Malegaon Blast Case: ಮಾಲೇಗಾಂವ್ ಸ್ಪೋಟ ಪ್ರಕರಣ – ಆರೋಪಿಗಳಿಗೆ ಕ್ಲೀನ್ ಚೀಟ್ ನೀಡಿದ NIA – ಹಿಂದುಗಳು ಭಯೋತ್ಪಾದನಾ ಕೃತ್ಯ ಮಾಡೋದಿಲ್ಲ – ಯತ್ನಾಳ್ ಹೇಳಿಕೆ

Share the Article

Malegaon Blast Case: ಹಿಂದುಗಳು ಭಯೋತ್ಪಾದನಾ ಕೃತ್ಯ ಮಾಡೋದಿಲ್ಲ, ಅದು ಮತ್ತೊಮ್ಮೆ ಸಾಬೀತಾಗಿದೆ ಎಂದು ಮಾಲೇಗಾಂವ್ ಸ್ಪೋಟ ಪ್ರಕರಣ ಸಂಬಂಧ NIA ಆರೋಪಿಗಳಿಗೆ ಕ್ಲೀನ್ ಚೀಟ್ ನೀಡಿದ ಕುರಿತು ವಿಧಾನಸೌಧದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.

ಅಡ್ವಾಣಿ ಒಂದು ಮಾತು ಹೇಳಿದ್ರು, ಎಲ್ಲಾ ಮುಸ್ಲಿಂ ಭಯೋತ್ಪಾದಕಾರಲ್ಲ. ಆದರೆ ಭಯೋತ್ಪಾದಕರೆಲ್ಲಾ ಮುಸ್ಲಿಂ, ಹಿಂದುಗಳು ಎಂದು ಭಯೋತ್ಪಾದನಾ ಚಟುವಟಿಕೆ ನಡೆಸಲ್ಲ ಎಂದು ಹೇಳುತ್ತಿದ್ರು ಎಂದು ಯತ್ನಾಳ್ ಹೇಳಿದ್ದಾರೆ. ಮಾಲೇಗಾಂವ್ ಸ್ಫೋಟ ಪ್ರಕರಣ ಆದಾಗ ಯುಪಿಎ ಸರ್ಕಾರ ಇತ್ತು. ಹಿಂದೂ ಭಯೋತ್ಪಾದನೆ ಎಂಬ ವ್ಯಾಖ್ಯಾನ ಮಾಡುವ ಪ್ರಯತ್ನ ಮಾಡಿತ್ತು. ದೇಶದಲ್ಲಿ ಕಾಂಗ್ರೆಸ್ ಇವತ್ತಿನವರೆಗೂ ಹಿಂದೂಗಳನ್ನು ಟಾರ್ಗೆಟ್ ಮಾಡಿಕೊಂಡು ಬಂದಿದ್ದಾರೆ ಎಂದರು.

ಕಾಂಗ್ರೆಸ್ ಮಾನಸಿಕತೆ ಭಾರತದ ಜೊತೆಗಿಲ್ಲ. ಸುಶೀಲ್ ಕುಮಾರ್ ಶಿಂಧೆ ಹಿಂದೂ ಭಯೋತ್ಪಾದನೆ ಎಂದಿದ್ದಲ್ಲೆ ಅವರ ರಾಜಕೀಯ ಅಂತ್ಯವೇ ಆಯಿತು. ಭಯೋತ್ಪಾದಕ ಕೆಲಸವನ್ನು ಹಿಂದೂಗಳು ಎಂದೂ ಮಾಡಿಲ್ಲ. ಮುಂದೆ ಮಾಡೋದು ಇಲ್ಲ ಎಂದು ಅವರು ತಮ್ಮ ಅಭಿಪ್ರಯಾವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: Suicide: “ಅಮ್ಮಾ ನಾನೇ ಸಾಯ್ತೀನಿ, ಇಲ್ದಿದ್ರೆ ಅವ್ರೇ ಸಾಯಿಸ್ತಾರೆ” ತಾಯಿಗೆ ಮೆಸೇಜ್ ಕಳುಹಿಸಿ ತುಂಬು ಗರ್ಭಿಣಿ ಆತ್ಮಹತ್ಯೆ

Comments are closed.