Peacock death: 19 ರಾಷ್ಟ್ರಪಕ್ಷಿ ನವಿಲುಗಳ ನಿಗೂಢ ಸಾವು : ತನಿಖೆಗೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹ

Share the Article

Peacock death: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರದಲ್ಲಿ 19 ನವಿಲುಗಳು ನಿಗೂಢವಾಗಿ ಮೃತಪಟ್ಟಿದ್ದು ಇದು ಸಾಮೂಹಿಕ ಹತ್ಯೆಯೋ, ನಿಗೂಢ ಸಾವೋ ಎಂದು ಸರ್ಕಾರ ತನಿಖೆ ನಡೆಸಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ವಕೀಲರಾದ ಮಾಲತೇಶ್ ಅರಸ್ ಹರ್ತಿಕೋಟೆ ಒತ್ತಾಯಿಸಿದ್ದಾರೆ.

14 ಹೆಣ್ಣು ನವಿಲುಗಳು ಸೇರಿ 19 ನವಿಲುಗಳ ಮೃತದೇಹ ಪತ್ತೆ ಆಗಿದ್ದು, ಬೆಳಗ್ಗೆ ರೈತರು ಜಮೀನಿಗೆ ಹೋಗಿದ್ದಾಗ ನವಿಲಿನ ಮೃತದೇಹ ಪತ್ತೆಯಾಗಿದೆ. ಕ್ರಿಮಿನಾಶಕ ಸಿಂಪಡಿಸಿರುವ ಬೆಳೆಗಳನ್ನು ಸೇವಿಸಿ ನವಿಲು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ನವಿಲುಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರು ಎಫ್ ಎಸ್ ಎಲ್ ತನಿಖೆಯಿಂದ ಸಾವಿಗೆ ಕಾರಣ ತಿಳಿದು ಬರಲಿದೆ ಕೂಡಲೇ ತನಿಖೆ ಮಾಡಿ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ವಕೀಲರಾದ ಮಾಲತೇಶ್ ಅರಸ್ ಹರ್ತಿಕೋಟೆ, ಪ್ರಧಾನ ಕಾರ್ಯದರ್ಶಿ ಟಿ.ರುದ್ರಮುನಿ ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ ಇತ್ತೀಚೆಗೆ ಹಲವಾರು ವನ್ಯಜೀವಿಗಳ ಅಸಹಜ ಸಾವುಗಳ ಬಳಿಕ ಈ ಘಟನೆ ನಡೆದಿದ್ದು, ರಾಜ್ಯದ ಜೀವವೈವಿಧ್ಯಕ್ಕೆ ಹೆಚ್ಚುತ್ತಿರುವ ಬೆದರಿಕೆಗಳನ್ನು ಇದು ಎತ್ತಿ ತೋರಿಸುತ್ತದೆ. ಮಲೈ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಹತ್ಯೆ, ಜುಲೈ 2 ರಂದು, ಚಾಮರಾಜನಗರ ಜಿಲ್ಲೆಯಲ್ಲಿ 20 ಮಂಗಗಳಿಗೆ ವಿಷಪ್ರಾಶನ, ಜೂನ್‌ನಲ್ಲಿ ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ಅಭಯಾರಣ್ಯದಲ್ಲಿ ಒಂದು ಹುಲಿ ಮತ್ತು ಅದರ ನಾಲ್ಕು ಮರಿಗಳ ಹಠಾತ್ ಸಾವು ಸಂರಕ್ಷಣಾ ವಲಯಗಳಲ್ಲಿ ಆಘಾತದ ಅಲೆಗಳನ್ನು ಉಂಟುಮಾಡಿದೆ.

ಕರ್ನಾಟಕದಲ್ಲಿರುವ ಶ್ರೀಮಂತ ಜೀವವೈವಿಧ್ಯತೆಯನ್ನು ಕಾಪಾಡಲು ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಅಧಿಕಾರಿಗಳು ಈ ಘಟನೆಗಳ ತನಿಖೆಯನ್ನು ತೀವ್ರಗೊಳಿಸುತ್ತಿದ್ದಾರೆ. ಈ ಕೃತ್ಯ ಪರಿಣಾಮಕಾರಿಯಾಗಿ ನಿಭಾಯಿಸಲು ವನ್ಯಜೀವಿ ಸಂರಕ್ಷಣಾ ಕಾನೂನುಗಳನ್ನು ಬಲಪಡಿಸಲು ಮತ್ತು ಅರಣ್ಯ ಇಲಾಖೆಗಳಿಗೆ ಸಂಪನ್ಮೂಲಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರವನ್ನು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ವಕೀಲರಾದ ಮಾಲತೇಶ್ ಅರಸ್ ಹರ್ತಿಕೋಟೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: High Court: ಮುಷ್ಕರ ನಡೆಸಲು ತಯಾರಿ ನಡೆಸಿದ್ದ ಸಾರಿಗೆ ನೌಕರರಿಗೆ ಹೈಕೋರ್ಟ್ ಶಾಕ್!! ನಾಳೆ ಬಸ್ ಇರುತ್ತೋ ಇಲ್ವೋ?

Comments are closed.