Dharmasthala burial Case: ಧರ್ಮಸ್ಥಳ ಹತ್ಯಾಕಾಂಡದ ಮಹತ್ವದ ರಹಸ್ಯ ಬಯಲು – ಬಂಗ್ಲಗುಡ್ಡೆಯಲ್ಲಿ ಮಾನವ ಮೂಳೆ, ಅಸ್ಥಿ ಪಂಜರ ಪತ್ತೆ ಶಂಕೆ!

Dharmasthala burial Case: ಕಳೆದ ನಾಲ್ಕೈದು ದಿನದಿಂದ ಪಾಯಿಂಟ್ ಆರು ಬಿಟ್ಟು ಉಳಿದ ಸ್ಥಳದಲ್ಲಿ ಯಾವುದೇ ಮೂಲೆಯ ಕುರುಹು ಪತ್ತೆಯಾಗಿರಲಿಲ್ಲ. ಆದರೆ ಇಂದು 11ನೇ ಪಾಯಿಂಟ್ ನಲ್ಲಿ ಅಗೆಯುವ ಬದಲಿಗೆ, ಅಲ್ಲಿಂದ ಸುಮಾರು 100 ಮೀಟರ್ ದೂರಕ್ಕೆ ಉತ್ಖನನದ ತಂಡವನ್ನು ಕರೆದೊಯ್ದು ಭೀಮ, ಅಲ್ಲಿ ಉತ್ಖನನ ಮಾಡಿಸಿದ್ದಾನೆ. ಅಲ್ಲಿ ಇಂದು ಅನೇಕ ಮಾನವರ ಮೂಳೆ ಅಸ್ಥಿ ಪಂಜರ ಸಿಕ್ಕಿವೆ ಮತ್ತು ಹೆಣ್ಣು ಮಕ್ಕಳ ಅಸ್ಥಿ ಕೆಂಪು ಪಾಲಿಸ್ಟರ್ ಸೀರೆಯ ತುಣುಕು ಸಿಕ್ಕಿವೆ ಎಂಬ ಮಾಹಿತಿ ವರದಿಯಾಗಿದೆ. ತನಿಖೆಯಲ್ಲಿ ಭಾರೀ ಪ್ರಗತಿ ಕಂಡುಬಂದಿದೆ.

ಧರ್ಮಸ್ಥಳ ಹತ್ಯಾಕಾಂಡದ ಮಹತ್ವದ ರಹಸ್ಯ ಬಯಲು ಸಂಬಂಧ ಈ ದಿನ ಬೆಳಗ್ಗೆ, ಭೀಮಾ SIT ತಂಡಕ್ಕೆ ತನ್ನ ಮನವಿ ಮಾಡಿದ್ದಾನೆ. ಮೊದಲನೇ ದಿನ ಆತ ತೋರಿಸಿದ ಜಾಗಗಳಿಗೆ ಟೇಪ್ ಹಾಕಿದ ಮೇಲೆ, ಆ ಟೇಪ್ ನ ಸುತ್ತಳತೆಗೆ ಮಾತ್ರ ಉತ್ಖನನವನ್ನು ಸೀಮಿತಗೊಳಿಸದೆ ಟೇಪ್ ನ ಸುತ್ತಮುತ್ತಲಿನ ಜಾಗದಲ್ಲೂ ಆತನ ಜೊತೆಗೆ ಉತ್ಖನನ ತಂಡ ಹೋಗಬೇಕೆಂದು ಭೀಮ ಹೇಳಿದ್ದಾನೆ. ಇದಕ್ಕೆ SIT ತಂಡವು ಒಪ್ಪಿದೆ.
ಪಾಯಿಂಟ್ ನಂ. 11ರಿಂದ ಸುಮಾರು 100 ಅಡಿ ಗುಡ್ಡವನ್ನು ಹತ್ತಿ ಏರುವಂತೆ ಹೇಳಿದ್ದಾನೆ. ಇದು ಘೋಷಿತ ಅರಣ್ಯ ಪ್ರದೇಶವಾಗಿರುತ್ತದೆ. ಈ ಗುಡ್ಡವನ್ನು ಏರುವಷ್ಟರಲ್ಲಿ ಕೆಲವರು ಜಾರಿ ಬಿದ್ದು ಗಾಯಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಗುಡ್ಡದ ಮೇಲೆ ಏರಿದ ಭೀಮ, ಆತ ತೋರಿಸಿದ ಜಾಗವನ್ನು ಅಗೆಸಿದಾಗ, ಉತ್ಖನನ ತಂಡವು ಹೆಂಗಸಿನ ಕಳೇಬರ ಮತ್ತು ಹರಿದ ಕೆಂಪು ಸೀರೆಯನ್ನು ಕಂಡಿದೆ. ಅದನ್ನು ಉತ್ಖನನದ ತಂಡವು ಸಂಗ್ರಹಿಸುತ್ತಿದೆ. ಉತ್ಖನನವು ಮುಂದುವರೆದಿದೆ. SIT ಮತ್ತು ಉತ್ಖನನ ತಂಡ ಪಡುತ್ತಿರುವ ಶ್ರಮಕ್ಕೆ ಭೀಮ ಅಲ್ಲಿಯೇ ಕೃತಜ್ಞತೆಯನ್ನು ಸಲ್ಲಿಸಿರುತ್ತಾನೆ.
ಇದನ್ನೂ ಓದಿ: Dharmasthala: ಧರ್ಮಸ್ಥಳದ ಬಂಗ್ಲಗುಡ್ಡದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆ!
Comments are closed.