Home News Dharmasthala Case: ಅಂದು ಭೀಮ ಶವ ಹೂಳುವುದನ್ನು ನೋಡಿದ್ದ ಸ್ಥಳೀಯರು – ಈಗ ಅಸ್ಥಿಪಂಜರಗಳನ್ನು...

Dharmasthala Case: ಅಂದು ಭೀಮ ಶವ ಹೂಳುವುದನ್ನು ನೋಡಿದ್ದ ಸ್ಥಳೀಯರು – ಈಗ ಅಸ್ಥಿಪಂಜರಗಳನ್ನು ಹುಡುಕಲು SITಗೆ ಸಹಾಯ ಮಾಡಲು ಸಿದ್ಧ – ವರದಿ

Hindu neighbor gifts plot of land

Hindu neighbour gifts land to Muslim journalist

Dharmasthala Case: ಧರ್ಮಸ್ಥಳ ಗ್ರಾಮದ ಸ್ಥಾನ ಘಟ್ಟ ಸುತ್ತಮುತ್ತ ನಡೆಯುತ್ತಿರುವ ಶೋಧ ಕಾರ್ಯಾಚರಣೆಯನ್ನು ನೋಡಿ ಧರ್ಮಸ್ಥಳ ಸುತ್ತಮುತ್ತದ ಆರು ಮಂದಿ ಸ್ಥಳೀಯರು, ತಮ್ಮ ಗುರುತನ್ನು ಮರೆಮಾಚದೆ ನೇರವಾಗಿ ವಿಶೇಷ ತನಿಖಾ ತಂಡಕ್ಕೆ (SIT) ಸಹಾಯ ಮಾಡಲು ಸಿದ್ಧ ಎಂದು ಮುಂದೆ ಬಂದಿರುವ ಬಗ್ಗೆ ವರದಿಯಾಗಿದೆ. ಅಂದು ಅಂದರೆ ಸುಮಾರು 10-12 ವರ್ಷಗಳ ಹಿಂದೆ ನಾವು ಭೀಮನು ಶವಗಳನ್ನು ಹೂಳುವುದನ್ನು ನೋಡಿದ್ದೇವೆ ಎಂದು ಈ ಸ್ಥಳೀಯರು ಹೇಳಿಕೊಂಡಿದ್ದಾಋಎ ಎಂದು BLR post ವರದಿ ಮಾಡಿದೆ.

“ಈ ಸ್ಥಳೀಯರು ತಂಡಕ್ಕೆ ಸಹಾಯ ಮಾಡಲು ಬಯಸಿದರೆ, ಅವರಿಗೆ ಸ್ಥಳಾವಕಾಶ ಕಲ್ಪಿಸಬಹುದು. ರಾಜ್ಯ ಸರ್ಕಾರವು ಹೆಚ್ಚಿನ ಅಸ್ಥಿಪಂಜರದ ಅವಶೇಷಗಳನ್ನು ಹೊರತೆಗೆಯುವತ್ತ ಗಮನಹರಿಸಿದೆ. ಎಸ್‌ಐಟಿ ಕಾರ್ಯಾಚರಣೆಯ ಮೊದಲ ಏಳು ದಿನಗಳಲ್ಲಿ ಹಲವಾರು ಮೂಳೆಗಳು ಮತ್ತು ಮೂರು ತಲೆಬುರುಡೆಗಳು ಈಗಾಗಲೇ ಪತ್ತೆಯಾಗಿರುವುದರಿಂದ ಹೆಚ್ಚಿನ ಅವಶೇಷಗಳು ಇರಬಹುದು ಎಂದು ಗೃಹ ಸಚಿವಾಲಯದ ಉನ್ನತ ಮೂಲಗಳು blrpostಗೆ ತಿಳಿಸಿದೆಎ ದಮು ಅದು ವರದಿ ಮಾಡಿದೆ.

ಸ್ಥಳೀಯರಿಗೆ ಹತ್ತಿರವಿರುವ ಮೂಲವೊಂದು ಹೇಳುವಂತೆ, “ಈ ಪುರುಷರು ಭೀಮಾ ಮೃತದೇಹಗಳನ್ನು ಹೂಳುವುದನ್ನು ನೋಡಿದ್ದಾರೆ. ಭೀಮಾ ರಹಸ್ಯವಾಗಿ ಅಂತ್ಯಕ್ರಿಯೆಗಳನ್ನು ಮಾಡಿದ್ದಾನೆಂದು ನಂಬಿದ್ದರೂ, ಇಂಥ ಸಣ್ಣ ಹಳ್ಳಿಯಲ್ಲಿ ಇದು ಎಲ್ಲರಿಗೂ ತಿಳಿಯದಿರುವ ರಹಸ್ಯವೇನಲ್ಲ. ಭೀಮಾ ಹಲವಾರು ಸ್ಥಳಗಳನ್ನು ತೋರಿಸಿದ್ದಾನೆ, ಆದರೆ ಅವನು ಶವಗಳನ್ನು ಹೂಳಿದ್ದ ಇನ್ನೂ ಕೆಲವು ಸ್ಥಳಗಳಿವೆ ಎಂದು ಅವರು ಹೇಳುತ್ತಿದ್ದಾರೆ. ಈ ಹೆಚ್ಚುವರಿ ಸ್ಥಳಗಳು ಇನ್ನಷ್ಟು ಅಸ್ತಿ ಪತ್ತೆ ಮಾಡುವ ಸಂಖ್ಯೆಯನ್ನು ಹೆಚ್ಚಿಸಬಹುದು ಮತ್ತು SIT ಅವರ ಸಹಾಯವನ್ನು ಪರಿಗಣಿಸಬೇಕು ಎಂದು ಹೇಳಿಕೊಂಡಿದೆ.

ಸಚಿವಾಲಯದ ಮೂಲಗಳು ಹೇಳುವಂತೆ, ಎರಡನೇ ದಿನ ನಾಲ್ಕು ಅಸ್ಥಿಪಂಜರದ ಅವಶೇಷಗಳನ್ನು ಎಸ್‌ಐಟಿ ಪತ್ತೆ ಮಾಡಿದೆ, ಮೂರನೇ ದಿನ ಆರನೇ ಸ್ಥಳದಲ್ಲಿ ತಲೆಬುರುಡೆಯೊಂದಿಗೆ ಒಂದು ಸಂಪೂರ್ಣ ಅಸ್ಥಿಪಂಜರ, ಮತ್ತು ಕಾರ್ಯಾಚರಣೆಯ ಆರನೇ ದಿನದಂದು 14 ನೇ ಸ್ಥಳದಲ್ಲಿ 50-60 ಮೂಳೆಗಳು, ಒಂದು ಪೂರ್ಣ ತಲೆಬುರುಡೆ ಮತ್ತು ಇನ್ನೊಂದು ಛಿದ್ರಗೊಂಡ ತಲೆಬುರುಡೆ ಪತ್ತೆಯಾಗಿದೆ. ಈ ಅವಶೇಷಗಳು ಕನಿಷ್ಠ ಮೂರು ವ್ಯಕ್ತಿಗಳಿಗೆ ಸೇರಿವೆ ಎಂದು ಕಳೆದ ಎರಡು ದಿನಗಳ ಹಿಂದೆ ಇದೇ BLRpost ವರದಿ ಮಾಡಿತ್ತು. ಆದರೆ ಈ ಬಗ್ಗೆ ಎಸ್‌ಐಟಿ ಯಾವುದೇ ಅಧಿಕಥರ ದಾಖಲೆಗಳನ್ನು ಬಿಡುಗಡೆ ಮಾಡಿಲ್ಲ.

ಕೃಪೆ -BLR POST

ಇದನ್ನೂ ಓದಿ: Aadhar Card: ಈ ರಾಜ್ಯದಲ್ಲಿ ಆದಾಯ ಪ್ರಮಾಣಪತ್ರಕ್ಕೆ ಆಧಾ‌ರ್ ಕಡ್ಡಾಯ – ಸರ್ಕಾರ ಸೌಲಭ್ಯ ದುರುಪಯೋಗ ತಡೆಯಲು ಕ್ರಮ