Dharmasthala : ಅಸ್ತಿಪಂಜರ ಸಿಗದಿದ್ರೂ ನಡೆಯುತ್ತಾ ತನಿಖೆ? ಇದು ತಾಳ್ಮೆಯ ಪ್ರಕ್ರಿಯೆ ಎಂದೀದ್ದೆಕೆ ಮೊಹಂತಿ?

Dharmasthala: ಧರ್ಮಸ್ಥಳ ಪ್ರಕರಣ ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ದೂರುದಾರ ಸೂಚಿಸಿದ ಸ್ಥಳಗಳಲ್ಲಿ ಎಸ್ಐಟಿ ಅಧಿಕಾರಿಗಳು ಉತ್ಖನನ ಕಾರ್ಯ ನಡೆಸುತ್ತಿದ್ದಾರೆ. ಇದೀಗ ದೂರುದಾರ ತೋರಿಸಿದ ಐದೂ ಸ್ಥಳಗಳಲ್ಲಿ ಅಗೆಯುವಾಗಲೂ ಕೂಡ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ಆಪರೇಷನ್ ಭೀಮ ಕಾರ್ಯಾಚರಣೆಯಲ್ಲಿ ಹೂತಿಟ್ಟ ಶವಗಳು ಇಲ್ಲ,ಲ ಎಂಬಂತ ಮುಂತಾದ ನೂರಾರು ಯೋಚನೆಗಳು, ಸಿದ್ದಾಂತಗಳು, ಚರ್ಚೆಗಳು ಹುಟ್ಟಿಕೊಳ್ಳುತ್ತಿವೆ.

ಆದರೆ ನೆನಪಿರಲಿ ಭೀಮಾ ತಾನು ಹೂತಿಟ್ಟಿದ್ದೇನೆ ಎಂದದ್ದು ಬರೀ ಐದು, ಹತ್ತು ಶವಗಳನ್ನು ಮಾತ್ರವಲ್ಲ. ಬದಲಿಗೆ ನೂರಾರು ಶವಗಳನ್ನು. ಹೀಗಾಗಿ ಶವಗಳ ಉತ್ಕನನ ಕಾರ್ಯ ಎರಡು ಮೂರು ಅಥವಾ ಒಂದು ವಾರಕ್ಕೆ ಮಾತ್ರ ಸೀಮಿತವಾಗಿರುವುದಲ್ಲ. ಅದು ತಿಂಗಳಾಗಬಹುದು, ಅಥವಾ ವರ್ಷಗಟ್ಟಲೆ ಹಿಡಿಯಲೂಬಹುದು. ಈಗ ನಡೆದದ್ದು ಬರೀ ಜುಜುಬಿ ತನಿಖೆ ಅಷ್ಟೇ. ಅಂದರೆ ತನಿಖೆ ಇನ್ನು ಪ್ರಾಥಮಿಕ ಹಂತದಲ್ಲಿದೆ. ಈಗ ನೋಡುತ್ತಿರುವುದು ಟ್ರೈಲರ್. ಇನ್ನು ಸಿನಿಮಾ ತುಂಬಾ ಬಾಕಿ ಇದೆ. ಪ್ರಾಥಮಿಕತೆಯು ಪ್ರೌಢಾವಸ್ಥೆಯಾಗಿ ತಲುಪಲು ಸಮಯ ಬೇಕಲ್ಲವೇ?
ಒಂದು ದಸರಾ ಕಾರ್ಯಕ್ರಮದ ಲೆಕ್ಕವನ್ನೇ ನೀಡಲು ನಮಗೆ ಎಂಟು ತಿಂಗಳ ಬೇಕಾಗುತ್ತದೆ. ಅಂದರೆ ಇನ್ನೂ ಮೂರ್ನಾಲ್ಕು ತಿಂಗಳು ಕಳೆದರೆ ಮತ್ತೊಂದು ದಸರಾವನ್ನು ನಾವು ಎದುರುಗಾಣುವ ಹೊತ್ತಿಗೆ ಹಿಂದಿನ ದಸರಾದ ಲೆಕ್ಕಾಚಾರ ಮಾಡಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಅನೇಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಂತಹ ಎಷ್ಟೋ ಘಟನೆಗಳು ಹತ್ತು, ಹದಿನೈದು, ಇಪ್ಪತ್ತು ವರ್ಷಗಳ ಬಳಿಕ ಇತ್ಯರ್ಥವಾಗಿರುವುದು, ಅವುಗಳ ಸತ್ಯ ಹೊರ ಬಂದಿರುವುದು ನಮ್ಮ ಕಣ್ಣೆದುರು ಸಾಕ್ಷಿ ಇದೆ. ಅಂತದರಲ್ಲಿ ಬರೋಬ್ಬರಿ 20 ವರ್ಷಗಳ ಹಿಂದೆ ನಡೆದಂತಹ ಈ ಎಲ್ಲ ಪ್ರಕರಣಗಳು ಇದೀಗ ಮತ್ತೆ ಬೆಳಕಿಗೆ ಬರುತ್ತಿರುವುದು, ಅವುಗಳನ್ನು ಕೆದಕಿ ಕೆದಕಿ ಸತ್ಯ ಹೊರ ತೆಗೆಯುವುದು ಸುಲಭದ ಕೆಲಸವಲ್ಲ.
ಇಂದು ಕಾರ್ಮಿಕರ ಮೂಲಕ, ಜೆಸಿಬಿಗಳ ಮೂಲಕ ಸಮಾಧಿಗಳನ್ನು ಅಗಸುತ್ತಿರುವ ಎಸ್ಐಟಿ ಮುಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಸಾಕ್ಷಿಗಳನ್ನು ಹುಡುಕಬಹುದು. ನುರಿತ ತಜ್ಞರನ್ನು ಸ್ಥಳಕ್ಕೆ ಕರೆಸಬಹುದು. ಅಲ್ಲಿನ ಸ್ಥಳಿಯರೇ ಈ ಕುರಿತಾಗಿ ಮಾತನಾಡುತ್ತಿದ್ದು, 2006ರ ಮುಂಚೆ ಧರ್ಮಸ್ಥಳದಲ್ಲಿ ರುದ್ರಭೂಮಿ ಇರಲಿಲ್ಲ ಹಾಗಾಗಿ ಶವಗಳನ್ನು ಅಲ್ಲಲ್ಲಿಗೆ ದಫನ್ ಮಾಡಲಾಗುತ್ತಿತ್ತು. ಹೀಗಾಗಿ ಹೆಣ ಇರಲಿಕ್ಕೂ ಸಾಕು ಎಂದು ಹೇಳಿಕೆ ನೀಡುತ್ತಿದ್ದಾರೆ. ಭೀಮ ತೋರಿದ ಶವಗಳು ದೊರೆಯದಿದ್ದರೂ, ಸ್ಥಳೀಯರು ಹೇಳುತ್ತಿರುವ ಶವಗಳಾದರು ಸಿಗಬೇಕಲ್ಲವೇ?
ಹೀಗಾಗಿ ಬರೀ ಮೂರು ದಿನದ ಅಗೆಯುವ ಕಾರ್ಯ ಇಟ್ಟುಕೊಂಡು ಅಲ್ಲಿ ಏನು ಸಿಗಲಿಲ್ಲ, ಭೀಮ ಹೇಳಿದ್ದು ಸುಳ್ಳು ಎಂದು ಬಡಾಯಿ ಕೊಚ್ಚುವ ಬದಲು ತನಿಖೆಯ ಆಳ-ಅಗಲವನ್ನು ಯೋಚಿಸಬೇಕು. ಈ ಕುರಿತಾಗಿ ಎಸ್ಐಟಿ ತಂಡದ ಮುಖ್ಯಸ್ಥ ಪ್ರಣವ್ ಮೊಹಾಂತೀಯವರೇ ಪ್ರತಿಕ್ರಿಯಿಸಿ ತನಿಖೆ ಎಂಬುದು ಒಂದು ತಾಳ್ಮೆಯ ಪ್ರಕ್ರಿಯೆ. ಅದು ಇನ್ನು ಪ್ರಾಥಮಿಕ ಹಂತದಲ್ಲಿದೆ. ಯಾರು ಏನೇ ಹೇಳಿದರೂ ಕೂಡ ನಾವು ನಮ್ಮ ಕಾರ್ಯವನ್ನು ಮುಂದುವರಿಸುತ್ತೇವೆ. ಒಂದಾದ ಮೇಲೆ ಒಂದರಂತೆ ನಾಮ ಸಮಾಧಿಗಳನ್ನು ಅಗಯುತ್ತೇವೆ. ಎಲ್ಲಾ ಕಾರ್ಯವು ತಾಳ್ಮೆಯಿಂದ, ನಿಷ್ಪಕ್ಷಪಾತವಾಗಿ ಸಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಇಷ್ಟು ಮಾತ್ರವಲ್ಲದೆ ಕೇವಲ ಸಮಾಧಿಯಾಗಿರುವ ಕಾರ್ಯದಿಂದ ಮಾತ್ರ ತನಿಖೆ ಸಾಗುವುದಲ್ಲ. ಇದರ ಹೊರತಾಗಿಯೂ ಎಸ್ಐಟಿ ಅನೇಕ ತನಿಖೆಗಳಲ್ಲಿ ನಿರತವಾಗಿದೆ. ಧರ್ಮಸ್ಥಳದಲ್ಲಿ ಎಸ್ಐಟಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಒಂದೆಡೆ ದೂರುದಾರನ ಜೊತೆ ಸ್ಥಳ ಮಹಜರು, ಗುರುತಿಸಿದ ಸ್ಥಳದ ಉತ್ಖನನ ನಡೆಯುತ್ತಿದೆ. ಮತ್ತೊಂದೆಡೆ ಎಸ್ಐಟಿ ಅಧಿಕಾರಿಗಳು ಧರ್ಮಸ್ಥಳ ಔಟ್ ಪೋಸ್ಟ್ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸರ ಪಟ್ಟಿಯನ್ನು ಕೇಳಿದೆ. ಧರ್ಮಸ್ಥದಲ್ಲಿ ಸಿಕ್ಕ ಅನಾಮಿಕ, ಅನಾಥ ಶವಗಳನ್ನು ಹೂತುಹಾಕುವಾಗ ಮಾಡಿದ ದಾಖಲೆ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಎಸ್ಐಟಿ ಕೆದಕುತ್ತಿದೆ. ಸೋ.. ನಾವು ಕೂಡ ತಾಳ್ಮೆಯಿಂದ ಕಾಯೋಣ. ತನಿಖೆಯ ಪ್ರತಿ ಪ್ರಗತಿಯನ್ನು ಎದುರು ನೋಡೋಣ. ಸತ್ಯ ಹೊರ ಬರಲಿ ಎಂದು ಮಂಜುನಾಥನಲ್ಲಿ ಬೇಡೋಣ.
ಇದನ್ನೂ ಓದಿ: Mumbai: ಹ್ಯಾಂಡ್‌ರೈಟಿಂಗ್ ಚೆನ್ನಾಗಿಲ್ಲ ಎಂದು ವಿದ್ಯಾರ್ಥಿಯ ಕೈ ಸುಟ್ಟ ಟ್ಯೂಷನ್ ಶಿಕ್ಷಕಿ
Comments are closed.