Donald Trump: ಟ್ರಂಪ್ ಸುಂಕದ ಆಟ – ಯಾವೆಲ್ಲಾ ವಸ್ತುಗಳು ಆಗಲಿದೆ ದುಬಾರಿ ? ಯಾವುದೆಲ್ಲಾ ಹೊರೆ?

Donald Trump : ಭಾರತದ ಮೇಲೆ ಇತ್ತೀಚೆಗಷ್ಟೇ ಶೇ.25ರಷ್ಟು ಪ್ರತಿತೆರಿಗೆ ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ದಂಡದ ರೂಪದಲ್ಲಿ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ತೆರಿಗೆ ಹೇರುವುದಾಗಿ ಘೋಷಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಈ ತೆರಿಗೆಯ ನಾಟಕದಿಂದಾಗಿ ಭಾರತದಲ್ಲಿ ಯಾವೆಲ್ಲ ವಸ್ತುಗಳು ದುಬಾರಿಯಾಗುತ್ತವೆ ಗೊತ್ತೇ?

ಹೌದು, ಈ ಸುಂಕದಿಂದಾಗಿ ಭಾರತೀಯ ಸರಕುಗಳು ಅಮೆರಿಕದಲ್ಲಿ ದುಬಾರಿಯಾಗಲಿದ್ದು, ಅಮೆರಿಕಕ್ಕೆ ಆಗುತ್ತಿರುವ ರಫ್ತಿನ ಪ್ರಮಾಣ ಶೇಕಡ 40-50ರಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಜಿಟಿಆರ್‌ಐ ವಿಚಾರ ವೇದಿಕೆ ಅಭಿಪ್ರಾಯಪಟ್ಟಿದೆ.
ಅಮೆರಿಕದ ಹೊಸ ಸುಂಕದ ಬಳಿಕ ಯುಎಸ್ ಗೆ ಸಾವಯವ ರಾಸಾಯನಿಕಗಳ ರಫ್ತಿನ ಮೇಲೆ ಹೆಚ್ಚುವರಿಯಾಗಿ ಶೇ.54 ರಷ್ಟು ಸುಂಕ ವಿಧಿಸಲಾಗುವುದು ಎಂದು ವರದಿಯಾಗಿದೆ. ಜೊತೆಗೆ ಕಾರ್ಪೆಟ್‌ಗಳು (ಶೇ.52.9), ಉಡುಪು – ಹೆಣೆದ (ಶೇ.63.9), ಉಡುಪು – ನೇಯ್ದ (ಶೇ.60.3), ಜವಳಿ, ಮೇಕಪ್‌ಗಳು (ಶೇ.59), ವಜ್ರಗಳು, ಚಿನ್ನ ಮತ್ತು ಉತ್ಪನ್ನಗಳು (ಶೇ.52.1), ಯಂತ್ರೋಪಕರಣಗಳು ಮತ್ತು ಯಾಂತ್ರಿಕ ಉಪಕರಣಗಳು (ಶೇ.51.3), ಪೀಠೋಪಕರಣಗಳು, ಹಾಸಿಗೆ (ಶೇ.52.3) ಸೇರಿದಂತೆ ಇತರ ವಲಯಗಳಲ್ಲಿ ಹೆಚ್ಚಿನ ಸುಂಕ ವಿಧಿಸಲಾಗುವುದು.
ಅಲ್ಲದೆ ಜವಳಿ (10.3 ಬಿಲಿಯನ್), ರತ್ನಗಳು ಮತ್ತು ಆಭರಣಗಳು (12 ಬಿಲಿಯನ್), ಸೀಗಡಿ (2.24 ಬಿಲಿಯನ್ ಯುಎಸ್ ಡಾಲರ್), ಚರ್ಮ ಮತ್ತು ಪಾದರಕ್ಷೆಗಳು (1.18 ಬಿಲಿಯನ್ ಯುಎಸ್ ಡಾಲರ್), ರಾಸಾಯನಿಕಗಳು (2.34 ಬಿಲಿಯನ್) ಮತ್ತು ವಿದ್ಯುತ್ ಮತ್ತು ಯಾಂತ್ರಿಕ ಯಂತ್ರೋಪಕರಣಗಳು (ಸುಮಾರು 9 ಬಿಲಿಯನ್ ಯುಎಸ್ ಡಾಲರ್) ಸೇರಿದಂತೆ ಶೇ. 50 ರಷ್ಟು ಸುಂಕದ ಹೊರೆ ಬೀಳಲಿದೆ.
ತೆರಿಗೆ ಏಕೆ?:
ಭಾರತ ತನ್ನ ಬೇಡಿಕೆಯ ಪೈಕಿ ಶೇ.88ರಷ್ಟು ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ 2021ರವರೆಗೂ ರಷ್ಯಾದಿಂದ ಆಮದು ಪ್ರಮಾಣ ಕೇವಲ ಶೇ.0.2ರಷ್ಟಿತ್ತು. ಆದರೆ ಉಕ್ರೇನ್ ಮೇಲಿನ ಯುದ್ಧದ ಬಳಿಕ ರಷ್ಯಾದ ಮೇಲೆ ಅಮೆರಿಕ ಮತ್ತು ಯುರೋಪಿಯನ್ ದೇಶಗಳು ನಿರ್ಬಂಧ ಹೇರಿದವು. ಆಗ ರಷ್ಯಾ ಅತ್ಯಂತ ಅಗ್ಗದ ದರದಲ್ಲಿ ತೈಲ ಮಾರಾಟಕ್ಕೆ ಮುಂದಾಯಿತು. ಹೀಗಾಗಿ ತನ್ನ ನಿತ್ಯದ ಆಮದಾದ 50 ಲಕ್ಷ ಬ್ಯಾರೆಲ್‌ಗಳ ಪೈಕಿ ಭಾರತ ರಷ್ಯಾದಿಂದ 16 ಲಕ್ಷ ಬ್ಯಾರೆಲ್ ಖರೀದಿ ಆರಂಭಿಸಿತು. ರಷ್ಯಾ ಭಾರತಕ್ಕೆ ಅತಿದೊಡ್ಡ ತೈಲ ಪೂರೈಕೆ ದೇಶವಾಗಿ ಹೊರಹೊಮ್ಮಿತು. ಹೀಗೆ ಸಂಗ್ರಹಿಸಿದ ಹಣವನ್ನು ರಷ್ಯಾ, ಉಕ್ರೇನ್ ಮೇಲಿನ ಯುದ್ಧಕ್ಕೆ ಬಳಸುತ್ತಿದೆ. ಹೀಗಾಗಿ ರಷ್ಯಾದಿಂದ ತೈಲ ಖರೀದಿ ಮಾಡಿದವರ ಮೇಲೆ ಹೆಚ್ಚಿನ ತೆರಿಗೆ ಹಾಕುವ ನಿರ್ಧಾರವನ್ನು ಟ್ರಂಪ್ ಪ್ರಕಟಿಸಿದ್ದಾರೆ.
ಇದನ್ನೂ ಓದಿ: CBSE: CBSE ಪರೀಕ್ಷೆ ಬರೆಯಲು ಎಂದರೆ 75% ಹಾಜರಾತಿ ಕಡ್ಡಾಯ: ಸಿಬಿಎಸ್‌ಇ ಹೊಸ ರೂಲ್ಸ್
Comments are closed.