Dharmasthala Case: ಧರ್ಮಸ್ಥಳ ಕೇಸ್‌ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿದರೆ ಕ್ರಮ: ಗೃಹ ಸಚಿವರ ಮಹತ್ವದ ಸಭೆ

Share the Article

Dharmasthala Case: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಸುಳ್ಳು ಸುದ್ದಿಗಳು ಸೋಶಿಯಲ್‌ ಮೀಡಿಯಾದಲ್ಲಿ ಸೇರಿ ಹಲವು ವೇದಿಕೆಗಳಲ್ಲಿ ಹರಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಬೆನ್ನಲ್ಲೇ ಗೃಹ ಸಚಿವ ಜಿ.ಪರಮೇಶ್ವರ್‌ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ಹಲವು ನಿರ್ಣಯ ಕೈಗೊಳ್ಳಲಾಗಿದೆ.

ಪೊಲೀಸ್ ಮಹಾನಿರ್ದೇಶಕ, ಡಿಜಿಪಿ, ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಧರ್ಮಸ್ಥಳ ಪ್ರಕರಣ ಸಂಬಂಧ ಸುಳ್ಳು ಸುದ್ದಿ ಹರಡಿದರೆ ಕಠಿಣ ಶಿಕ್ಷೆ ಗುರಿಪಡಿಸಲು ಸರ್ಕಾರ ಮುಂದಾಗಿದೆ. ಫೇಕ್ ನ್ಯೂಸ್‌ಗಳ ಮೇಲೆ ನಿಗಾಹಿಸಲು ಸರ್ಕಾರ ಮುಂದಾಗಿದೆ.

ಎಸ್‌ಐಟಿ ತನಿಖೆ, ಹೂತಿಟ್ಟ ಶವ ಅಗೆಯುವ ಕಾರ್ಯಾಚರಣೆ, ದೂರುದಾರ ಸೇರಿ ಹಲವು ಪ್ರಕರಣಗಳು, ಘಟನೆಗಳ ಕುರಿತು ಗಂಭೀರ ಆರೋಪಗಳು ಕೇಳಿ ಬರುತ್ತಿದ್ದು, ಸುಳ್ಳು ಸುದ್ದಿ ಹರಡುತ್ತಿರುವ ಸೋಶಿಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ ಹಾಗೂ ಇತರ ವೇದಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್ ಅದಕ್ಕೆ ಹಾಕುತ್ತಿರುವ ಕಮೆಂಟ್ ಕುರಿತು ಗಂಭೀರ ಆರೋಪಗಳು ಕೇಳಿ ಬರತ್ತಿದ್ದು, ರಮ್ಯಾ ಘಟನೆ ಸೇರಿ ಹಲವು ಪ್ರಕರಣಗಳು ನಡೆದಿದೆ. ಹೀಗಾಗಿ ಇಂತಹ ಘಟನೆಗಳಿಗೂ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಜಟಾಪಟಿ ವೈಯುಕ್ತಿಕ ಮಟ್ಟಕ್ಕೆ, ಘನತೆಗೆ ಧಕ್ಕೆ ತರವು ಕೆಲಸಗಳು ನಡೆಯುತ್ತಿದೆ. ಇದಕ್ಕೂ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: Dharmasthala Burial Case: ಧರ್ಮಸ್ಥಳ ಪ್ರಕರಣ – ಪಾಯಿಂಟ್ 7 ರಲ್ಲಿ 3 ಫೀಟ್ ವರೆಗೆ ಸಿಗದ ಕಳೆಬರಹ – ಮತ್ತಷ್ಟು ಅಗೆಯಲು ಹಿಟಾಚಿ ಬಳಕೆ

Comments are closed.