Cubbon Park: ಡೇಟಿಂಗ್ ಸ್ಪಾಟ್ ಆಗ್ತಿದ್ಯಾ ಕಬ್ಬನ್ ಪಾರ್ಕ್? 199 ರೂಗೆ ಸಿಗಲಿದಿದೆ ಡೇಟಿಂಗ್ ಟಿಕೆಟ್ – ಬುಕ್ ಮೈ ಶೋ ನಲ್ಲಿ ಬುಕ್ಕಿಂಗ್

Cubbon Park: ಬೆಂಗಳೂರು ನಗರಕ್ಕೆ ಇನ್ನೊಂದು ಹೆಸರು ಉದ್ಯಾನನಗರಿ. ಈ ಹೆಸರಿಗೆ ಕಳಶವಿಟ್ಟದ್ದು ಕಬ್ಬನ್ ಪಾರ್ಕ್. ಕಬ್ಬನ್ ಪಾರ್ಕ್ನP ವಿನ್ಯಾಸವನ್ನು ಒಮ್ಮೆ ಕಂಡವರು ಯಾರಾದರೂ ಆಕರ್ಷಿತರಾಗುತ್ತಾರೆ. ಬ್ರಿಟಿಷ್ ಕಾಲೋನಿಯ ಶೈಲಿಯಲ್ಲಿ ನಿರ್ಮಿಸಿದ ನವಿರಾದ ಸೊಬಗಿನ ಕಟ್ಟಡಗಳು, ಬ್ರಿಟಿಷರ ಸೌಂದರ್ಯ ಪ್ರಜ್ಞೆ ಮತ್ತು ಕುಶಲತೆಯ ಪ್ರತೀಕಗಳಾಗಿವೆ. ಪಾರ್ಕ್ನನ ಮಧ್ಯೆ, ದಿವಾನ್ ಶೇಶಾದ್ರಿ ಅಯ್ಯರ್ರ್ವರ ಸ್ಮರಣ ಮಂದಿರದಲ್ಲಿ ಲೈಬ್ರರಿ ಇದೆ. ಜವಹರ್ ಬಾಲಭವನ ಮಕ್ಕಳ ಉದ್ಯಾನವನ, ಮತ್ತು ಇಲ್ಲಿರುವ ಮ್ಯೂಸಿಯೆಮ್, ಅತಿ ಹಳೆಯ ವಸ್ತುಸಂಗ್ರಹಾಲಯಗಳಲ್ಲೊಂದಾಗಿವೆ.

ಸೋಮವಾರ ಬಿಟ್ಟು ವಾರದ ಎಲ್ಲಾ ದಿನಗಳಲ್ಲು ಪಾರ್ಕ್ ಸಾರ್ವಜನಿಕರ ಪ್ರವೇಶಕ್ಕೆ ಲಭ್ಯವಿದೆ. ಸಮಯ ಬೆಳಿಗ್ಯೆ 8ರಿಂದ ಸಾಯಂಕಾಲ 5ರವರೆಗೆ. ಹತ್ತಿರದಲ್ಲೇ ಸರ್. ಎಮ್. ವಿಶ್ವೇಶ್ವರಯ್ಯ ಕೈಗಾರಿಕಾ ಸಾಮಗ್ರಿಗಳ ತಯಾರಿಕೆಯ ವಸ್ತುಸಂಗ್ರಹಾಲಯವಿದೆ. ಇಂತಹ ಸುಂದರವಾದ, ಬಹಳ ಇತಿಹಾಸ ಇರುವ, ಅಲ್ಲದೆ ಬಂಗಳೂರಿನ ನಗರದ ಮಧ್ಯ ಬಾಗದಲ್ಲಿ ಇರುವ ಇಂಥ ಕಬ್ಬನ್ ಪಾರ್ಕ್ ಈಗ ಡೇಟಿಂಗ್ ಸ್ಪಾಟ್ ಆಗ್ತಿದೆ ಅನ್ನೋ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಈ ಬಗ್ಗೆ ಬುಕ್ ಮೈ ಶೋನ ಅಧೀಕೃತ ವೆಬ್ ಸೈಟ್ ನಲ್ಲಿ ಬುಕ್ಕಿಂಗ್ ಅವಕಾಶ ಹಾಗೂ ಈ ಬಗ್ಗೆ ಮಾಹಿತಿ ಸಿಗುತ್ತಿದೆ. ಕೇವಲ 199ರೂಪಾಯಿಗೆ ಡೇಟಿಂಗ್ ಟಿಕೆಟ್ ಸಿಗಲಿದಿದೆ. ಎರಡು ಗಂಟೆವರೆಗೂ ಡೇಟಿಂಗ್ ಗೆ ಅವಕಾಶ ಎಂದು ಮಾಹಿತಿ ಇದೆ. ಬುಕ್ ಮೈ ಶೋ 18 ವರ್ಷ ತುಂಬಿರುವ ಯುವಕ ಯುವತಿಯರಿಗೆ ಅಹ್ವಾನ ನೀಡಿದೆ. ಆಗಸ್ಟ್ 2 ರಿಂದ 31 ಆಗಸ್ಟ್ ವರೆಗೂ ಡೇಟಿಂಗ್ ಡೇಟ್ ನಡೆಯಲಿದೆ.
ಗುರುತು ಪರಿಚಯ ಇರದ ಗೆಳೆಯ ಗೆಳತಿಯರೊಡನೆ ಪ್ರೇಮ ಸಂಭಾಷಣೆಗೆ ಇಲ್ಲಿ ಅವಕಾಶ ಸಿಗಲಿದೆ. ಸ್ನೇಹ, ಪ್ರೇಮ, ಸಂಭಾಷಣೆಗೆ ಅವಕಾಶ ಕಲ್ಪಿಸೋದಾಗಿ ಬುಕ್ ಮೈ ಶೋನಲ್ಲಿ ಮಾಹಿತಿ ಇದೆ. ಕಬ್ಬನ್ ಪಾರ್ಕ್ ನಲ್ಲಿ ಡೇಟಿಂಗ್ ಅವಕಾಶ ಬಗ್ಗೆ ಮಾಹಿತಿ ತಿಳಿದ ಪರಿಸರವಾದಿಗಳಯ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಈ ಡೇಟಿಂಗ್ ವಿಚಾರಕ್ಕೂ ತೋಟಗಾರಿಕಾ ಇಲಾಖೆಗೂ ಸಂಬಂಧ ಇಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಡೇಟಿಂಗ್ ಹೆಸರಲ್ಲಿ ಕಬ್ಬನ್ ಪಾರ್ಕ್ ಗೆ ಮಸಿ ಬಳಿಯಲು ಮುಂದಾಗಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇಂದು ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ನೀಡಲು ನಿರ್ಧಾರ ಮಾಡಲಾಗಿದೆ ಎಂದು ಡಾ.ಎಂ.ಜಗದೀಶ್ ಹೇಳಿದರು.
Comments are closed.