Food Oil: ಇನ್ಮೇಲೆ ಅಡುಗೆ ಎಣ್ಣೆಯನ್ನು 6 ತಿಂಗಳಿಗೊಮ್ಮೆ ಗುಣಮಟ್ಟ ತಪಾಸಣೆ: ಆರೋಗ್ಯ ಇಲಾಖೆ ಸೂಚನೆ

Share the Article

Food Oil: ಅಡುಗೆ ಎಣ್ಣೆ ಮರುಬಳಕೆ ಮಾಡುತ್ತಿರುವ ಮಾಹಿತಿ ಬೆನ್ನಲ್ಲೇ ಆರೋಗ್ಯ ಇಲಾಖೆ ಹೊಸ (Department of Health) ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಎಣ್ಣೆ ಉದ್ದಿಮೆದಾರರು ಹಾಗೂ ಬೇಕರಿ, ಹೋಟೆಲ್‌ನವರಿಗೆ ಖಡಕ್ ನಿರ್ದೇಶನ ಹೊರಡಿಸಿದ್ದಾರೆ. ಈ ಮೂಲಕ ಅಡುಗೆ ಎಣ್ಣೆ ತಯಾರಿಕಾ ಘಟಕದವರು ಕಡ್ಡಾಯವಾಗಿ ಆರು ತಿಂಗಳಿಗೊಮ್ಮೆ ಗುಣಮಟ್ಟ ವಿಶ್ಲೇಷಣೆ ತಪಾಸಣೆ ಮಾಡಿಸಬೇಕು ಎಂದು ಸೂಚಿಸಿದೆ.

ರಾಜ್ಯದಲ್ಲಿ ಹೆಚ್ಚಾದ ಹೃದಯಘಾತ ಪ್ರಕರಣದ ಬಳಿಕ ಆರೋಗ್ಯ ಇಲಾಖೆ ಎಚ್ಚೆತ್ತಿದೆ. ಕೆಲ ಅಡುಗೆ ಎಣ್ಣೆಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳವಾಗಿ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕುರಿತು ತಜ್ಞರ ಜೊತೆ ಪರಾಮರ್ಶಿಸಿ ಆಹಾರ ಸುರಕ್ಷತಾ ಇಲಾಖೆಯಿಂದ ಸೂಚನೆ ನೀಡಿದೆ. ಸದ್ಯ 32,68,999 ಲೀಟರ್ ಬಳಕೆ ಮಾಡಿದ ಎಣ್ಣೆಯಿದ್ದು, ಸೂಕ್ತ ವಿಲೇವಾರಿ ಹಾಗೂ ಬಯೋ ಡಿಸೇಲ್ ಘಟಕಕ್ಕೆ ರವಾನಿಸಲು ತಿಳಿಸಿದೆ.

ಪ್ಯಾಕಿಂಗ್, ಲೇಬಲಿಂಗ್ ಸ್ವಚ್ಛತೆ, ಎ&ಡಿ ವಿಟಮಿನ್ ಇರುವ ಎಣ್ಣೆ ಮಾರಾಟ ಮಾಡುವಂತೆ ತಿಳಿಸಿದ್ದಾರೆ. ಜೊತೆಗೆ ಟ್ರಾನ್ಸ್ ಫ್ಯಾಟ್ ಕಡಿಮೆ ಇರುವ ಎಣ್ಣೆಯನ್ನು ಬಳಕೆ ಮಾಡಬೇಕು. ಒಂದು ಬಾರಿ ಉಪಯೋಗಿಸಿದ ಅಡುಗೆ ಎಣ್ಣೆಯನ್ನು ಮತ್ತೆ ಮರುಬಳಕೆ ಮಾಡಬಾರದು ಎಂದು ಹೋಟೆಲ್ ಬೇಕರಿಯವರಿಗೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ.

ಇದನ್ನೂ ಓದಿ: Dharmasthala Case: ಪಾಯಿಂಟ್‌ 6 ರಲ್ಲಿ ಕಳೇಬರ ಅವಶೇಷ ದೊರಕಿದ ಬೆನ್ನಲ್ಲೇ ಪಾಯಿಂಟ್‌ 1 ರಲ್ಲಿ ಸಿಕ್ಕಿದ್ದ ಪ್ಯಾನ್‌ಕಾರ್ಡ್‌ ರಹಸ್ಯ ಬಯಲು?

Comments are closed.