Viral Video: ನೋಡ ನೋಡುತ್ತಿದ್ದಂತೆ ಮುರಿದು ಬಿತ್ತು 360 ಡಿಗ್ರಿಯ ಬೃಹತ್ ಜೋಕಾಲಿ – ಭಯಾನಕ ವಿಡಿಯೋ ವೈರಲ್

Viral Video : ಪಾರ್ಕ್ ನಲ್ಲಿರುವ ಬೃಹತ್ ಸ್ವಿಂಗ್ ಮುರಿದು ಬಿದ್ದು 23 ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಅರೇಬಿಯಾದಲ್ಲಿ ನಡೆದಿದೆ.

ಹೌದು, ಸೌದಿ ಅರೇಬಿಯಾದ ಗ್ರೀನ್ ಮೌಂಟೇನ್ ಪಾರ್ಕ್‌ನಲ್ಲಿ (Green Mountain park in Saudi Arabia) 360 ಡಿಗ್ರಿ ಎಂದು ಕರೆಯಲ್ಪಡುವ ಜೋಕಾಲಿ ರೈಡ್ (360 Degree Ride) ಮಧ್ಯದ ಕಂಬವೇ ಇದ್ದಕ್ಕಿದ್ದಂತೆ ಮುರಿದು ಬಿದ್ದಿದೆ. ಈ ಘಟನೆಯಲ್ಲಿ ಬೃಹತ್ ಜೋಕಾಲಿಯಲ್ಲಿ ಕುಳಿತಿದ್ದ 23 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ದುರಂತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಅಂದಹಾಗೆ ವಿಡಿಯೋದಲ್ಲಿ ಜೋಕಾಲಿಯ ಮಧ್ಯದ ಕಂಬವು ಎರಡು ಭಾಗಗಳಾಗಿ ಕಟ್ ಆಗುವುದನ್ನ ವಿಡಿಯೋದಲ್ಲಿ ನೋಡಬಹುದಾಗಿದೆ. ಘಟನೆಯ ಸಮಯದಲ್ಲಿ, ಹಲವಾರು ಯುವಕರು ಮತ್ತು ಮಹಿಳೆಯರು ರೈಡ್‌ನಲ್ಲಿದ್ದರು. ಇದ್ದಕ್ಕಿದ್ದಂತೆ, ಒಂದು ಕ್ರ್ಯಾಕ್ಲಿಂಗ್ ಶಬ್ದ ಕೇಳಿ, ಜೋಕಾಲಿ ಅರ್ಧದಷ್ಟು ಮುರಿದುಹೋಗಿದ್ದು, ಅದೃಷ್ಟವಶಾತ್ ಸದ್ಯದ ಮಾಹಿತಿ ಪ್ರಕಾರ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಗಾಯಗೊಂಡಿರುವ 23 ಜನರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
Horrific ride malfunction in Saudi Arabia
A “360-degree” amusement ride broke mid-air at Green Mountain Park in Taif
At least 23 people injured while on board
Visuals show the ride snapping in half pic.twitter.com/xr25xOAcFa
— Nabila Jamal (@nabilajamal_) July 31, 2025
Comments are closed.