Dharmasthala : 30 ಜನರ ತನಿಖೆಗೆ ಕ್ಷಣಗಣನೆ- ಅಂತಾರಾಷ್ಟ್ರೀಯ ಮಾಧ್ಯಮಗಳು ಹಿಂದೆ ಬಿದ್ದಿವೆ, ಹೋರಾಟಗಾರರಿಗೆ ಧೈರ್ಯವಾಗಿರಿ ಎಂದ ಮಟ್ಟನ್ನನವರ್

Share the Article

 

Dharmasthala: ಎಸ್ ಐಟಿ ತನಿಖೆಯ ಬಗ್ಗೆ ಸೌಜನ್ಯ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದ್ದು ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದಿದ್ದಾರೆ. ಈ ತನಿಖೆ ಸಮರ್ಪಕವಾಗಿ ನಡೆಯುವ ನಿಟ್ಟಿನಲ್ಲಿ ಪ್ರಣವ್ ಮೊಹಂತಿ ಮತ್ತು ಅವರ ಇಡೀ ತಂಡವನ್ನು ಗಿರೀಶ್ ಮಟ್ಟಣ್ಣನವರ್ ಕೊಂಡಾಡಿದ್ದಾರೆ. ಈ ಮಧ್ಯೆ ಇದೊಂದು ಅಂತಾರಾಷ್ಟ್ರೀಯ ಪ್ರಕರಣ, ದೇಶ ವಿದೇಶಗಳ ಮಾಧ್ಯಮಗಳು ಈ ಪ್ರಕರಣದ ಹಿಂದೆ ಬಿದ್ದಿವೆ. ಧೈರ್ಯವಾಗಿರಿ, ನ್ಯಾಯ ಸಿಕ್ಕೇ ಸಿಗುತ್ತದೆ. ಶೀಘ್ರದಲ್ಲಿ 30 ಜನ ಆಪಾದಿತರ ತನಿಖೆ ಶುರುವಾಗಲಿದೆ ಎನ್ನುವ ಶುಭ ಸೂಚನೆಯನ್ನು ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ನೀಡಿದ್ದಾರೆ.

ಮುಂದುವರಿದು ಮಾತನಾಡಿದ ಮಟ್ಟನ್ನನವರು, SIT ತನಿಖೆಯ ಪ್ರಾರಂಭದಲ್ಲಿ ಓರ್ವ ತನಿಖಾಧಿಕಾರಿ ಮಂಜುನಾಥ್ ಗೌಡ ಎಂಬವರು ಸಾಕ್ಷಿದಾರ ಭೀಮನಿಗೆ ಬೆದರಿಕೆ ಹಾಕಿದ್ದು, ಯಾರಿಗೂ ಹೆದರದ ಭೀಮ ಒಂದಷ್ಟು ಗಲಿಬಿಲಿಗೊಂಡಿದ್ದ. ಹಾಗಾಗಿ ಆತ ತಾನು ಹೂತು ಹಾಕಿದ್ದ ಸ್ಪಷ್ಟವಾಗಿ ತೋರಿಸಲು ಗೊಂದಲಕ್ಕೆ ಬಿದ್ದಿರಬಹುದು. ಆದರೆ ಈಗ ಅಗೆತ ನಡೆಸುತ್ತಿರುವ ತನಿಖಾ ಸ್ಥಳದಲ್ಲಿ ಮಂಜುನಾಥ್ ಗೌಡ ಇಲ್ಲ. ಹಾಗಾಗಿ ಭೀಮ ಮುಕ್ತವಾಗಿ ಈ ಸ್ಥಳದಲ್ಲಿ ಓಡಾಡಿ ತಾನು ಹಿಂದೆ ಹೂತು ಹಾಕಿರುವ ಸ್ಥಳಗಳ ನೆನಪುಗಳನ್ನು ಕೆದಕಿ ತೆಗೆಯುತ್ತಿದ್ದಾರೆ. ಸುಮಾರು 12 ವರ್ಷಗಳ ಹಿಂದಿನ ಕಾಡಿನ ನೆನಪುಗಳನ್ನು ಹೆಕ್ಕಿ ತೆಗೆದು ಎಸ್ಐಟಿ ತಂಡದ ಮುಂದಿಡುತ್ತಿದ್ದಾನೆ.

ಆಗ ದಟ್ಟವಾಗಿದ್ದ ಕಾಡಿನ ಕೆಲವೆಡೆ ಈಗ ಸಣ್ಣ ಬೋಳು ಬಿದ್ದಿದೆ. ಆಗ ಕುರುಚಲು ಇದ್ದ ಕಾಡಿನ ಗಿಡಗಳು ಈಗ, 12 ವರ್ಷಗಳ ನಂತರ ಗಾತ್ರ ಹಿಗ್ಗಿಸಿಕೊಂಡು ಬೇರು ಬಿಳಲುಗಳನ್ನು ಚಾಚಿಕೊಂಡು ಸ್ಥಳ ಭದ್ರ ಮಾಡಿಕೊಂಡಿವೆ. ಪ್ರವಾಹದ ಮಣ್ಣು, ಸರಿದು ಹೋದ ಕಾಲದ ಪ್ರಭಾವಕ್ಕೆ ಭೂಮಿಯ ಮೇಲ್ಮೈನಲ್ಲಿ ಸಾಕಷ್ಟು ಬದಲಾವಣೆ ಆಗಿರೋದು ಭೀಮನ ಪ್ರಾರಂಭಿಕ ಸಣ್ಣ ಹಿನ್ನಡೆಗೆ ಕಾರಣ ಎನ್ನಲಾಗಿದೆ. ಆದರೆ, ಕೊಲೆ, ಅಸಹಜ ಸಾವು ಇತ್ಯಾದಿಗಳ ತನಿಖಾ ಪ್ರಕ್ರಿಯೆಯಲ್ಲಿ ಕಿರು ಬೆರಳಿನ ಒಂದು ಸಣ್ಣ ಮೂಳೆ ದೊರೆಯುವುದು ಕೂಡಾ ಭಾರೀ ದೊಡ್ಡ ತನಿಖಾ ಪ್ರಗತಿ ಎನ್ನಲಾಗುತ್ತದೆ.

ಹಾಗಾಗಿ ಭೀಮ ಮುನ್ನಡೆ ಕಾಯ್ದುಕೊಂಡಿದ್ದಾರೆ!! ಇದೀಗ ರಾಜ್ಯ ಅಷ್ಟೇ ಅಲ್ಲ, ದೇಶ ವಿದೇಶಗಳು ಕೂಡಾ ಭೀಮನ ಗುಂಡಿಗೆಗೆ, ಲಕ್ಷ ಕೋಟಿ ದುಡ್ಡಿನ ಸಾಮ್ರಾಜ್ಯವನ್ನು ಕೂಡಾ ಎದುರು ಹಾಕಿಕೊಳ್ಳಬಲ್ಲ ಎದೆಗಾರಿಕೆಗೆ, ತನ್ನ ಮತ್ತು ಕುಟುಂಬದವರ ಮೇಲೆ ಇರಬಹುದಾದ ಅಪಾರ ರಿಸ್ಕ್ ನ ಮಧ್ಯೆ ಕೂಡಾ ಧೃಡವಾಗಿ ನಿಂತ ಕಾರಣಕ್ಕೆ ಅಪಾರ ಗೌರವಕ್ಕೆ ಪಾತ್ರವಾಗಿದ್ದಾರೆ.

ಈ ಮಧ್ಯೆ ಸೌಜನ್ಯ ಹೋರಾಟಗಾರ ಗಿರೀಶ್ ಮಟ್ಟನ್ನನವರ್ , ಯಾವುದೇ ಕಾರಣಕ್ಕೂ SIT ತಂಡವನ್ನು ಅನುಮಾನಿಸಬೇಡಿ ಅಂದಿದ್ದಾರೆ. ತನಿಖೆ ಸರಿಯಾಗಿ ಆಗುತ್ತಿದೆ ಅನ್ನೋದು ಮಟ್ಟನ್ನನವರ್ ರ ಸ್ಪಷ್ಟ ಮಾತು.

ಅಚ್ಚರಿಯ ವಿಷಯ ಏನೆಂದರೆ, 1995 ರಿಂದ 2012 ರ ತನಕದ ಅಸ್ವಾಭಾವಿಕ ಮರಣ ವರದಿ (ಯುಡಿಆರ್) ದತ್ತಾಂಶವನ್ನು ಎಸ್‌ಐಟಿ ಹೊಂದಿದೆ ಅನ್ನೋದು. ಬೆಳ್ತಂಗಡಿ ಪೊಲೀಸರು ಈ ದಾಖಲೆಗಳನ್ನು ಅಳಿಸಿ ಹಾಕಿದ್ದರೂ, ಎಸ್‌ಐಟಿ ಘೋಷಣೆಯಾದ ಕೂಡಲೇ ದತ್ತಾಂಶವನ್ನು ಸಂಗ್ರಹಿಸುವ ಮೊಹಾಂತಿಯವರ ಮುಂಜಾಗೃತಾ ಕ್ರಮವು ತನಿಖೆಯ ರಕ್ಷಣೆಗೆ ಬಂದಿದೆ ಎನ್ನಲಾಗುತ್ತಿದೆ. SIT ತಂಡ ಮಾತ್ರ ಯಾವುದೇ ಹೇಳಿಕೆ ನೀಡದೆ ತನ್ನ ಪಾಡಿಗೆ ತನಿಖೆಯಲ್ಲಿ ಮಗ್ನವಾಗಿದೆ.

Comments are closed.