Home News Viral Video : ‘ಬಾರೆಲ ಹಕ್ಕಿ, ಬಣ್ಣದ ಹಕ್ಕಿ.. ಹಾರುವ ಹಕ್ಕಿ.. ‘- ರಷ್ಯಾದ ಬಾಲಕಿ...

Viral Video : ‘ಬಾರೆಲ ಹಕ್ಕಿ, ಬಣ್ಣದ ಹಕ್ಕಿ.. ಹಾರುವ ಹಕ್ಕಿ.. ‘- ರಷ್ಯಾದ ಬಾಲಕಿ ಬಾಯಲ್ಲಿ ಕನ್ನಡ ಕವಿತೆ!!

Hindu neighbor gifts plot of land

Hindu neighbour gifts land to Muslim journalist

Viral Video : ರಷ್ಯಾದ ಬಾಲಕಿಯೊಬ್ಬಳು ಬೆಂಗಳೂರಿನಲ್ಲಿ ಕನ್ನಡ ಕವಿತೆ ಹಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಕೆಗೆ ಇಲ್ಲಿನ ಭಾರತೀಯ ಸಹಪಾಠಿಗಳು ಇದ್ದಾರೆ. ಕೆಲವೇ ವರ್ಷಗಳಿಂದ ಇಲ್ಲಿದ್ದು, ಕನ್ನಡ ಕಲಿತು ಕನ್ನಡೇತರರಿಗೆ ಬಾಲಕಿ ಮಾದಿಯಾಗಿದ್ದಾಳೆ.

ಹೌದು, ನೆರೆಹೊರೆಯ ಸ್ನೇಹಿತೆಯರ ಜೊತೆಗೆ ಸೈಕಲ್ ತುಳಿಯುತ್ತಾ ರಷ್ಯಾದ ಹುಡುಗಿ ‘ಬಣ್ಣದ ಹಕ್ಕಿ…ಹಾರಲು ಹಕ್ಕಿ’ ಎಂದು ಕನ್ನಡ ಕವಿತೆಯನ್ನು ಹಾಡುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಕನ್ನಡಿಗರ ಮನಸ್ಸನ್ನು ಗೆದ್ದ ಈ ವಿಡಿಯೋ ಅನ್ನು ಆ ಬಾಲಕಿ ತಾಯಿ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಬಾಲಕಿ ತಾಯಿ ವಿಡಿಯೋ ಮೇಲೆ ‘ಭಾರತದಲ್ಲಿ 3 ವರ್ಷಗಳು. ಗೆಳತಿಯರು, ಸಹಪಾಠಿಗಳು & 3 ವರ್ಷಗಳ ಸ್ನೇಹ’ ವೆಂದು ಹೇಳಿಕೊಂಡಿದ್ದಾರೆ. ಮೂರು ವರ್ಷಗಳಿಗೂ ಹೆಚ್ಚು ಕಾಲ ಸಹಪಾಠಿಗಳು ಮತ್ತು ಆಪ್ತ ಸ್ನೇಹಿತರಾದ ಇಬ್ಬರು ಬಾಲಕಿಯರು ಹಾಡಿದ ಹಾಡು ಹರಿದಾಡುತ್ತಿದೆ. ವೀಡಿಯೊ ಪ್ರಾರಂಭವಾಗುವ ಮೊದಲು 2022, 2023 ಹಾಗೂ 2025ರ ಫೋಟೋಗಳು ಕಾಣಿಸುತ್ತವೆ. ನಂತರ ಬಣ್ಣದ ಹಕ್ಕಿ ಹಾಡು ಹಾಡುವ ವಿಡಿಯೋ ಪ್ರಸಾರವಾಗುತ್ತದೆ.

ಈ ಹಾಡನ್ನು ಈ ಇಬ್ಬರು ಮಕ್ಕಳು ಸೈಕಲ್ ಓಡಿಸುತ್ತಾ ಸೊಗಸಾಗಿ ಹಾಡಿದ್ದಾರೆ. ಕೆಲ ಕನ್ನಡದ ಮಕ್ಕಳಿಗೂ ಗೊತ್ತಿರದ ಈ ಹಾಡನ್ನು ರಷ್ಯನ್ ಬಾಲೆಯ ಬಾಯಲ್ಲಿ ಕೇಳಿದ ಕನ್ನಡಿಗರು ಫುಲ್ ಖುಷಿಯಾಗಿದ್ದಾರೆ. ಹಲವರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ.

https://www.instagram.com/reel/DM9eUhCx0At/?igsh=MWJsdGoyM2NzdG1t

ಇದನ್ನೂ ಓದಿ: Udupi: ವರದಕ್ಷಿಣೆ ಕಿರುಕುಳ, ವಿದೇಶದಿಂದ ಮೊಬೈಲ್‌ನಲ್ಲಿಯೇ ತಲಾಖ್‌ ನೀಡಿದ ಪತಿ, ಠಾಣೆಗೆ ದೂರು ದಾಖಲು