Home News Gruhalakshmi: ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ – ‘ವರಮಹಾಲಕ್ಷ್ಮಿ’ ಹಬ್ಬದಂದು ಬರುತ್ತೆ ಸರ್ಕಾರದ ‘ಗೃಹಲಕ್ಷ್ಮಿ’

Gruhalakshmi: ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ – ‘ವರಮಹಾಲಕ್ಷ್ಮಿ’ ಹಬ್ಬದಂದು ಬರುತ್ತೆ ಸರ್ಕಾರದ ‘ಗೃಹಲಕ್ಷ್ಮಿ’

Hindu neighbor gifts plot of land

Hindu neighbour gifts land to Muslim journalist

Gruhalakshmi : ರಾಜ್ಯ ಸರ್ಕಾರವು ವರಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ ನೀಡಲು ಮುಂದಾಗಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೂ ಮುನ್ನ ಗೃಹಲಕ್ಷ್ಮೀ ಯೋಜನೆಯ 2025-26 ನೇ ಸಾಲಿನ 3 ನೇ ಕಂತಿನ ₹2000 ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 2-3 ದಿನದಲ್ಲಿ ಪಾವತಿಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಹೌದು, ಗೃಹಲಕ್ಷ್ಮಿ ಹಣಕ್ಕಾಗಿ ಕಾದು ಕಾದು ಸುಸ್ತಾದ ಮಹಿಳೆಯರಿಗೆ ಇದೀಗ ನಿರಾಳ ದೊರೆತಿದೆ. ರಾಜ್ಯದ 1.24 ಕೋಟಿ ಮಹಿಳೆಯರ ಖಾತೆಗೆ ಮೂರನೇ ಕಂತಿನ ಹಣ ಜಮಾ ಆಗಲಿದ್ದು, ನಾಲ್ಕು ಮತ್ತು ಐದನೇ ಕಂತಿನ ಹಣ ಬಾಕಿ ಉಳಿಯಲಿದೆ.

ಆಯಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಖಾತೆಗೆ ಹಣ ಸಂದಾಯವಾಗುತ್ತಿದ್ದು, ನಂತರ ತಾಲೂಕು ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳಿಂದ ಡಿಬಿಟಿ ಮೂಲಕ ಫಲಾನುಭವಿಗಳಿಗೆ ನೇರವಾಗಿ ಹಣ ಸಂದಾಯವಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: Varamahalakshmi: ‘ವರಮಹಾಲಕ್ಷ್ಮಿ’ ಎಫೆಕ್ಟ್ – ಹೂವು, ಹಣ್ಣುಗಳ ಬೆಲೆ ಕೇಳಿ ಬೆಚ್ಚಿಬಿದ್ದ ಗ್ರಾಹಕರು!!