Indira Canteen: 52 ಹೊಸ ಇಂದಿರಾ ಕ್ಯಾಂಟೀನ್ – ಟೆಂಡರ್ ಕರೆದ ಪಾಲಿಕೆ

Share the Article

Indira Canteen: ಇಂದಿರಾ ಕ್ಯಾಂಟೀನ್‌ಗೆ ಹೊಸ ಜೀವ ಕಳೆ ಕೊಡಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ 52 ಇಂದಿರಾ ಕ್ಯಾಂಟೀನ್ ತೆರಯಲು ತಯಾರಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ 52 ಹೊಸ ಇಂದಿರಾ ಕ್ಯಾಂಟೀನ್ ತೆರಯಲು ಬೆಂಗಳೂರು ಮಹಾ ನಗರಪಾಲಿಕೆ ಟೆಂಡರ್ ಕರೆದಿದೆ.

ಈಗಾಗಲೇ‌ ಬೆಂಗಳೂರಲ್ಲಿ 160ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಣೆ ಮಾಡ್ತಿದೆ. ಇದೀಗಾ ಕ್ಯಾಂಟೀನ್ ಇಲ್ಲದ ವಾರ್ಡ್‌ಗಳಲ್ಲಿ ಹೊಸ ಇಂದಿರಾ ಕ್ಯಾಂಟಿನ್ ತೆರೆಯಲು ಟೆಂಡರ್ ಆಹ್ವಾನ ಮಾಡಲಾಗಿದೆ. ಸದ್ಯ ಕಾರ್ಯ ನಿರ್ವಹಿಸದೆ ಇರುವ ಇಂದಿರಾ ಕ್ಯಾಂಟೀನ್ ಗಳನ್ನು ರಿಪ್ಲೇಸ್ ಮಾಡುವ ಸಾಧ್ಯತೆ ಕೂಡ ಇದೆ. ಟೆಂಡರ್ ಪ್ರಕ್ರಿಯೆಯಲ್ಲಿ ಮೂರು ಕಂಪನಿಗಳು ಭಾಗಿಯಾಗಿವೆ.

ಜನ ಓಡಾಡಾಟದ ಪ್ರದೇಶಗಳಾದ ಬಸ್‌ ನಿಲ್ದಾಣ, ರೈಲ್ವೆ ಸ್ಟೇಷನ್, ಆಸ್ಪತ್ರೆ, ಶಾಲಾ ಕಾಲೇಜುಗಳಿರುವ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ ತೆರಯಲು ತಯಾರಿ ನಡೆಸಲಾಗಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಮುಗಿಸಿ ಹೊಸ ಕ್ಯಾಂಟೀನ್ ನಿರ್ಮಾಣ ಮಾಡಲು ಬಿಬಿಎಂಪಿ ಮುಂದಾಗಿದೆ.

ಇದನ್ನೂ ಓದಿ: Sullia: ಕುಮಾರ್ ಪೆರ್ನಾಜೆ, ಸೌಮ್ಯ ದಂಪತಿಗಳು ಆದರ್ಶ ಜೇನು ಕೃಷಿ ದಂಪತಿಗಳು ಪ್ರಶಸ್ತಿಗೆ ಆಯ್ಕೆ!

Comments are closed.