Auto Rate: ಬೆಂಗಳೂರು ಜನರಿಗೆ ಮತ್ತೊಂದು ದರ ಏರಿಕೆ ಬಿಸಿ..! ದುಬಾರಿಯಾಗಲಿದೆ ಆಟೋ ಪ್ರಯಾಣ!

Share the Article

Auto Rate: ಅತ್ಯಂತ ದುಬಾರಿ ನಗರ ಎಂದೇ ಖ್ಯಾತಿ ಹೋಂದಿರುವ ಬೆಂಗಳೂರು ಜನರಿಗೆ ಇದೀಗ ಮತ್ತೋಂದು ಬೆಲೆ ಏರಿಕೆ ಬಿಸಿ ತಟ್ಟಲಿದೆ. ನಗರದಲ್ಲಿ ದಿನ ನಿತ್ಯ ನೂರಾರು ಮಂದಿ ಓಡಾಟಕ್ಕೆ ಆಟೋ ಗಳನ್ನು ನೆಚ್ಚಿಕೋಮಡಿದ್ದಾರೆ. ಅವರುಗಳ ಸುಲಿಗೆಯ ಮಧ್ಯೆಯೂ ಇದಿಗ ನಾಳೆಯಿಂದ ಆಟೋ ಪ್ರಯಾಣ ದುಬಾರಿಯಾಗಲಿದೆ. ಆಗಸ್ಟ್ 1 ರಿಂದ ಆಟೋ ಪ್ರಯಾಣ ದರ ಏರಿಕೆಯಾಗಲಿದೆ ಎಂದು ವರದಿಯಾಗಿದೆ.

ಈ ಕುರಿತು ಈಗಾಗಲೇ ಆದೇಶ ಹೊರಡಿಸಿರುವ ಬೆಂಗಳೂರು ಜಿಲ್ಲಾಧಿಕಾರಿ, ಆಟೋ ಪ್ರಯಾಣ ದರ ಏರಿಕೆ ಮಾಡುವಂತೆ ಸತತವಾಗಿ ಬೇಡಿಕೆ ಇಡುತ್ತಾ ಬಂದಿದ್ದ ಚಾಲಕರ ಒತ್ತಾಯಕ್ಕೆ ಮಣಿದ ಜಿಲ್ಲಾಧಿಕಾರಿಗಳು, 2 ಕಿ.ಮೀಗೆ 36 ರೂಗೆ ಪ್ರಯಾಣ ದರ ಏರಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಹಾಗದ್ರೆ ನಾಳೆಯಿಂದ ಅಟೋ ಪರಿಷ್ಕೃತ ದರ ನೋಡೋದಾದ್ರೆ

– ಕನಿಷ್ಟ ಮೊದಲ 2 ಕಿ.ಮೀಗೆ 36ರೂಪಾಯಿ ಫಿಕ್ಸ್

– ನಂತರದ ಪ್ರತಿ ಕಿ.ಮೀಗೆ 18 ರೂಪಾಯಿ

– ಮೊದಲ ಐದು ನಿಮಿಷ ಕಾಯುವಿಕೆ ಉಚಿತ

– ಪ್ರತಿ ಹದಿನೈದು ನಿಮಿಷ ಕಾಯುವಿಕೆ ದರ‌ ರೂ 10

– 20 ಕೆ.ಜಿ ಲಗೇಜಿಗೆ ಉಚಿತ

– 20 ಕೆ.ಜಿ ಗಿಂತ ಹೆಚ್ಚಿದ್ದರೇ 10ರೂ ಲಗೇಜ್ ಶುಲ್ಕ

ರಾತ್ರಿ ವೇಳೆಯಲ್ಲಿ ಪ್ರಯಾಣಿಸಿದರೇ ಸಾಮಾನ್ಯ ದರ ಜೊತೆಗೆ ಅರ್ಧಪಟ್ಟು ಹೆಚ್ಚು ಹಣ ವಿಧಿಸಲು ಅವಕಾಶವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ರಾತ್ರಿ ಪ್ರಯಾಣದ ಸಮಯ ರಾತ್ರಿ 10ರಿಂದ ಬೆಳಗಿನ ಜಾವ 5ಗಂಟೆಯವರೆಗೆ ಮಾತ್ರ. ಈ ಹೊಸ ದರ ಏರಿಕೆಯ ಪಟ್ಟಿಯನ್ನ ಪ್ರತಿ ಆಟೋದ ಮೇಲೆ ಕಡ್ಡಾಯವಾಗಿ ಹಾಕಲು ಸೂಚನೆ ಮಾಡಲಾಗಿದೆ. ಪರಿಷ್ಕೃತ ದರದ ಹೊಸ ಮೀಟರ್‌ ಅನ್ನು ಅಕ್ಟೋಬರ್ 31-2025ರೊಳಗೆ ಹಾಕಿಸಿಕೊಳ್ಳುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ

ಇದನ್ನೂ ಓದಿ: Pratham Case: ನಟ‌ ಪ್ರಥಮ್ ಮೇಲೆ‌ ದರ್ಶನ್ ಅಭಿಮಾನಿಗಳಿಂದ ಹಲ್ಲೆಗೆ ಯತ್ನ ಪ್ರಕರಣ – ಸಾಕ್ಷಿಗಳಿಗೆ ಹಾಗೂ ಆರೋಪಿಗಳಿಗೆ ಪೊಲೀಸರಿಂದ ನೋಟಿಸ್

Comments are closed.