PM Kissan : ಇಂದು ರೈತರ ಖಾತೆಗೆ ಪಿಎಂ ಕಿಸಾನ್ 20ನೇ ಕಂತಿನ ಹಣ ಜಮಾ!!

PM Kissan: ದೇಶದ ರೈತರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಇಂದು PM-Kisan ಯೋಜನೆಯ 20 ನೇ ಕಂತು ಬಿಡುಗಡೆಯಾಗಲಿದ್ದು, ರೈತರು ತಮ್ಮ ಬ್ಯಾಂಕ್ ಖಾತೆಗೆ 2,000 ರೂ.ಗಳನ್ನು ಪಡೆಯಲಿದ್ದಾರೆ.

ಹೌದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan scheme) 20ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಇಂದು (ಆಗಸ್ಟ್ 2) ಬಿಡುಗಡೆ ಮಾಡಲಿದೆ. ಉತ್ತರಪ್ರದೇಶದ ವಾರಾಣಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ 20ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ.
ದೇಶಾದ್ಯಂತ 9.7 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 20,500 ಕೋಟಿ ರೂ.ಗೂ ಹೆಚ್ಚು ಹಣವನ್ನು ನೇರವಾಗಿ ವರ್ಗಾಯಿಸಲಾಗುವುದು. ಇದು ಯೋಜನೆಯಡಿ ಒಟ್ಟು ವಿತರಣೆಯನ್ನು 3.90 ಲಕ್ಷ ಕೋಟಿ ರೂ. ಮೀರಿಸುತ್ತದೆ.
ಕಿಸಾನ್ ಹಣ ಪಡೆಯಲು ರೈತರಿಗೆ ಇಕೆವೈಸಿ ಕಡ್ಡಾಯ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯಲು ರೈತರು ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಈಗಾಗಲೇ ಬಹುತೇಕ ರೈತರು ತಮ್ಮ ಖಾತೆಗೆ ಇಕೆವೈಸಿ ಮಾಡಿಸಿದ್ದಾರೆ. ಕಿಸಾನ್ ಸಮ್ಮಾನ್‌ನಿಧಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಅನ್ನೋದನ್ನು ಖಚಿತ ಪಡಿಸಿಕೊಳ್ಳಿ.