Just Asking: ಜಸ್ಟ್‌ ಆಸ್ಕಿಂಗ್, ನೀವು ಜನ ಪ್ರತಿನಿಧಿಗಳಾ ಅಥವಾ ಇನ್ಯಾರದೋ ದಲ್ಲಾಳಿಗಳಾ – ಆರ್‌ ಆಶೋಕ್‌ ಹೇಳಿಕೆ ವಿರುದ್ಧ ಪ್ರಕಾಶ್‌ ರಾಜ್ ಆಕ್ರೋಶ

Share the Article

Just Asking: ಧರ್ಮಸ್ಥಳ ಪ್ರಕರಣ ಕೇಳಿ ಬಂದಾಗಿಂದ ಯಾಕೋ ಬಿಜೆಪಿ ಹಾಗೂ ಹಿಂದುತ್ವವನ್ನೇ ತಮ್ಮ ಅಜೆಂಡವನ್ನಾಗಿ ಮಾಡಿಕೊಂಡಿರುವ ಅನೇಕ ನಾಯಕರು ನೊಂದವರ ಪರ ನಿಲ್ಲದೆ ಯಾರ ಮೇಲೆ ಆರೋಪ ಕೇಳಿ ಬಂದಿದೆಯೋ ಅವರ ಪರ ನಿಲ್ಲುವ ದೃಢ ನಿರ್ಧಾರವನ್ನು ಮಾಡಿಕೊಂಡಿದ್ದಾರೆ. ಇಡೀ ದೇಶವೇ ಬೆಚ್ಚಿ ಬೀಳಿಸುವ ಪ್ರಕರಣ ನಡೆದರೂ ಬಿಜೆಪಿಯವರೂ ಇದಾವುದಕ್ಕೂ ತಲೆ ಕೆಡಿಸಿಕೊಂಡಂತೆ ಕಂಡಿಲ್ಲ. ನಿನ್ನೆ ಧರ್ಮಸ್ಥಳ ಪ್ರಕರಣದ ಕುರಿತಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಮ್ಮ ಎಂದಿನ ಹಿಂದುತ್ವ ಅಜಂಡದ ಮೇಲೆಯೇ ಹೇಳಿಕೆಯನ್ನು ಕೊಟ್ಟಿದ್ದಾರೆ.

ಆರ್‌ ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರಾಜ್, “ನೀವು ಜನ ಪ್ರತಿನಿಧಿಗಳಾ ಅಥವಾ ಇನ್ಯಾರದೋ ದಲ್ಲಾಳಿಗಳಾ” ಎಂದು ಪ್ರಶ್ನಿಸಿದ್ದಾರೆ.

https://x.com/prakashraaj/status/1950194458684768400/photo/1

ಈ ಬಗ್ಗೆ ಅವರು ತಮ್ಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಶ್ರೀ ಆಶೋಕ್ ಅವರೆ, ದಶಕಗಳಿಂದ ನಮ್ಮ ಹೆಣ್ಣುಮಕ್ಕಳ ಅತ್ಯಾಚಾರಗಳಾಗಿವೆ, ಅಮಾನವೀಯ ಹತ್ಯೆಗಳಾಗಿವೆ, ಜನರ ಆಕ್ರೋಶ ಭುಗಿಲೆದ್ದಿದೆ. ಕೊನೆಗೂ ಸರ್ಕಾರ ಸ್ಪಂದಿಸಿ SIT ರಚನೆಯಾಗಿದೆ. ತನಿಖೆ ನಡೆಯುತ್ತಿದೆ. ಮದ್ಯದಲ್ಲಿ ನಿಮೇನ್ರಿ. ನೀವು ಜನ ಪ್ರತಿನಿಧಿಗಳಾ.. ಅಥವಾ ಇನ್ಯಾರದೋ ದಲ್ಲಾಳಿಗಳಾ.. #justasking” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಧರ್ಮಸ್ಥಳದಲ್ಲಿ ಹತ್ಯಾಕಾಂಡವೇ ನಡೆದಿದೆ ಎಂಬ ಆರೋಪ ಮಾಡಿರುವ ದೂರುದಾರ ವ್ಯಕ್ತಿ ಒಬ್ಬ ಮುಸ್ಲಿಂ. ಆತನ ಹಿಂದೆ ಕೇರಳ ಸರಕಾರ ಇದೆ. ಅವರಿಗ್ಯಾಕೆ ಈ ಪ್ರಕರಣದಲ್ಲಿ ಅಷ್ಟೊಂದು ಮುತುವರ್ಜಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾಧ್ಯಮದವರ ಮುಂದೆ ಆರೋಪಿಸಿದ್ದರು.

ಇದನ್ನೂ ಓದಿ: Dharmasthala : ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಕೇಸ್ ಗೆ ಟ್ವಿಸ್ಟ್- ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ತಳಕು!!

Comments are closed.