Kerala: ಮಲಯಾಳಂ ಚಿತ್ರರಂಗದ ಜನಪ್ರಿಯ ಹಾಸ್ಯನಟ ಹೋಟೆಲ್ ಕೋಣೆಯಲ್ಲಿ ನಿಗೂಢವಾಗಿ ಸಾವು

Kerala: ಮಲಯಾಳಂ ಚಿತ್ರರಂಗದ ಜನಪ್ರಿಯ ಹಾಸ್ಯನಟ ಕಲಾಭವನ್ ನವಾಸ್ (51) ಶುಕ್ರವಾರ ರಾತ್ರಿ ಛೋಟಾನಿಕ್ಕರದಲ್ಲಿರುವ ಹೋಟೆಲ್ ರೂಮ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ನವಾಸ್ ಮುಂದಿನ ‘ಪ್ರಕಂಬನಂ’ ಚಲನಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು. ಶುಕ್ರವಾರ ರಾತ್ರಿ ಚಿತ್ರೀಕರಣ ಮುಗಿಸಿ ಹೋಟೆಲ್‌ನಿಂದ ಚೆಕ್‌ಔಟ್ ಮಾಡಬೇಕಿತ್ತು.

ಆದರೆ, ಸಮಯಕ್ಕೆ ತಮ್ಮ ಕೋಣೆಯಿಂದ ನಿರ್ಗಮಿಸದ ಕಾರಣ ರೂಮ್ ಬಾಯ್ ಅವರು ಹೋಗಿ ನೋಡಿದಾಗ ನವಾಸ್ ಅವರು ಪ್ರಜ್ಞೆತಪ್ಪಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು, ಆದರೆ ವೈದ್ಯರು ನವಾಸ್ ಮೃತ ಪಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ.
Comments are closed.