Uttarkashi cloudburst: ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ: ಜಲಪ್ರಳಯಕ್ಕೆ ಕೊಚ್ಚಿ ಹೋದ ಗ್ರಾಮ – 60ಕ್ಕೂ ಅಧಿಕ ಗ್ರಾಮಸ್ಥರು, 8 ರಿಂದ 10 ಮಂದಿ ಯೋಧರೂ ನಾಪತ್ತೆ!

Uttarkashi cloudburst: ಉತ್ತರಾಖಂಡದ ಉತ್ತರಕಾಶಿಯಲ್ಲಿ ಭೀಕರ ಮೇಘ ಸ್ಫೋಟ ಸಂಭವಿಸಿದ್ದು, ಹಠಾತ್ ಪ್ರವಾಹಕ್ಕೆ ಧರಾಲಿ ಗ್ರಾಮಕ್ಕೆ ಗ್ರಾಮವೇ ಸರ್ವನಾಶವಾಗಿದೆ. 60ಕ್ಕೂ ಹೆಚ್ಚು ಮಂದಿ ಜಲಪ್ರಳಯದಲ್ಲಿ ಕೊಚ್ಚಿ ಹೋಗಿ ರುವ ಶಂಕೆ ವ್ಯಕ್ತವಾಗಿದೆ. ಸದ್ಯ ಐವರ ಸಾವು ಖಚಿತವಾಗಿದೆ. ಸ್ಥಳಕ್ಕೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ದೌಡಾಯಿಸಿದ್ದು, ರಕ್ಷಣಾ ಕಾರ್ಯಾ ಚರಣೆ ಮುಂದುವರಿದಿದೆ.

ಬೆಟ್ಟದ ಮೇಲಿನಿಂದ ಏಕಾಏಕಿ ನದಿಯಂತೆ ನೀರು ಕಲ್ಲು-ಬಂಡೆಗಳು ಸಾಗಿ ಬಂದು ಇಡೀ ಗ್ರಾಮವನ್ನೇ ಕೊಚ್ಚಿ ಕೊಂಡು ಹೋಗಿದೆ. ಪ್ರವಾಹದಲ್ಲಿ ಅನೇಕ ಉತ್ತರ ಕಾಶಿಯಲ್ಲಿ ಮೇಘಸ್ಫೋಟದಿಂದ
ಮನೆಗಳು ಸರ್ವನಾಶವಾಗಿದ್ದು, ವಾಹನ ಗಳು ಹಾಗೂ ಅಂಗಡಿಗಳು ಸಹ ಧ್ವಂಸ ವಾಗಿವೆ. ಈ ಭೀಕರ ಪ್ರವಾಹದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡು ತಿದ್ದು, ಎದೆ ಝಲ್ ಎನ್ನಿಸುವಂತಿದೆ. ಏಕಾ ಏಕಿ ಜಲಪ್ರಳಯ ಉಂಟಾದ ಪರಿಣಾಮ ಜನರು ಕಿರುಚಾಡುತ್ತಿರುವುದು ವೀಡಿಯೋ ದಲ್ಲಿ ಸೆರೆಯಾಗಿದೆ. ಜನರು ಪ್ರಾಣ ಉಳಿಸಿ ಕೊಳ್ಳಲು ಓಡುತ್ತಿರುವ ದೃಶ್ಯಗಳು ಮನಕಲ ಕುವಂತಿದೆ. ಇದರ ಬೆನ್ನಲ್ಲೇ ಸುಖಿ ಟಾಪ್ ನಲ್ಲಿ ಕೂಡ ಭಾರಿ ಪ್ರವಾಹ ಉಂಟಾಗಿದೆ.
ಸದ್ಯ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ದುರಂತದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮೇಘಸ್ಫೋಟದಲ್ಲಿ ದೊಡ್ಡ ಮಟ್ಟದ ಜಲಪ್ರಳಯಕ್ಕೆ ಕೊಚ್ಚಿ ಹೋದ ಗ್ರಾಮ ಹಾನಿಯಾಗಿರುವ ಮಾಹಿತಿ ಇದೆ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ವಿಪತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಗಳ ಬಳಸಿಕೊಳ್ಳಲಾಗಿದೆ. ಈ ಹೆಲಿ ಕಾಪ್ಟರ್‌ಗಳು ಚಂಡೀಗಢ ಬರೇಲಿ ಮತ್ತು ಸರ್ಸಾವಾ ವಾಯಿನೆಲೆಗಳಲ್ಲಿ ಸನ್ನದ್ರವಾಗಿವೆ.
ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾ ಚರಣೆಗಳನ್ನು ನಡೆಸಲಾಗುತ್ತಿದೆ. ಖೀರ್ ಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಮೇಘಸ್ಫೋಟದಿಂದ ಉಂಟಾದ ಪ್ರವಾಹವು ಧರಾಲಿಯನ್ನು ಆವರಿಸಿ, ಮನೆಗಳಿಗೆ ಹಾನಿಯನ್ನುಂಟುಮಾಡಿದೆ. ಇದರಿಂದ ಹಲವಾರು ಮನೆಗಳು, ಹೋಟೆಲ್‌ಗಳು ಕೊಚ್ಚಿಹೋದವು ಗಂಗೋತ್ತಿಗೆ ಹೋಗುವ ಯಾತ್ರಾರ್ಥಿಗಳಿಗೆ ಧರಾಲಿ ಒಂದು ಪ್ರಮುಖ ನಿಲುಗಡೆ ಶಾಣವಾಗಿದ್ದು, ಹಲ ವಾರು ಹೋಟೆಲ್‌ಗಳು, ಹೋಂಸ್ಟೇಗಳು ಮತ್ತು ರೆಸ್ಟೋರೆಂಟ್‌ಗಳನ್ನು ಹೊಂದಿದೆ.
ಪ್ರಧಾನಿ ಸಂತಾಪ: ಪ್ರಧಾನಿ ನರೇಂದ್ರ ಮೋದಿ ಅವರು ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದು, ಪರಿಸ್ಥಿತಿಯ ಕುರಿತು ಮಾಹಿತಿ ಪಡೆಯಲು ಮುಖ್ಯಮಂತ್ರಿ ಧಾಮಿ ಅವರೊಂದಿಗೆ ಮಾತನಾಡಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ”ಉತ್ತರಕಾಶಿಯ ಧರಾಲಿಯಲ್ಲಿ ಸಂಭವಿಸಿದ ದುರಂತ ದಿಂದ ಹಾನಿಗೊಳಗಾದವರಿಗೆ ನಾನು ಸಂತಾಪ ಸೂಚಿಸುತ್ತೇನೆ. ಆವಶೇಷಗಳಡಿ ಸಿಲುಕಿದವರು ಸುರಕ್ಷಿತವಾಗಿರಲಿ ಎಂದು ನಾನು ಬಯಸುತ್ತೇನೆ. ನಾನು ಮುಖ್ಯ ಮಂತ್ರಿ ಪುಷ್ಕರ್ ಧಾಮಿ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ ಪರಿಹಾರ ಮತ್ತು ರಕ್ಷಣಾ ತಂಡಗಳು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ. ಜನರಿಗೆ ಸಹಾಯ ತಲುಪಲು ಎಲ್ಲ ಪ್ರಯತ್ನವನ್ನು ಮಾಡಲಾಗುತ್ತಿದೆ” ಎಂದಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸನಲ್ಲಿ “ಉತ್ತರಕಾಶಿಯಲ್ಲಿ (ಉತ್ತರಾಖಂಡ) ಉಂಟಾದ ದಿಢೀರ್ ಪ್ರವಾಹದಿಂದ ಉಂಟಾದ ವಿನಾಶದ ದೃಶ್ಯಗಳನ್ನು ನೋಡು ತ್ತಿದ್ದೇನೆ. ಮರಂತದಿಂದ ಹಾನಿಗೊಳ ಗಾದ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥಿ ಸುತ್ತಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಿ ರುವ ಎಲ್ಲಾ ಕ್ರಮಗಳನ್ನು ತೆಗೆದುಕೊ ಳ್ಳುತ್ತಿವೆ” ಎಂದು ಪೋಸ್ಟ್ ಮಾಡಿದ್ದಾರೆ.
ಉತ್ತರಕಾರಿಯ ಪ್ರವಾಹ ಘಟನೆಯ ಬಗ್ಗೆ ಉತ್ತರಖಾಂಡ ಮುಖ್ಯಮಂತ್ರಿ ಧಾಮಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ
ಇದನ್ನೂ ಓದಿ: Karnataka: ಕರ್ನಾಟಕ ರಾಜ್ಯಕ್ಕೆ 46,933 ಕೋಟಿ ತೆರಿಗೆ ಹಣ ಬಿಡುಗಡೆ; ಕೇಂದ್ರ ಹಣಕಾಸು ಸಚಿವಾಲಯ
Comments are closed.