Trump: ನನ್ನ ಕೋರಿಕೆಯ ಮೇರೆಗೆ ಭಾರತ ಪಾಕ್ ಜತೆಗಿನ ಯುದ್ಧ ಕೊನೆಗೊಳಿಸಿತು: ಪ್ರಧಾನಿ ಮೋದಿ ಭಾಷಣದ ನಂತರ ಟ್ರಂಪ್

Trump: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ ಕೀರ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಮ್ಮದಾಗಿಸಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಜಾರಿಗೆ ತಂದಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿಕೊಂಡಿದ್ದಾರೆ. “ಭಾರತ ನನ್ನ ಸ್ನೇಹಿತ. ನನ್ನ ಕೋರಿಕೆಯ ಮೇರೆಗೆ ಅವರು ಪಾಕಿಸ್ತಾನದೊಂದಿಗಿನ ಯುದ್ಧವನ್ನು ಕೊನೆಗೊಳಿಸಿದರು” ಎಂದು ಅವರು ಹೇಳಿದರು. ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಮಂಗಳವಾರ, “ಜಗತ್ತಿನ ಯಾವುದೇ ನಾಯಕರು ಆಪರೇಷನ್ ಸಿಂಧೂರ್ ನಿಲ್ಲಿಸುವಂತೆ ಕೇಳಲಿಲ್ಲ” ಎಂದು ಹೇಳಿದ್ದರು.

ಲೋಕಸಭೆಯಲ್ಲಿ ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ್ ಕುರಿತ ಚರ್ಚೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ಪ್ರತಿಯೊಂದು ಪ್ರಶ್ನೆಯನ್ನೂ ತೀವ್ರವಾಗಿ ಟೀಕಿಸಿದರು. ಪಾಕಿಸ್ತಾನದೊಂದಿಗಿನ ಕದನ ವಿರಾಮದ ನಿರ್ಧಾರವನ್ನು ಯಾವುದೇ ದೇಶದ ಒತ್ತಡದಿಂದ ತೆಗೆದುಕೊಳ್ಳಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ಯುದ್ಧವನ್ನು ನಿಲ್ಲಿಸುವಂತೆ ಮನವಿ ಮಾಡಲು ಪ್ರಾರಂಭಿಸಿದರು, ನಂತರ ಕದನ ವಿರಾಮ ಜಾರಿಗೆ ಬಂದಿತು ಎಂದು ಪ್ರಧಾನಿ ಮೋದಿ ಸದನದಲ್ಲಿ ವಿರೋಧ ಪಕ್ಷದ ಸಂಸದರಿಗೆ ತಿಳಿಸಿದರು. ಆದರೆ ಪ್ರಧಾನಿ ಮೋದಿ ಭಾಷಣ ಮಾಡಿದ ಕೆಲವೇ ಗಂಟೆಗಳ ನಂತರ, ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತೊಮ್ಮೆ ಭಾರತ-ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಿದ ಕೀರ್ತಿಯನ್ನು ತಾವೇ ಸಲ್ಲಿಸಿದರು.
ನನ್ನ ಕೋರಿಕೆಯ ಮೇರೆಗೆ ಭಾರತ ಪಾಕಿಸ್ತಾನದೊಂದಿಗಿನ ಯುದ್ಧವನ್ನು ನಿಲ್ಲಿಸಿತು: ಟ್ರಂಪ್
ಏರ್ ಫೋರ್ಸ್ ಒನ್‌ನಲ್ಲಿ ಮಾಧ್ಯಮಗಳೊಂದಿಗೆ ಸಂವಹನ ನಡೆಸುವಾಗ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ಭಾರತ ನನ್ನ ಸ್ನೇಹಿತ. ನನ್ನ ಕೋರಿಕೆಯ ಮೇರೆಗೆ ಅವರು ಪಾಕಿಸ್ತಾನದೊಂದಿಗಿನ ಯುದ್ಧವನ್ನು ಕೊನೆಗೊಳಿಸಿದರು. ಟ್ರಂಪ್ ಈ ಮಾತನ್ನು ಪುನರಾವರ್ತಿಸುತ್ತಿರುವುದು ಇದೇ ಮೊದಲಲ್ಲ. ಹಲವು ಸಂದರ್ಭಗಳಲ್ಲಿ, ಕದನ ವಿರಾಮದ ಕೀರ್ತಿಯನ್ನು ಅವರು ಸ್ವತಃ ಅವರಿಗೇ ನೀಡಿ ಕೊಂಡಿದ್ದಾರೆ.
ಭಾರತದೊಂದಿಗಿನ ವ್ಯಾಪಾರ ಒಪ್ಪಂದ ಇನ್ನೂ ಪೂರ್ಣಗೊಂಡಿಲ್ಲ. ಭಾರತ ಉತ್ತಮ ಸ್ನೇಹಿತನಾಗಿದ್ದರೂ, ಭಾರತ ಮೂಲತಃ ಯಾವುದೇ ಇತರ ದೇಶಗಳಿಗಿಂತ ಹೆಚ್ಚಿನ ಸುಂಕಗಳನ್ನು ವಿಧಿಸಿದೆ ಮತ್ತು ಈಗ ಭಾರತವು 20-25% ರಷ್ಟು ಹೆಚ್ಚಿನ ಸುಂಕಗಳನ್ನು ಪಾವತಿಸಲಿದೆ” ಎಂದು ಹೇಳಿದರು.
ಇದನ್ನೂ ಓದಿ: Rishab Shetty: ಹೊಸ ಚಿತ್ರ ಘೋಷಣೆ ಮಾಡಿದ ರಿಷಬ್ ಶೆಟ್ಟಿ
Comments are closed.