Gundlupete: ಲಿಂಗಾಯತ ಮಠಕ್ಕೆ ಸ್ವಾಮೀಜಿ ಆಗಿದ್ದ ಮುಸ್ಲಿಂ ವ್ಯಕ್ತಿ ಸಲಿಂಗ ಕಾಮಿ – ಬಯಲಾಯ್ತು ‘ನಿಜಲಿಂಗ’ನ ಕಾಮಪುರಾಣ !!

Share the Article

Gundlupete: ಚೌಡಹಳ್ಳಿ ಗುರುಮಲ್ಲೇಶ್ವರ ಶಾಖಾ ಮಠದ ಮಠಾಧೀಶ ನಿಜಲಿಂಗ ಸ್ವಾಮೀಜಿ ಅಲಿಯಾಸ್ ಮೊಹಮದ್ ನಿಸಾರ್ ಮುಸ್ಲಿಂ ವ್ಯಕ್ತಿ ಎಂಬುದು ಬಯಲಾದ ಕಾರಣ, ಇತ್ತೀಚಿಗಷ್ಟೇ ಅವರು ಪೀಠ ತ್ಯಾಗ ಮಾಡಿದ್ದರು. ಆದರೀಗ ಅವರು ಸಲಿಂಗಕಾಮಿ ಎಂಬುದು ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೆ ಆನ್ಲೈನ್ನಲ್ಲಿ ಟೋಪಿ, ಬಿಯರ್ ಗಳನ್ನು ಆರ್ಡರ್ ಮಾಡಿರುವ ಕರ್ಮಕಾಂಡವು ಬಯಲಾಗಿದೆ.

ಹೌದು, ಯಾದಗಿರಿ ಜಿಲ್ಲೆಯ ಶಹಪುರ ಮೂಲದ ಮೊಹಮದ್ ನಿಸಾರ್ ತನ್ನ ಮೂಲ ಧರ್ಮ ಮರೆಮಾಚಿದ್ದನು. ಈ ವಿಷಯವನ್ನು ಯಾರಿಗೂ ತಿಳಿಸದೇ ಚೌಡಹಳ್ಳಿ ಗುರುಮಲ್ಲೇಶ್ವರ ಶಾಖಾ ಮಠಕ್ಕೆ ಮಠಾಧೀಶನಾಗಿದ್ದನು. ಈ ನಿಜಲಿಂಗ ಸ್ವಾಮೀಜಿ ತಮ್ಮ ಪೂರ್ವಾಶ್ರಮದಲ್ಲಿ ಮುಸ್ಲಿಂ ವ್ಯಕ್ತಿಯಾಗಿದ್ದ ಎಂಬುದು ತಿಳಿಯುತ್ತಿದ್ದಂತೆ ಗ್ರಾಮಸ್ಥರೆಲ್ಲರೂ ಆತನನ್ನು ಮಠ ಬಿಡಿಸಿ ಓಡಿಸಿದರು. ಇದೀಗ ಈ ಮೊಹಮದ್ ನಿಸಾರ್ ಮದ್ಯಪಾನ, ಮಾಂಸಾಹಾರ ಸೇವನೆ ಹಾಗೂ ಯುವಕನೊಂದಿಗೆ ಅಸಭ್ಯವಾಗಿ ವರ್ತಿಸುವ ವಿಡಿಯೋ ವೈರಲ್ ಆಗಿದೆ.

ಅಂದಹಾಗೆ ಕಳೆದ ಒಂದೂವರೆ ತಿಂಗಳಿನಿಂದ ಸ್ವಾಮೀಜಿಯಾಗಿದ್ದ ನಿಜಲಿಂಗ ಸ್ವಾಮೀಜಿಯವರು ಯಾವುದೋ ವಿಚಾರಕ್ಕೆ ಭಕ್ತರೊಬ್ಬರಿಗೆ ಮೊಬೈಲ್ ಅನ್ನು ನೀಡಿದ್ದಾರೆ, ಈ ವೇಳೆ ಪರಿಶೀಲಿಸಿದಾಗ ಸ್ವಾಮೀಜಿ ಮೊಬೈಲ್‌ನಲ್ಲಿದ್ದ ಇವರ ಆಧಾರ್‌ ಕಾರ್ಡ್‌ನಲ್ಲಿ ಮಹಮ್ಮದ್‌ ನಿಸಾರ್‌ ಎಂಬ ಹೆಸರಿರುವುದು ಯುವಕನಿಗೆ ಗೊತ್ತಾಗುತ್ತದೆ.

ಕೂಡಲೇ ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ್ದಾನೆ. ಈ ಬಗ್ಗೆ ವಿಚಾರಿಸಿದಾಗ, ನಾನು ಅನ್ಯ ಧರ್ಮವನಾದರೂ ಬಸವ ತತ್ವದಿಂದ ಆಕರ್ಷಿತನಾಗಿ 2021ರಲ್ಲಿ ಲಿಂಗದೀಕ್ಷೆ ಪಡೆದಿದ್ದೇನೆ ಎಂದು ತಿಳಿಸಿದ್ದಾನೆ. ಆದರೆ ಅನ್ಯ ಧರ್ಮದಿಂದ ಮತಾಂತರವಾದ ಮಾಹಿತಿ ಮುಚ್ಚಿಟ್ಟಿದ್ದ ಕಾರಣಕ್ಕೆ ನೀವು ಪೀಠಾಧಿಪತಿಯಾಗಿ ಇರುವುದು ಬೇಡ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಅದರಂತೆ ನಿಜಲಿಂಗ ಸ್ವಾಮೀಜಿ ಅಲಿಯಾಸ್ ಮಹಮ್ಮದ್ ನಿಸಾರ್ ಪೀಠ ತ್ಯಾಗ ಮಾಡಿ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದರು. ಇದೀಗ ಮೊಹಮದ್ ನಿಸಾರ್ ಓರ್ವ ಸಲಿಂಗಕಾಮಿ ಎಂದು ತಿಳಿದು ಬಂದಿದೆ.

ಮೊಹಮದ್ ನಿಸಾರ್ ತನ್ನ ಕೋಣೆಯಲ್ಲಿ ಕುಡಿದು ತೂರಾಡುತ್ತಿರುವ ಮತ್ತು ಯುವಕನೋರ್ವನ ಜೊತೆ ಸರಸವಾಡುತ್ತಿರುವ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿದೆ. ಹಾಗೆ ಕೋಣೆಯಲ್ಲಿ ಮದ್ಯಪಾನ ಮಾಡುತ್ತಿರುವ ಮತ್ತು ಮಾಂಸಾಹಾರ ಸೇವನೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಮಠಾಧೀಶನಾಗಿದ್ದ ಮೊಹಮದ್ ನಿಸಾರ್ ತನ್ನದೇ ಮೊಬೈಲ್‌ನಲ್ಲಿ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಇರಿಸಿಕೊಂಡಿದ್ದನು. ಇದೀಗ ಈ ಎಲ್ಲವೂ ವೈರಲ್ ಆಗಿದ್ದು, ಸ್ವಾಮೀಜಿ ಕಾಮಲೀಲೆ ಕಂಡು ಚೌಡಹಳ್ಳಿ ಗ್ರಾಮಸ್ಥರು ಶಾಕ್ ಆಗಿದ್ದಾರೆ. ನಿಜಲಿಂಗಸ್ವಾಮೀಜಿಯ ನಿಜಸ್ವರೂಪ ತಿಳಿದು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: Musrder: ಮಹಿಳೆ ಕುತ್ತಿಗೆ ಕುಯ್ದು ಕೊ*ಲೆ – ಆರೋಪಿ ನೇಣಿಗೆ ಶರಣು

Comments are closed.