Mysore dasara: ಮೈಸೂರಿಗೆ ಬಂದಿಳಿದ ದಸರಾ ಆನೆಗಳು – ಅರಣ್ಯ ಭವನ ಆವರಣದಲ್ಲಿ ರಿಲ್ಯಾಕ್ಸ್ ಮೂಡ್‌ ಜಾರಿದ ಗಜಪಡೆ

Share the Article

Mysore dasara: ಗಜಪಡೆಯ ಗತ್ತು ಗಾಂಭೀರ್ಯ ಕಂಡು ಮೈಸೂರು ಜನತೆ ಸಂಭ್ರಮಿಸಿದರು. ಹೌದು, ದಸರಾ ಮಹೋತ್ಸವದ ಕೇಂದ್ರ ಬಿಂದುವೇ ಆದ ಗಜಪಡೆಯ ಮೊದಲ ತಂಡ ಸೋಮವಾರ ಸಂಜೆ ವೇಳೆಗೆ ಮೈಸೂರಿಗೆ ಆಗಮಿಸಿದೆ. ಲಾರಿಗಳಲ್ಲಿ ತಲಾ ಒಂದರಂತೆ ಕರೆತರುತ್ತಿದ್ದ ಆನೆಗಳನ್ನು ನೋಡಲು ರಸ್ತೆಬದಿಗಳಲ್ಲಿ ಸಾಲಾಗಿ ಸೇರಿದ್ದವರಲ್ಲಿ ಮಕ್ಕಳ ಸಂಭ್ರಮ ವಿಶೇಷವಾಗಿ ಗಮನ ಸೆಳೆಯಿತು.

ಬೃಹತ್ ಗಾತ್ರದ ಆನೆಗಳನ್ನು ಕಂಡು ಚಿಣ್ಣರು ಸಂಭ್ರಮಿಸಿದರು. ಹುಣ ಸೂರು ತಾಲೂಕು ವೀರನಹೊಸಳ್ಳಿಯಲ್ಲಿ ಸೋಮವಾರ ಬೆಳಗ್ಗೆ ಗಜಪಯಣ ಸಮಾರಂಭದಲ್ಲಿ ಪೂಜಾ ವಿಧಿವಿಧಾನ ಸ್ವೀಕರಿಸಿದ ಗಜಪಡೆಯು, ಬಳಿಕ ಲಾರಿಗಳನ್ನೇರಿ ಸಂಜೆ ವೇಳೆಗೆ ಸುರಕ್ಷಿತವಾಗಿ ಮೈಸೂರಿಗೆ ಆಗಮಿಸಿದವು. ನಂತರ ಇಲ್ಲಿನ ಅರಣ್ಯ ಭವನ ಆವರಣ ದಲ್ಲಿ ಜನದಟ್ಟಣೆ ನಡುವೆಯೂ ಯಾವುದೇ ಅಳುಕು-ಅಂಜಿಕೆ ಇಲ್ಲದೆ ಅಭಿಮನ್ಯು ನೇತೃತ್ವದ ಎಲ್ಲಾ 9 ಆನೆಗಳು ಸುರಕ್ಷಿತವಾಗಿ ಲಾರಿಗಳಿಂದ ಇಳಿದವು. ಇಲ್ಲಿ ಸಜ್ಜುಗೊಳಿಸಿದ್ದ ಜಾಗದಲ್ಲಿ ತಮ್ಮ ಮಾವುತ ಹಾಗೂ ಕಾವಾಡಿಗಳೊಂದಿಗೆ ವಿಶ್ರಾಂತಿಗೆ ಜಾರಿದವು.

ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಬೆಂಗಾವಲು ವಾಹನಗಳೊಂದಿಗೆ ಲಾರಿಗಳಲ್ಲಿ ಆನೆಗಳನ್ನು ಸುರಕ್ಷಿತವಾಗಿ ಕರೆತರಲಾಯಿತು. ಹುಣಸೂರು ರಸ್ತೆ ಮೂಲಕ ಮೈಸೂರು ನಗರಕ್ಕೆ ಪ್ರವೇಶ ಪಡೆದ ಆನೆಗಳನ್ನು ಹೊತ್ತ ಲಾರಿಗಳು ರಸ್ತೆಗಳಲ್ಲಿ ಸಾಗುತ್ತಿದ್ದರೆ ಅವುಗಳನ್ನು ನೋಡಲು ಜನರ ದಂಡೇ ನೆರೆದಿತ್ತು. ಅರಣ್ಯ ಭವನ ಆವರಣ ತಲುಪುತ್ತಿದ್ದಂತೆ ಇಲ್ಲಿಯೂ ನೆರೆದಿದ್ದ ಜನಸ್ತೋಮವು ಕೌತುಕದ ಕಣ್ಣುಗಳಿಂದ ಆನೆಗಳನ್ನು ನೋಡಿ ಸಂಭ್ರಮಿಸಿತು. ಅಲ್ಲದೆ, ಇಲ್ಲಿ ನೆರೆದಿದ್ದ ಜನತೆ ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಅವುಗಳನ್ನು ಚಿತ್ರೀಕರಿಸಿ ಸಂತಸಪಟ್ಟರು.

ರಿಲ್ಯಾಕ್ಸ್‌ ಮೂಡ್‌ ನಲ್ಲಿ ಗಜಪಡೆ: ಅರಣ್ಯ ಭವನ ಆವರಣದಲ್ಲಿ ಸದ್ಯ ರಿಲ್ಯಾಕ್ಸ್ ಮೂಡ್ಗೆ ಜಾರಿರುವ ಗಜಪಡೆಗೆ ಅರಣ್ಯ ಇಲಾಖೆ ವಿಶೇಷ ಕಾಳಜಿ ವಹಿಸಿ ತಾಲೀಮಿಗೆ ಸಜ್ಜುಗೊಳಿಸಲು ಸಿದ್ಧತೆ ನಡೆಸಿದೆ. ಇಲ್ಲಿ ವಾಸ್ತವ್ಯ ಹೂಡಿರುವ ಗಜಪಡೆಗೆ ನಿಗದಿಗೊಳಿಸುವ ದಿನದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ವಿಜೃಂ ಭಣೆಯಿಂದ ಅರಮನೆಗೆ ಬೀಳ್ಕೊಡಲಾಗುತ್ತದೆ. ನಂತರ ಕಾಲ್ನಡಿಗೆಯಲ್ಲಿ ಅರಮನೆಯತ್ತ ಸಾಗುವ ಗಜಪಡೆಗೆ ಜಿಲ್ಲಾಡಳಿತದಿಂದ ಅರಮನೆ ಜಯ ಮಾರ್ತಾಂಡ ದ್ವಾರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸ್ವಾಗತಿಸಲಾಗುತ್ತದೆ.

ಈಗಾಗಲೇ ಆರಮನೆ ಆವರಣದಲ್ಲಿ ಗಜಪಡೆ ವಾಸ್ತವ್ಯಕ್ಕಾಗಿ ಶೆಡ್ ಗಳನ್ನು ನಿರ್ಮಿಸಲಾಗಿದ್ದು, ಅರಮನೆ ಆವರಣಕ್ಕೆ ತಲುಪಿದ ನಂತರದ ದಿನಗಳಲ್ಲಿ ಗಜಪಡೆಗೆ ಜಂಬೂಸವಾರಿ ಮೆರವಣಿಗೆಯ ತಾಲೀಮು ಶುರುವಾಗಲಿದೆ. ಈಗ ಬಂದಿರುವ 9 ಆನೆಗಳು ಸೇರಿದಂತೆ ಎರಡನೇ ತಂಡದಲ್ಲಿ ಆಗಮಿಸುವ 5 ಆನೆಗಳು ಒಳಗೊಂಡಂತೆ ಒಟ್ಟು 14 ಆನೆಗಳು ದಸರಾ ಮಹೋ ತ್ಸವದಲ್ಲಿ ಪಾಲ್ಗೊಂಡು ಆಕರ್ಷಿಸಲಿವೆ.

ಸುರಕ್ಷಿತವಾಗಿ ಇಳಿದವು: ಎಲ್ಲಾ ಆನೆಗಳು ಸುರಕ್ಷಿತವಾಗಿ ಲಾರಿಯಿಂದ ಇಳಿದವು. ಬೃಹದಾಕಾರದ ಆನೆಗಳನ್ನು ಲಾರಿಗಳಿಂದ ಎಲ್ಲಾ ಸುರಕ್ಷಿತ ಕ್ರಮಗಳೊಂದಿಗೆ ಅರಣ್ಯ ಭವನದ ಆವರಣದಲ್ಲಿ ಇಳಿಸಲಾಯಿತು. ಇಲ್ಲಿನ ಉದ್ಯಾನವನದ ಕಾಂಕ್ರಿಟ್ ಮೆಟ್ಟಿಲುಗಳ ಮೇಲೆ ಹೆಜ್ಜೆ ಹೂರುವಂತೆ ಮಾಡಿ ಅತ್ಯಂತ ಜಾಗರೂಕತೆಯಿಂದ ಎಲ್ಲಾ ಆನೆಗಳನ್ನು ಕೆಳಗಿಳಿಸಲಾಯಿತು.

ಮೊದಲ ತಂಡದಲ್ಲಿ ಆಗಮಿಸಿದ ಗಂಡಾನೆಗಳಾದ ಅಭಿಮನ್ಯು, ಧನಂಜಯ, ಭೀಮ, ಕಂಜನ್, ಏಕಲವ್ಯ, ಪ್ರಶಾಂತ, ಮಹೇಂದ್ರ, ಹೆಣ್ಣಾನೆಗಳಾದ ಕಾವೇರಿ, ಬಳ್ಳಿ ಲಕ್ಷ್ಮಿಯನ್ನು ಸುರಕ್ಷಿತ ಹಾಗೂ ಸುಸೂತ್ರವಾಗಿ ಲಾರಿಗಳಿಂದ ಕೆಳಕ್ಕೆ ಇಳಿಸು ನಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು. ಮೈಸೂರು ಉಪ ಅರಣ್ಯ ಸಂರಕ್ಷಣಾ ಧಿಕಾರಿ (ವನ್ಯಜೀವಿ ವಿಭಾಗ) ಡಾ.ಐ.ಬಿ.ಪ್ರಭುಗೌಡ ಸೇರಿದಂತೆ ಅಧಿಕಾರಿಗಳು ಸ್ಥಳದಲ್ಲಿದ್ದು, ಆನೆಗಳನ್ನು ಸುರಕ್ಷಿತವಾಗಿ ಬರಮಾಡಿಕೊಂಡರು.

ಇದನ್ನು ಓದಿ: Bike Service: ನಿಜಕ್ಕೂ ಬೈಕ್ ಸರ್ವಿಸ್ ಯಾವಾಗ ಮಾಡಿಸ್ಬೇಕು? ಎಷ್ಟು ಕಿ.ಮೀ ಓಡಿರಬೇಕು?

Comments are closed.