Ramya Case: ನಟಿ ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್ ಪ್ರಕರಣ – ಒಟ್ಟು 48 ಮಂದಿಯ ಐಪಿ ಅಡ್ರೆಸ್ ಪಡೆದ ಪೊಲೀಸರು

Ramya Case: ನಟಿ ರಮ್ಯ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಪದ ಬಳಕೆ ಕೇಸ್ ಸಂಬಂಧ ಸೈಬರ್ ಕ್ರೈಂ ಪೊಲೀಸ್ರಿಂದ ತನಿಖೆ ಚುರುಕಾಗಿ ಮುಂದುವರೆದಿದೆ. ಈವರೆಗೆ ಸಿಸಿಬಿ ಪೊಲೀಸರು ಒಟ್ಟು 48 ಮಂದಿಯ ಐಪಿ ಅಡ್ರೆಸ್ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಈ ಪ್ರಕರಣದಲ್ಲಿ ಪ್ರಮುಖವಾಗಿ 15 ಆರೋಪಿಗಳನ್ನ ಗುರುತಿಸಲಾಗಿದ್ದು, ಸದ್ಯಕ್ಕೆ ನಾಲ್ವರನ್ನ ಪೊಲೀಸರು ಬಂಧನ ಮಾಡಿದ್ದಾರೆ. ತುಂಬಾ ಅಶ್ಲೀಲವಾಗಿ ಕೆಟ್ಟದಾಗಿ ಕಾಮೆಂಟ್ ಮಾಡಿದವ್ರಿಗೆ ಬಿಸಿ ಮುಟ್ಟಿಸ್ತಿರೋ ಪೊಲೀಸ್ರು, ಇದ್ರಲ್ಲಿ ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ಕೋಲಾರ ಭಾಗದವ್ರೇ ಹೆಚ್ಚು ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ಕಮೆಂಟ್ ಮಾಡಿದವ್ರಿಗೆ ಕರೆಸಿ ವಾರ್ನಿಂಗ್ ಕೊಡಲಾಗ್ತಿದೆ. ಇನ್ನು ಉಳಿದ ಕೆಲವರು ಅಕೌಂಟ್ ಡಿಲಿಟ್ ಮಾಡಿಕೊಂಡು,ಮನೆ ಬಿಟ್ಟು ಪರಾರಿಯಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ ನಾರ್ಮಲ್ ಆಗಿ ಕಮೆಂಟ್ ಮಾಡಿದ ಕೆಲವರು ಅರಿವಿಲ್ಲದೆ ಮೆಸೇಜ್ ಮಾಡಿದ ಬಗ್ಗೆ ಕ್ಷಮೆ ಕೇಳಿ ತಮ್ಮ ತಪ್ಪನ್ನು ಮನ್ನಿಸುವಂತೆ ಪೊಲೀಸರಲ್ಲಿ ಪರಿ ಪರಿಯಾಗಿ ಮನವಿ ಮಾಡಿಕೊಳಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Comments are closed.