Santosh Lad: ಇನ್ಮುಂದೆ ಕಾರ್ಮಿಕರಿಗೆ ಒತ್ತಡ ಹೇರಿ 10 ಗಂಟೆ ಕೆಲಸ ಮಾಡಿಸುವಂತಿಲ್ಲ – ಕಂಪನಿಗಳಿಗೆ ಸರ್ಕಾರ ಖಡಕ್ ವಾರ್ನಿಂಗ್

Share the Article

Santosh Lad: ಕಾರ್ಮಿಕರಿಗೆ ಹತ್ತು ಗಂಟೆಗಳ ಕಾಲ ಕೆಲಸ ಮಾಡಿ ಎಂದು ಒತ್ತಡ ಹೇರಬೇಡಿ ಎಂದು ಕಂಪನಿಗಳಿಗೆ ಸರ್ಕಾರ ಖಡಕ್‌ ಎಚ್ಚರಿಕೆ ಕೊಟ್ಟಿದೆ.

ಕಾರ್ಮಿಕರ ಕೆಲಸದ ಅವಧಿಯನ್ನು 8 ರಿಂದ 10 ಗಂಟೆ ವಿಸ್ತರಣೆ (Working Hours Extension) ಮಾಡುವ ಬಗ್ಗೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಪ್ರಸ್ತಾವನೆ ಕಳುಹಿಸಿತ್ತು. ಈ ಪ್ರಸ್ತಾವನೆಗೆ ಕೆಲಸದ ಕರ್ನಾಟಕದಲ್ಲಿ ಕಾರ್ಮಿಕ ಸಂಘಟನೆಗಳು ಸಾಕಷ್ಟು ವಿರೋಧ ವ್ಯಕ್ತಪಡಿಸಿವೆ. ಈ ಬೆನ್ನಲ್ಲೇ ಸರ್ಕಾರವು ಕಾರ್ಮಿಕರಿಗೆ ಒತ್ತಡ ಹಾಕಿ 10 ಗಂಟೆಗಳ ಕಾಲ ಕೆಲಸ ಮಾಡದಂತೆ ಕಂಪನಿಗಳಿಗೆ ಎಚ್ಚರಿಕೆ ಕೊಟ್ಟಿದೆ.

ಈ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಪತ್ರಿಕಾಗೋಷ್ಠಿ ನಡೆಸಿ 1961ರ ಕರ್ನಾಟಕ ಅಂಗಡಿ ಮತ್ತು ಸ್ಥಾಪನೆ ಕಾಯ್ದೆಗೆ ತಿದ್ದುಪಡಿ ತರುವ ಮತ್ತು ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ 9 ರಿಂದ 12 ಗಂಟೆಗೆ ಅಥವಾ ಐದು ದಿನಕ್ಕೆ 48 ಗಂಟೆ ಕೆಲಸ ಅವಧಿಗೆ ಹೆಚ್ಚಿಸಲು ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಭಾಗಶಃ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.

ಅಲ್ಲದೆ ಕಾರ್ಮಿಕರಿಗೆ ಒತ್ತಡ ಹಾಕಿ ಕೆಲಸ ಮಾಡಿಸುವಂತಿಲ್ಲ. ಕಾರ್ಮಿಕರು ಕೆಲಸ ಮಾಡುವುದಾಗಿ ಒಪ್ಪಿ ಪತ್ರ ಬರೆದು ಕೊಡಬೇಕು, ಹಾಗಿದ್ದರಷ್ಟೇ ಮಾಡಿಸಬಹುದು. ಕಂಪನಿಯವರು ತೊಂದರೆ ಕೊಟ್ಟರೆ ಕಾರ್ಮಿಕ ಇಲಾಖೆಗೆ ನೇರವಾಗಿ ಕಾರ್ಮಿಕರು ದೂರು ನೀಡಬಹುದು. ಕೆಲಸದ ಅವಧಿ ವಿಸ್ತರಣೆಯ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಆಗಾಗ ಪರಿಶೀಲನೆ ಮಾಡಬೇಕು. ಈ ರೀತಿಯ ಮಾನದಂಡಗಳನ್ನು ಜಾರಿಗೆ ತರಲು ನಿರ್ಧಾರ ಮಾಡಿದೆ ಎಂದು ಲಾಡ್ ಹೇಳಿದ್ದಾರೆ.

ಇದನ್ನೂ ಓದಿ: Donald Trump : ಭಾರತದ ಆರ್ಥಿಕತೆ ನಾಶವಾಗಿ ಹೋಗಲಿ – ಟ್ರಂಪ್ ಹಿಡಿಶಾಪ

Comments are closed.