Dharmasthala burial Case:ಧರ್ಮಸ್ಥಳ ಪ್ರಕರಣ – ಮೂರನೇ ಸ್ಟಾಟ್‌ನತ್ತ ಶೋಧ ಕಾರ್ಯ – ಸ್ಥಳ ಸ್ವಚ್ಚಗೊಳಿಸುತ್ತಿರುವ ಕಾರ್ಮಿಕರು

Dharmasthala burial Case: ಧರ್ಮಸ್ಥಳದಲ್ಲಿ (Dharmasthala) ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ದಿನದ ಉತ್ಪನನ ಕಾರ್ಯ ಇಂದು ಬೆಳಿಗ್ಗೆ ಆರಂಭಗೊಂಡಿದ್ದು, ಎರಡನೇ ಸ್ಪಾಟ್‌ನಲ್ಲಿ ಸುಮಾರು 2-3 ಗಂಟೆಗಳ ಕಾಲ ನಡೆದ ಕಾರ್ಯಚರಣೆಯಲ್ಲಿ ಯಾವುದೇ ಕುರುಹು ಪತ್ತೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಮೂರನೇ ಸ್ಪಾಟ್ ಲ್ಲಿ ಕಾರ್ಯಚರಣೆ ನಡೆಸಲು ಆರಂಭಿಸಲಾಗುತ್ತಿದೆ.

ಮೂರನೇ ಸ್ಪಾಟ್‌ನ ಸುತ್ತಮುತ್ತ ಇರುವ ಗಿಡಗಂಟಿಗಳನ್ನು ಇದೀಗ ಕಾರ್ಮಿಕರು ಸ್ವಚ್ಛ ಮಾಡಲಾಗುತಿದೆ. ದೂರುದಾರ ಒಂದು ಹಾಗೂ ಎರಡನೇ ಸ್ಥಳದಲ್ಲಿ ಅಸ್ತಿ ಪಂಜರ ಸಿಗದ ಹಿನ್ನೆಲೆಯಲ್ಲಿ 9, 10, 11 ಸ್ಥಳಗಳಲ್ಲಿ ಉತ್ಖನನ ಮಾಡಿ ಎಂದು ಕೇಳಿಕೊಂಡಿದ್ದಾನೆ. ಆದರೆ ಎಸ್‌ಐಟಿ ತಂಡ ಮೊದಲಿನಿಂದ ಗುರುತು ಮಾಡಿದ ಪ್ರಕಾರವೇ ಶೋಧ ಕಾರ್ಯ ಮಾಡುವುದಾಗಿ ಎಸಿ ವರ್ಗೀಸ್ ಸೂಚನೆ ನೀಡಿದ್ದಾರೆ.
Comments are closed.