Shivrajkumar: ದರ್ಶನ್ ಅಭಿಮಾನಿಗಳ ವಿರುದ್ಧ ಸಮರ – ರಮ್ಯಾ ಪರ ನಿಂತ ಶಿವರಾಜ್ ಕುಮಾರ್ ಕಾಲೆಳೆದ ದೊಡ್ಮನೆ ಸೊಸೆ!!

Share the Article

Shivrajkumar : ತನ್ನ ವಿರುದ್ಧ ತೀರಾ ಕೊಳಕು ಕಾಮೆಂಟ್ಗಳನ್ನು ಮಾಡಿದ ನಟ ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಕೊನೆಗೂ ದೂರು ದಾಖಲಿಸಿದ್ದಾರೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಸಿಬಿಗೆ ವಹಿಸಿದೆ. ಇದರ ಬೆನ್ನಲ್ಲೇ ಚಿತ್ರರಂಗದ ಅನೇಕ ನಟ ನಟಿಯರು ರಮ್ಯಾ ಪರ ವಕಾಲತ್ತು ವಹಿಸಿದ್ದಾರೆ. ಅಂತಯೇ ಕನ್ನಡದ ಹ್ಯಾಟ್ರಿಕ್ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಯುವರಾಜಕುಮಾರ್ ಕೂಡ ನಟಿ ರಮ್ಯಾ ಪರ ನಿಂತಿದ್ದಾರೆ.

ಹೌದು, ನಟ ದರ್ಶನ್ ಫ್ಯಾನ್ಸ್ ವಿರುದ್ಧ ಏಕಾಂಗಿ ಆಗಿ ಗುಡುಗಿದ್ದ ನಟಿ ರಮ್ಯಾಗೆ ಈ ವಿಚಾರದಲ್ಲಿ ಮಹಿಳಾ ಆಯೋಗ ಸೇರಿದಂತೆ ಒಬ್ಬೊಬ್ಬರಾಗಿ ಬೆಂಬಲ ನೀಡುತ್ತಿದ್ದಾರೆ. ಇದೀಗ ಸ್ಯಾಂಡಲ್ವುಡ್ ನಟ ಚಕ್ರವರ್ತಿ ಶಿವರಾಜಕುಮಾರ್ ಕೂಡ ಬೆಂಬಲ ನೀಡಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಆದರೆ, ರಾಘವೇಂದ್ರ ರಾಜ್‌ಕುಮಾರ್ ಅವರ ಮಗ ಯುವ ರಾಜ್‌ಕುಮಾರ್ ಅವರ ಪತ್ನಿ ಶ್ರೀದೇವಿ ಬೈರಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ದೊಡ್ಮನೆ ಕುಟುಂಬದ ನಡೆಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಯಸ್, ಶ್ರೀದೇವಿ ಭೈರಪ್ಪ ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಂಚಿಕೊಂಡಿದ್ದು, ‘ಮಹಿಳೆಯರನ್ನು ಅವಮಾನಿಸುವುದರ ವಿರುದ್ಧ ಮಾತನಾಡುವುದು ನೋಡುವಾಗ, ತಮ್ಮ ಕುಟುಂಬದಲ್ಲೇ ಇದೆಲ್ಲ ನಡೆಯುವಾಗ ಮಾನತಾಡದೇ ಸುಮ್ಮನೆ ಇದ್ರಲ್ಲ, ಅವಾಗ ನಿದ್ದೆ ಮಾಡ್ತಾ ಇದ್ರ ಎಲ್ಲಾ??!’ ಎಂದಿದ್ದಾರೆ. ಜತೆಗೆ ಈ ಪೋಸ್ಟ್‌ನ ಕೊನೆಯಲ್ಲಿ #Hypocrites #Drama ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವ ಮೂಲಕ ಶಿವಣ್ಣನ ಕಾಲೆಳೆಯುವ ಯತ್ನ ಮಾಡಿದ್ದಾರೆ.

ಇದನ್ನೂ ಓದಿ: 8th pay commission: 8ನೇ ವೇತನ ಆಯೋಗ ಯಾವಾಗ ಜಾರಿಯಾಗುತ್ತೆ? ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ ಎಷ್ಟು ಏರಿಕೆಯಾಗುತ್ತೆ?

Comments are closed.