Dharmasthala : ಶವ ಹೂತಿಟ್ಟ ಪ್ರಕರಣ – 2ನೇ ಸಮಾಧಿಯಲ್ಲೂ ಪತ್ತೆಯಾಗದ ಕಳೇಬರ, ಅಗೆತ ಮುಕ್ತಾಯ!!

Share the Article

Dharmasthala : ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ದಿನ ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಎಂಟು ಅಡಿ ಅಗೆದರು ಕೂಡ ಯಾವುದೇ ಕುರುಹು ಪತ್ತೆಯಾಗಿಲ್ಲ. ಇಂದು ಕೂಡ ಅಗೆಯುವ ಕಾರ್ಯ ಮುಂದುವರೆದಿದ್ದು ಇದೀಗ ಏಕಕಾಲದಲ್ಲಿ SIT ಮೂರು ಜಾಗ ಅಗೆಸುತ್ತಿದೆ. ಆದರೆ ನಿನ್ನೆಯಂತೆ ಇದು ಕೂಡ ಎರಡನೇ ಸಮಾಧಿ ಸ್ಥಳದಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.

ಹೌದು, ನಿನ್ನೆ ಅನಾಮಿಕ ತೋರಿದ ಮೊದಲ ಸಮಾಧಿ ಸ್ಥಳವನ್ನು ನಿನ್ನೆ (ಜು.29)ರಂದು ಅಗೆಯಲಾಗಿತ್ತು. ಆದರೆ ಯಾವುದೇ ಕಳೇಬರ ಪತ್ತೆಯಾಗಿರಲಿಲ್ಲ. ಇಂದು (ಜು.30) ದೂರುದಾರ ಗುರುತಿಸಿದ 2ನೇ ಸಮಾಧಿ ಸ್ಥಳ ಅಗೆಯಲಾಗಿದೆ. ಆದರೆ ಎರಡನೇ ಸಮಾಧಿಯಲ್ಲೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.

ನೇತ್ರಾವತಿ ಸ್ನಾನಘಟ್ಟದ ಪಕ್ಕದಲ್ಲೇ ಇರುವ ಕಾಡಿನ ಪ್ರವೇಶದ ಬಳಿ 2ನೇ ಸಮಾಧಿ ಸ್ಥಳ ಗುರುತಿಸಲಾಗಿತ್ತು. ಇಂದು ಕಾರ್ಮಿಕರು 6 ಅಡಿ ಆಳದವರೆಗೆ ಸಮಾಧಿ ಸ್ಥಳ ಅಗೆದಿದ್ದಾರೆ. ಆದರೆ ಯಾವುದೇ ಕಳೇಬರಹ ಪತ್ತೆಯಾಗಿಲ್ಲ. ಹೀಗಾಗಿ 2ನೇ ಸಮಾಧಿ ಸ್ಥಳದ ಉತ್ಖನನ ಕಾರ್ಯ ಅಂತ್ಯಗೊಳಿಸಲಾಗಿದೆ.

ಇದನ್ನೂ ಓದಿ: Elephant Attack: ಚಿಕ್ಕಮಗಳೂರು ಆನೆ ದಾಳಿ ಸಾವು – ಆನೆ ದೊಡ್ಡಿ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ

Comments are closed.