Pratap Simha : ಸೌಜನ್ಯಾ ಪ್ರಕರಣದಲ್ಲಿ 3 ತನಿಖೆ ಆಗಿವೆ, ಅವರಮ್ಮ ಬೇರೆ ಯಾವುದಾದ್ರೂ ತನಿಖೆಗೆ ಹೇಳಿದರೆ ನಾವೇ ಅರ್ಜಿ ಹಾಕ್ತೇವೆ – ಪ್ರತಾಪ್ ಸಿಂಹ!!

Share the Article

Pratap Simha: ದೇಶಾದ್ಯಂತ ಸದ್ದು ಮಾಡುತ್ತಿರುವ ಧರ್ಮಸ್ಥಳ ಪ್ರಕರಣದ ಕುರಿತು ಇದೀಗ ಮೈಸೂರು ಮತ್ತು ಮಡಿಕೇರಿಯ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಾಧ್ಯಮಗಳ ಮುಂದೆ ಮಾತನಾಡಿದ್ದು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ, ಬದಲಾಗಿ ‘ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಟಾರ್ಗೆಟ್’ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಹೌದು, ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಧರ್ಮಸ್ಥಳದಲ್ಲಿ ಆಗುತ್ತಿರುವುದು ಸುಳ್ಳು ಆರೋಪ ಎಂದು ಎಲ್ಲವನ್ನು ತೀವ್ರವಾಗಿ ಖಂಡಿಸಿದರು. ಅಲ್ಲದೆ ‘ನಮಗೂ ಕೂಡ ಸೌಜನ್ಯ ಪ್ರಕರಣದ ಬಗ್ಗೆ ನೋವಿದೆ. ನಾವೆಲ್ಲರೂ ಸೌಜನ್ಯ ಪರವಾಗಿದ್ದೇವೆ. ಆದರೆ ಈ ಪ್ರಕರಣವನ್ನು ಮೂರು ತನಿಖಾ ಸಂಸ್ಥೆಗಳು ಈಗಾಗಲೇ ತನಿಖೆ ನಡೆಸಿವೆ. ಇದರ ಬಗ್ಗೆ ಬೇರೆ ಯಾವುದೇ ರೀತಿಯ ತನಿಖೆ ಆಗಬೇಕಿದ್ದರೆ, ಸೌಜನ್ಯ ಅವರ ತಾಯಿ ಹೇಳಲಿ, ನಾವೇ ಅವರ ಪರವಾಗಿ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತೇವೆ’ ಎಂದರು.

ಇದನ್ನೂ ಓದಿ: Viral Video : ‘ಬಾರೆಲ ಹಕ್ಕಿ, ಬಣ್ಣದ ಹಕ್ಕಿ.. ಹಾರುವ ಹಕ್ಕಿ.. ‘- ರಷ್ಯಾದ ಬಾಲಕಿ ಬಾಯಲ್ಲಿ ಕನ್ನಡ ಕವಿತೆ!!

Comments are closed.