ಹೆಚ್ಚು ತೂಕ ಹೊಂದಿದ್ದಾನೆ. ದಸರಾ ವೇಳೆಗೆ ಇವುಗಳ ತೂಕ ಮತ್ತಷ್ಟು ಹೆಚ್ಚಾಗಲಿದೆ.

 

ಇನ್ನೂ ಅಭಿಮನ್ಯು- 5360 ಕೆಜಿ, ಭೀಮ-5460 ಕೆಜಿ, ಪ್ರಶಾಂತ-5110 ಕೆಜಿ, ಧನಂಜಯ-5310 ಕೆಜಿ, ಮಹೇಂದ್ರ-5120 ಕೆಜಿ, ಏಕಲವ್ಯ-5305 ಕೆಜಿ, ಕಂಜನ್‌-4880 ಕೆಜಿ, ಕಾವೇರಿ-3110 ಕೆಜಿ ತೂಕ ಹೊಂದಿವೆ.

ಇನ್ನೂ ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಜಂಬೂ ಸವಾರಿ ಮೆರವಣಿಗೆಗಾಗಿ ತಾಲೀಮು ನಡೆಸಲಾಗುತ್ತಿದೆ. ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಬೆಳಗ್ಗೆ ಮತ್ತು ಸಂಜೆ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತದೆ.

Dharmasthala case: ಧರ್ಮಸ್ಥಳ ಪ್ರಕರಣ – ಇದು ಮತಾಂತರಿಗಳ ಕೈವಾಡ – ದೂರುದಾರನಿಗೆ ಮಂಪರು ಪರೀಕ್ಷೆ ಮಾಡಿಸಿ – ಸಿ ಟಿ ರವಿ ಆಗ್ರಹ

Comments are closed.