Suspicious Death: ಮೂರನೇ ಮಹಡಿಯಿಂದ ಬಿದ್ದು ಯುವತಿ ಅನುಮಾನಾಸ್ಪದ ಸಾವು

Share the Article

Suspicious Death: ಮೂರಂತಸ್ತಿನ ಕಟ್ಟಡದಿಂದ ಬಿದ್ದು ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ (Suspicious Death) ಘಟನೆ ಬೆಂಗಳೂರು(Bengaluru) ಉತ್ತರ ತಾಲ್ಲೂಕಿನ ಕಡಬಗೆರೆಯಲ್ಲಿ ನಡೆದಿದೆ.

ರಿಸೆಪ್ಷನಿಸ್ಟ್ ರಕ್ಷಿತಾ (20) ಮೃತ ಯುವತಿ. ರಕ್ಷಿತಾ ಜುನಿಫರ್ ಫಿಟ್ನೆಸ್ ಸೆಂಟರ್‌ನಲ್ಲಿ (Fitness Center) ಕಳೆದ 8 ತಿಂಗಳಿನಿಂದ ರಿಸೆಪ್ಷನಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದರು.

ಇದ್ದಕ್ಕಿದ್ದಂತೆ ಮೂರನೇ ಮಹಡಿಯಲ್ಲಿದ್ದ ಫಿಟ್ನೆಸ್ ಸೆಂಟರ್ ಕಟ್ಟಡದ ಮೇಲಿನಿಂದ ಬಿದ್ದು ರಕ್ಷಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Puttur: ಸುಳ್ಳು ಮಾಹಿತಿ ಪ್ರಸಾರ: ಎಸ್.ಡಿ.ಪಿ.ಐ ಪುತ್ತೂರು ಅಧ್ಯಕ್ಷ ಅಶ್ರಫ್ ಬಾವು ವಿರುದ್ಧ ಪ್ರಕರಣ ದಾಖಲು!!

Comments are closed.