Varamahalakshmi: ‘ವರಮಹಾಲಕ್ಷ್ಮಿ’ ಎಫೆಕ್ಟ್ – ಹೂವು, ಹಣ್ಣುಗಳ ಬೆಲೆ ಕೇಳಿ ಬೆಚ್ಚಿಬಿದ್ದ ಗ್ರಾಹಕರು!!

Share the Article

Varamahalakshmi: ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಸಂಭ್ರಮ-ಸಡಗರದಿಂದ ಆಚರಿಸಲು ನಗರದ ಜನತೆ ಸಿದ್ಧತೆ ನಡೆಸಿದ್ದು, ಬುಧವಾರ ಬೆಳಿಗ್ಗೆಯಿಂದಲೇ ಹೂವು ಮತ್ತು ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದರು. ಈ ಬೆನ್ನಲ್ಲೇ ಹಣ್ಣುಗಳ ಬೆಲೆ ಗಗನಕ್ಕೇರಿದೆ. ಕೊಳ್ಳುವವರ ಕೈ ಸುಡುವಂತಾಗಿದೆ.

ಹೌದು, ರಾಜಧಾನಿಯಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿದ್ಧತೆ ಜೋರಾಗಿದ್ದು, ಬುಧವಾರ ಹೂವಿನ ಬೆಲೆ ಕಳೆದ ವಾರಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಾಗಿದ್ದು, ಹಣ್ಣು, ಇತರೆ ಪೂಜಾ ಸಾಮಗ್ರಿ ದರವೂ ಮತ್ತಷ್ಟು ಗಗನಕ್ಕೇರಿದೆ. ಕಳೆದ ಎಂಟತ್ತು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೂವುಗಳ ಪೂರೈಕೆ ಕಡಿಮೆಯಾಗಿದ್ದು, ಹೂವಿನ ದರ ದುಬಾರಿಯಾಗಿತ್ತು. ಇದಲ್ಲದೆ, ಮಲ್ಲೇಶ್ವರ ಮಾರುಕಟ್ಟೆ, ಗಾಂಧಿಬಜಾರ್, ಯಶವಂತಪುರ, ಮಡಿವಾಳ ಮಾರುಕಟ್ಟೆ, ಮಾಗಡಿ ರಸ್ತೆ ಹೀಗೆ ಹಲವು ರಸ್ತೆಯಲ್ಲಿ ಖರೀದಿ ಭರಾಟೆ ಇತ್ತು.

ಎಷ್ಟಾಗಿದೆ ಹೂವಿನ ದರ :

ಕನಕಾಂಬರದ ಗರಿಷ್ಠ ದರ ಕೆ.ಜಿ.ಗೆ ₹3 ಸಾವಿರ, ಮಲ್ಲಿಗೆ ಹೂವಿನ ದರ ಕೆ.ಜಿ.ಗೆ ₹1,400ರಿಂದ ₹1,600 ತಲುಪಿದೆ. ಪ್ರತಿ ಕೆ.ಜಿ.ಗೆ ಸೇವಂತಿಗೆ ₹ 300, ಗುಲಾಬಿ ₹ 400, ಸುಗಂಧರಾಜ ₹350, ಚೆಂಡು ಹೂವು ₹80ರಂತೆ ಮಾರಾಟವಾಗುತ್ತಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ವರಮಹಾಲಕ್ಷ್ಮಿ ಹಬ್ಬ ಸಮೀಪಿಸಿದ ಬಳಿಕ ಹೂವುಗಳ ದರದಲ್ಲಿ ಭಾರಿ ಏರಿಕೆಯಾಗಿದೆ.

ಹಣ್ಣಿನ ದರ ಎಷ್ಟು?

ಹಣ್ಣುಗಳ ಬೆಲೆಯೂ ಸಹ ಜಾಸ್ತಿ ಇದೆ. ಏಲಕ್ಕಿ ಬಾಳೆ ಕೆಜಿಗೆ 120 ರೂ ನಿಂದ 150 , ಪೈನಾಪಲ್‌ ಜೋಡಿಗೆ 100 ರೂ. , ಮೂಸಂಬಿ 130, ಸೇಬು 250, ದಾಳಿಂಬೆ 260 , ಮಾವು 120 ರೂ.ಗೆ ಮಾರುಕಟ್ಟೆಯಲ್ಲಿ ಮರಾಟವಾಗುತ್ತಿದೆ .

Comments are closed.