Accident: ಜಮೀನಿನಲ್ಲಿ ಉಳುಮೆ – ಯಂತ್ರ ಒಳಗೆ ಸಿಲುಕಿ ಯುವಕನ ದೇಹ ಛಿದ್ರ ಛಿದ್ರ

Share the Article

Accident: ಟ್ರ್ಯಾಕ್ಟರ್ ರೋಟೋವೇಟರ್ ಗೆ ಸಿಲುಕಿ ಯುವಕನ ದೇಹ ಛಿದ್ರ ಛಿದ್ರವಾಗಿದೆ. ರಾತ್ರಿ ವೇಳೆ ಜಮೀನು ಉಳುಮೆ ತೆರಳಿದ್ದ ಯುವಕ ದಾರುಣ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ನೆಗಳೂರು ಗ್ರಾಮದಲ್ಲಿ ನಡೆದಿದೆ. ಶಿವಾನಂದ ಹುಣಸಿಮರದ (30)ರೋಟೋವೇಟರ್ ಸಿಲುಕಿ ಸಾವನ್ನಪ್ಪಿದ ಯುವಕ.

ರಾತ್ರಿ ವೇಳೆ ಟ್ರ್ಯಾಕ್ಟರ್ ಮೂಲಕ ಜಮೀನಿನಲ್ಲಿ ಉಳುಮೆ ಮಾಡ್ತಿದ್ದ ವೇಳೆ ಶಿವಾನಂದ ರೋಟೋವೇಟರ್ ಮೇಲೆ ಕುಳಿತ್ತಿದ್ದ. ದಿಢೀರನೆ ಆಯಾತಪ್ಪಿ ರೋಟೋವೇಟರ್ ಒಳಗೆ ಸಿಲುಕಿ ಯುವಕ ದೇಹ ಹೊಲದಲ್ಲಿ ಛಿದ್ರ ಛಿದ್ರವಾಗಿ ಪತ್ತೆಯಾಗಿದೆ. ಕಾಲು ಒಂದೆಡೆ, ದೇಹ ಒಂದೆಡೆ ಬಿದ್ದಿರುವ ದೃಶ್ಯ ಕಂಡುಬಂದಿದೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Crime: ಮಹಿಳೆಯ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿ ವಿಕೃತಿ! ಮಹಿಳೆ ಮೇಲೆ ಹಲ್ಲೆ, ಬಂಧನ

Comments are closed.