No Parking: ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಪೊಲೀಸ್ ವಾಹನಕ್ಕೆ ಫೈನ್! – ಸಂಚಾರಿ ಪೊಲೀಸರ ಕೆಲಸಕ್ಕೆ ಸಾರ್ವಜನಿಕರಿಂದ ಅಭಿನಂದನೆ

Share the Article

No Parking: ಸಮಾಜದ ಸ್ವಾಸ್ಥ್ಯ ಕಾಪಾಡಲು ಅನೇಕ ನಿಯಮಗಳನ್ನು ಪೊಲೀಸ್‌ ಇಲಾಖೆ ಜಾರಿಗೆ ತರುತ್ತದೆ. ನೋ ಪಾರ್ಕಿಂಗ್‌, ಹೆಲ್ಮೆಟ್‌ ಕಡ್ಡಾಯ, ರಸ್ತೆ ನಿಯಮ, ಟ್ರಾಫಿಕ್‌ ರೂಲ್ಸ್‌ ಹೀಗೆ ಅನೇಕ ನಿಯಮಗಳನ್ನು ಸರಿಯಾದ ರಸ್ತೆ ನಿಯಮ ಪಾಲನೆಗಾಗಿ ಮಾಡಲಾಗುತ್ತದೆ. ಹಾಗೆ ಈ ನಿಯಮಗಳನ್ನು ಪಾಲಿಸದೇ ಇರುವ ನಾಗರೀಕರು ಇರುತ್ತಾರೆ. ಅಂತವರಿಗೆ ಪೊಲೀಸರು ದಂಡ ಹಾಕಿ, ಅದಕ್ಕೆ ತಕ್ಕ ಶಿಕ್ಷೆ ನೀಡ್ತಾರೆ.

ಆದರೆ ಇಲ್ಲಿ ವಿಚಾರ ಅದಲ್ಲ, ಬೇಲಿಯೇ ಎದ್ದು ಹೊಲ ಮೇಯ್ದ ವಿಚಾರ. ಪೊಲೀಸರು, ನಾಗರೀಕರು ತಪ್ಪು ಮಾಡಿದ್ರೆ ಶಿಕ್ಷೆ ಕೊಡ್ತಾರೆ. ಅದೇ ಪೊಲೀಸರು ತಪ್ಪು ಮಾಡಿದ್ರೆ ಅದನ್ನು ಸರಿ ಮಾಡೋರು ಯಾರು? ಅದನ್ನು ಪೊಲೀಸರೇ ಮಾಡ್ಬೇಕು. ಅದೇ ಕೆಲಸವನ್ನು ಮಡಿಕೇರಿಯ ಸಂಚಾರಿ ಪೊಲೀಸರು ಮಾಡಿದ್ದಾರೆ.

ಮಡಿಕೇರಿ ನಗರದ ಕಾಲೇಜು ರಸ್ತೆಯ ಏಕಮುಖ ರಸ್ತೆಯಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದ ಮಹಿಳಾ ಸಹಾಯವಾಣಿ (ಪಿಂಕ್ ಗಸ್ತು ವಾಹನ )ಕ್ಕೆ ಮಡಿಕೇರಿ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ವಾಹನ ಸಂಖ್ಯೆ KA02 G 1815 ವಾಹನ ಚಾಲಕ ಜಯಶಂಕರ್ ರಿಗೆ 500ರೂ ದಂಡ ವಿಧಿಸಲಾಗಿದೆ.

ಸಂಚಾರಿ ಪೊಲೀಸ್ ರ ಕರ್ತವ್ಯ ನಿಷ್ಠೆಯನ್ನು ಗಮನಿಸಿದ ಸ್ಥಳೀಯರು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಮುಲಾಜು ಇಲ್ಲದೆ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಎತ್ತಿ ಹಿಡಿದಿದ್ದಾರೆ.

Comments are closed.